ಜಿಲ್ಲೆಗಳು

ನಂಜನಗೂಡು : ಮಗನ ಸಾವಿಗೆ ನ್ಯಾಯ ಕೋರಿ ದಂಪತಿ ಪ್ರತಿಭಟನೆ

ನಂಜನಗೂಡು :  ಎರಡು ವರ್ಷಗಳ ಹಿಂದೆ ರಸ್ತೆ ಅಫಘಾತದಲ್ಲಿ ಮೃತನಾದ ಮಗನ ಸಾವಿಗೆ ಕಾರಣನಾದ ಆರೋಪಿಯನ್ನು ಈವರೆಗೂ ಬಂಧಿಸಿಲ್ಲ ಎಂದು ಆರೋಪಿಸಿ ಇಲ್ಲಿನ ಪುರಸಭೆಯ ಮಾಜಿ ಸದಸ್ಯರಾದ, ಬಿಜೆಪಿ ಮುಖಂಡರಾದ ಮಹೇಶ್ ಕುಮಾರ್ ಹಾಗೂ ಸುಧಾ ಮಹೇಶ್ ಕುಮಾರ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಪಾನಮತ್ತನಾಗಿ ಕಾರು ಚಲಾಯಿಸಿ ತಮ್ಮ ಮಗನ ಬೈಕಿಗೆ ಹಿಂಬದಿಯಿಂದ ಗುದ್ದಿ ಅಪಘಾತವೆಸಗಿದ ದಿಲೀಪ ಜೈನ್ ಎಂಬಾತನನ್ನು ಬಂಧಿಸಿ ಮಗನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಗೋವಿಂದರಾಜು ಆರೋಪಿಯನ್ನು ಪತ್ತೆಹಚ್ಚಲು ಇಲಾಖೆ ಈವರೆಗೆ ಕೈಗೊಂಡಿದ್ದ ಕ್ರಮಗಳನ್ನು ವಿವರಿಸಿದರು. ಆದರೆ, ವಾಹನಗಳೇ ಓಡಾಡದ ಕೊರೊನಾ ಸಮಯದಲ್ಲಿ ಆರೋಪಿ ಇಲ್ಲಿಂದ ಪರಾರಿಯಾಗಲು ಯಾರು ಕಾರಣ? ಆತ ಪರಾರಿಯಾದ ತಿಂಗಳಲ್ಲಿ ಆತನ ಕುಟುಂಬವೇ ತವರಿಗೆ ತೆರಳಿದೆ. ಆತನನ್ನು ಬಂಧಿಸಲು ಇಲಾಖೆ ಬದ್ಧವಾಗಿದೆಯೇ ಎಂದು ದಂಪತಿ ಪ್ರಶ್ನಿಸಿದರು. ನಂತರ ಎಎಸ್‌ಪಿ ನಂದಿನಿ ಮತ್ತು ಮುಖಂಡ ಯು.ಎನ್.ಪದ್ಮನಾಭರಾವ್ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಲು ಯತ್ನಿಸಿದರು. 1 ತಿಂಗಳಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟಿ ತರುವುದಾಗಿ ನಂದಿನಿಯವರು ನೀಡಿದ ಭರವಸೆ ಮೇರೆಗೆ ಪ್ರತಿಭಟನೆಯನ್ನು ಮಹೇಶ ಕುಮಾರ್ ದಂಪತಿ ವಾಪಸ್ ಪಡೆದರು.

ಪ್ರತಿಭಟನೆಗೆ ಪುರಸಭೆಯ ಮಾಜಿ ಸದಸ್ಯರಾದ ಬಿಜೆಪಿಯ ಮಂಗಳ(ಗಜಾ), ಕೆ.ಜಿ.ಆನಂದ, ಹಾಲಿ ಸದಸ್ಯ ಸತ್ಯನಾರಾಯಣ ಕದಂ, ಪ್ರದೀಪ, ನಂಜನಗೂಡು ವಕೀಲರ ಸಂಘದ ಅಧ್ಯಕ್ಷ ಸುರೇಶ, ಮುರಳಿ, ನಾಗರಾಜು, ಉಮೇಶ (ಮೋದಿ) ಮಂಜುನಾಥ, ಗೋಪಿ ಇತರರು ಭಾಗಿಯಾಗಿದ್ದರು.

 

 

andolanait

Recent Posts

ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನಿಂದ ಹಿಟ್‌ ಅಂಡ್‌ ರನ್:‌ ಸವಾರ ಸಾವು

ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವನ್ನಪ್ಪಿರುವ…

27 mins ago

ಯೂನಿಟಿ ಮಾಲ್‌ ನಿರ್ಮಾಣಕ್ಕೆ ತಡೆ ವಿಚಾರ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಮಾಧ್ಯಮ ಹೇಳಿಕೆ ಬಿಡುಗಡೆ

ಮೈಸೂರು: ಯೂನಿಟಿ ಮಾಲ್‌ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…

37 mins ago

ಬೆಳಗಾವಿ ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗುತ್ತಾರೆ: ಶಾಸಕ ಇಕ್ಬಾಲ್‌ ಹುಸೇನ್‌

ಬೆಳಗಾವಿ: ಬೆಳಗಾವಿ ಅಧಿವೇಶನದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

45 mins ago

ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 377 ರೈತರ ಆತ್ಮಹತ್ಯೆ

ಬೆಂಗಳೂರು: ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟು 377 ಪ್ರಕರಣಗಳ ಪೈಕಿ…

1 hour ago

ಫಲಿತಾಂಶ ಯಶಸ್ವಿಗೊಳಿಸಲು ಶಾಲೆಯಲ್ಲೇ ವಾಸ್ತವ್ಯ ಹೂಡಿದ ಬಿಇಓ

ಎಚ್.ಡಿ.ಕೋಟೆ: ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಕಾಡಂಚಿನ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯ ಹಮ್ಮಿಕೊಂಡಿದ್ದಾರೆ. ತಾಲ್ಲೂಕಿನ ಗಡಿಭಾಗದ…

2 hours ago

ದೊಡ್ಡಕವಲಂದೆಯಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿಗಳು: ಸಾಂಕ್ರಾಮಿಕ ರೋಗದ ಭೀತಿ

ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ…

2 hours ago