ಜಿಲ್ಲೆಗಳು

ಮಹಾರಾಣಿ ವಿಜ್ಞಾನ ಕಾಲೇಜು ಗೋಡೆ ಕುಸಿತ, ಸ್ವಲ್ಪದರಲ್ಲೇ ತಪ್ಪಿದ ದುರಂತ

ಭಾರೀ ಮಳೆಯಿಂದ ನಗರದಲ್ಲಿ 106 ವರ್ಷಗಳ ಮತ್ತೊಂದು ಪಾರಂಪರಿಕ ಕಟ್ಟಡಕ್ಕೆ ಧಕ್ಕೆ,
ಮೈಸೂರು: ಸಾಂಸ್ಕೃತಿಕ ನಗರದ ಆಕರ್ಷಣೆಯಾದ ಅರಮನೆ ಕೋಟೆಯ ಗೋಡೆ ಕುಸಿದು ಬಿದ್ದ ಬೆನ್ನಿಗೇ ನಗರ ಇನ್ನೊಂದು ಪಾರಂಪರಿಕ ಕಟ್ಟಡ ಶುಕ್ರವಾರ ಬೆಳಿಗ್ಗೆ ಕುಸಿದ್ದು ಬಿದ್ದಿದೆ.


ನಗರದ ಜೆಎಲ್ ಬಿ ರಸ್ತೆಯಲ್ಲಿರುವ 106 ವರ್ಷಗಳ ಇತಿಹಾಸವಿರುವ ಮಹಾರಾಣಿ ವಿಜ್ಞಾನ ಕಾಲೇಜಿನ ಪಾರಂಪರಿಕ ಕಟ್ಟಡದ ಗೋಡೆ ಕುಸಿದು ಬಿದ್ದಿದ್ದು, ಭಾರಿ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ರಸಾಯನ ವಿಜ್ಞಾನ ಮತ್ತು ಪ್ರಾಣಿ ವಿಜ್ಞಾನ ವಿಭಾಗದ ಪ್ರಯೋಗಾಲಯದ ಪರಿಕರಗಳೆಲ್ಲವೂ ಮಣ್ಣಿನಡಿ ಸೇರಿದ್ದು ಸುಮಾರು 40 ಲಕ್ಷರೂ. ನಷ್ಟ ಅಂದಾಜಿಸಲಾಗಿದೆ.
ಬೆಳಿಗ್ಗೆ ತರಗತಿಗಳು ಆರಂಭವಾಗುವ ಹೊತ್ತಿಗೇ ಈ ಕಟ್ಟಡ ಕುಸಿದಿದ್ದು ಕಟ್ಟಡ ಬಿರುಕು ಬಿಡುತ್ತಿರುವುದನ್ನು ಮೊದಲೇ ಗಮನಿಸಿದ್ದರಿಂದ ಸಂಭಾವ್ಯ ದುರಂತ ತಪ್ಪಿದೆ. ಶಿಥಿಲವಾಗಿದ್ದ ಕಟ್ಟಡದಲ್ಲಿ ರಸಾಯನ ವಿಜ್ಞಾನ ಪ್ರಯೋಗಾಲಯದ ಕೊಠಡಿ ಇದ್ದು ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿಗಳು ಪ್ರಯೋಗಕ್ಕೆ ಬರಬೇಕಿತ್ತು. ಆದರೆ ಬಿರುಕು ಮೂಡಿದ್ದನ್ನು ಗಮನಿಸಿದ ವಿಭಾಗದ ಮುಖ್ಯಸ್ಥ ಕೆ.ಕೆ.ಪದ್ಮನಾಭ ಅವರು ತಕ್ಷಣ ವೇಳೆ ಪ್ರಾಂಶುಪಾಲರ ಗಮನಕ್ಕೆ ತಂದರು. ಪ್ರಾಂಶುಪಾಲ ಡಾ.ಡಿ.ರವಿ ಅವರು ಧಾವಿಸಿ ಬಂದು ಕೊಠಡಿಗೆ ಬೀಗ ಹಾಕಿಸಿದ್ದಲ್ಲದೆ, ಎಲೆಕ್ಟ್ರಿಕ್ ಸಂಪರ್ಕವನ್ನು ಕಡಿತಗೊಳಿಸಿದರು. ಕಟ್ಟಡದ ಒಳಗೆ ಯಾರೂ ಪ್ರವೇಶಿಸದಂತೆ ಸೂಚಿಸಲಾಗಿದೆ ಹಾಗೂ ಘಟನೆಯ ಹಿನ್ನೆಲೆ 2 ದಿನಗಳ ಕಾಲ ಕಾಲೇಜಿಗೆ ರಜೆಯನ್ನು ಘೋಷಿಸಲಾಗಿದೆ.


ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಟ್ಟಡದ ಹೊರಗಡೆ ಬರುತ್ತಿದ್ದಂತೆಯೇ 10.30ರಿಂದ 10.45ರ ಒಳಗೆ ಪ್ರಯೋಗಾಲಯದ ಭಾಗವು ಕುಸಿದಿದೆ. ಪ್ರಾಂಶುಪಾಲರ ಸಕಾಲಿಕ ಮುನ್ನೆಚ್ಚರಿಕೆಯಿಂದ ಸಂಭಾವ್ಯ ದುರಂತ ಸ್ವಲ್ಪದರಲ್ಲೇ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿ, ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಗೋವಿಂದ್‌ ರಾಜ್‌ ಅವರು ಆಂದೋಲನ ಡಿಜಿಟಲ್ಗೆ ತಿಳಿಸಿದರು. .ಪಾರಂಪರಿಕ ಕಟ್ಟಡದ ದುರಸ್ತಿಗಾಗಿ ಸರಕಾರ ಈಗಾಗಲೇ ಎರಡು ಕೋಟಿ ರೂ. ಬಿಡುಗಡೆ ಮಾಡಿದೆ. ಕಾಮಗಾರಿಯ ಭೂಮಿಪೂಜೆ ಅ.23ರ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಿರುಕುಗಳು ಹೆಚ್ಚಾಗಿದ್ದವು ಎಂದು ಪ್ರಾಂಶುಪಾಲ ಡಾ.ರವಿ ಅವರು ತಿಳಿಸಿದ್ದಾರೆ.
ಐತಿಹಾಸಿಕ ಕಟ್ಟಡ ಮಹಾರಾಜ 10ನೇ ಚಾಮರಾಜೇಂದ್ರ ಒಡೆಯರ್ ಅವರ ಪತ್ನಿ ಕೆಂಪನಂಜಮ್ಮಣಿಯವರಿಗಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗಗಳೊಂದಿಗೆ ಮಹಾರಾಣಿ ಹುಡುಗಿಯರ ಶಾಲೆಯನ್ನು 1881 ರ ಮಾರ್ಚ್ 16 ರಂದು ಪ್ರಾರಂಭಿಸಲಾಗಿತ್ತು. 1902 ರಲ್ಲಿ ಈ ಶಾಲೆಯು ಮಹಾರಾಣಿ ಕಾಲೇಜ್ ಆಗಿ ಮೇಲ್ದರ್ಜೆಗೇರಿತ್ತು.

ಪ್ರಸ್ತುತ ಕಟ್ಟಡವನ್ನು1916ರಲ್ಲಿ ಕಟ್ಟಲಾಗಿತ್ತು. ಮೊದಲು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿದ್ದ ಕಾಲೇಜು 1920 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಯಿತು. 1979 ರಲ್ಲಿ ಇದನ್ನು ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಮಹಾರಾಣಿ ಕಲಾ ಕಾಲೇಜು ಎಂದು ಎರಡು ಪ್ರತ್ಯೇಕ ಕಾಲೇಜುಗಳಾಗಿ ವಿಭಜಿಸಲಾಯಿತು. ಈಗ ಕಾಲೇಜು ಸ್ವಾಯತ್ತೆ ಪಡೆದಿದ್ದು ಸುಮಾರು 3850 ವಿದ್ಯಾರ್ಥಿನಿಯರಿಗೆ ಜ್ಞಾನಾರ್ಜನೆ ಕೇಂದ್ರವಾಗಿದೆ. ಇವರಲ್ಲಿ ಬಹುತೇಕರು ಮೈಸೂರಿನ ಹಳ್ಳಿ ಭಾಗದಿಂದ ಬರುತ್ತಿರುವ ವಿದ್ಯಾರ್ಥಿನಿಯರಾಗಿದ್ದಾರೆ. ಇಲ್ಲಿ 350ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ ಇದ್ದು ಸ್ನಾತಕೋತ್ತರ ಮತ್ತು ಪದವಿ ಸೇರಿ 30ಕ್ಕೂ ಹೆಚ್ಚು ವಿಭಾಗಗಳಿವೆ.

andolanait

Recent Posts

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

43 mins ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

50 mins ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

2 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

3 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

3 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

4 hours ago