ಮೈಸೂರ : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾಲಯ ಮೈದಾನದಲ್ಲಿ ಇಂದು ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಆಗಮಿಸಿದ್ದ ಶ್ವಾನಗಳನ್ನು ಕಂಡ ಜನರು ಕುತೂಹಲದಿಂದ ವೀಕ್ಷಿಸಿ ಪ್ರಪಂಚದಲ್ಲಿ ಇಂಥ ತಳಿಯ ನಾಯಿಗಳಿವೆಯೇ ಎಂದು ಆಶ್ಚರ್ಯ ಪಟ್ಟರು.
ಶ್ವಾನ ಪ್ರದರ್ಶನಕ್ಕೆ ಬಂದಿದ್ದ ಆಳೆತ್ತರಕ್ಕಿರುವ ಸಿಂಹ, ಹುಲಿಯಂತಿರುವ ಶ್ವಾನಗಳಿಂದ ಹಿಡಿದು ಸಣ್ಣ ಗಾತ್ರದ ನಾಯಿಗಳ ವೀಕ್ಷಣೆ ಮಾಡಿದರು. ಮೇಳದಲ್ಲಿ ಸುಮಾರು 250 ತಳಿಯ 500 ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಪರ್ಷಿಯನ್ ಬೆಕ್ಕು ಸೇರಿದಂತೆ ಅನೇಕ ಜಾತಿಯ ಬೆಕ್ಕುಗಳು ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರ ಮನ ಸೆಳೆದವು. ಕೆಲ ಶ್ವಾನಗಳು ತಮ್ಮ ತುಂಟಾದ ಮೂಲಕ ಜನರಿಗೆ ಮುದ ನೀಡಿ ನೆರೆದಿದ್ದವರನ್ನು ರಂಜಿಸಿದವು.
ಶ್ವಾನಗಳು ಇತರ ತಳಿಯ ನಾಯಿಗಳನ್ನು ಕಂಡು ಹೊಸ ಸ್ನೇಹಿತನ್ನು ಪರಿಚಯ ಮಾಡಿಕೊಳ್ಳಲು ಹಾಗೂ ಹಳೆ ಸ್ನೇಹಿತರನ್ನು ಭೇಟಿ ಮಾಡಲು ಪ್ರದರ್ಶನ ವೇದಿಕೆಯಾಯಿತು.
ಗಮನ ಸೆಳೆದ ಚಾರ್ಲಿ: ಈ ವಿಶೇಷವಾಗಿ ಚಾರ್ಲಿ 777 ಚಲನಚಿತ್ರದ ಶ್ವಾನ ಭಾಗಿಯಾಗಿ ಎಲ್ಲರ ಗಮನ ಸೆಳೆಯಿತು ಹಾಗೂ ಮೈಸೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಶ್ವಾನಗಳು ಬಂದಿದೆ ಹಾಗೂ ದೆಹಲಿ, ಮುಂಬೈ,ಕಲ್ಕತ್ತಾ, ಗೋವಾ, ಗುಜರಾತ್ ಭಾಗದಿಂದ ವಿಶೇಷ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಪಗ್, ಜರ್ಮನ್ ಶಪರ್ಡ್, ಗ್ರೇಟ್ ಡೇನ್, ಗೋಲ್ಡನ್ ರೆಟ್ರಿವರ್, ಮುಧೋಳ್, ರಾಟ್ ವಿಲ್ಲರ್, ಬಾಕ್ಸರ್, ಬ್ರಿಟಿಷ್ ಬುಲ್ಡಾಗ್, ಪ್ರೆಂಚ್ ಬುಲ್, ಡಾಗ, ಮಲ್ಟಿ ಶ್, ಚೌ ಚೌ, ಪಿಟ್ ಬುಲ್, ಅಮೆರಿಕನ್ ಬುಲ್ಲಿ, ಸೈಬೀರಿಯನ್ ಹಸ್ಕಿ ಹೀಗೆ ವಿವಿಧ ತಳಿಗಳ ಶ್ವಾನಗಳು ಪ್ರದರ್ಶನದಲ್ಲಿ ಪ್ರಮುಖ್ಯ ಆಕರ್ಷಣೆಯಾಗಿದ್ದವು.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…
50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…
ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…
ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…