ಮೈಸೂರು

ಮೃಗಾಲಯ, ಕಾರಂಜಿಕೆರೆ ಟಿಕೆಟ್‌ ದರ ಹೆಚ್ಚಳ ; ಆಗಸ್ಟ್‌ 1ರಿಂದಲೇ ಪ್ರವೇಶ ದರ ಜಾರಿಗೆ

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಪ್ರವೇಶ ಶುಲ್ಕ ದರವನ್ನು ಹೆಚ್ಚಳ ಮಾಡಲಾಗಿದ್ದು, ಆಗಸ್ಟ್‌ 1 ರಿಂದ ಹೊಸ ದರ ಜಾರಿಯಾಗಲಿದೆ.

ಪ್ರಾಣಿಗಳ ನಿರ್ವಹಣಾ ವೆಚ್ಚವು ಹೆಚ್ಚಾಗಿದ್ದು, ಮೃಗಾಲಯ, ಕಾರಂಜಿಕೆರೆಯ ಪ್ರವೇಶ ದರಗಳನ್ನು ಪರಿಷ್ಕರಣೆ ಮಾಡುವಂತೆ ಪ್ರಸ್ತಾಪಿಸಿ, ಶೇ.20ರಷ್ಟು ಹೆಚ್ಚಳ ಮಾಡಿ ದರಗಳನ್ನು ಹೆಚ್ಚಿಸಲು ಅನುಮೋದನೆ ನೀಡುವಂತೆ ಕೋರಲಾಗಿತ್ತು. ಅದರಂತೆ, ಜುಲೈ 10 ಮತ್ತು 24 ರಂದು ನಡೆದ ಕರ್ನಾಟಕ ಮೃಗಾಲಯ ಪ್ರಾಽಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ ಬಳಿಕ ದರ ಪರಿಷ್ಕರಣೆಗೆ ಒಪ್ಪಿಗೆ ಸೂಚಿಸಲಾಗಿದೆ.

ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ಶೇ.20ರಷ್ಟು ದರ ಪರಿಷ್ಕರಣೆ ಮಾಡಲು ಒಪ್ಪಿಗೆ ಸೂಚಿಸಿದ್ದರಿಂದ ಚಿಲ್ಲರೆ ಅಭಾವವನ್ನು ಸರಿದೂಗಿಸಲು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಣ್ಣಪುಟ್ಟ ದರದ ವ್ಯತ್ಯಾಸವನ್ನು ಕೈಬಿಟ್ಟು ದರ ಪರಿಷ್ಕರಿಸಲಾಗಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ರಂಗಸ್ವಾಮಿ ಹೇಳಿದ್ದಾರೆ.

ಹೊಸ ದರ ಪಟ್ಟಿ ಹೀಗಿದೆ…

ಮೃಗಾಲಯ
ವಯಸ್ಕರಿಗೆ – 120 ರೂ.
ಮಕ್ಕಳಿಗೆ (5-12ವರ್ಷ) -60 ರೂ.

ಕಾರಂಜಿಕೆರೆ
ವಯಸ್ಕರಿಗೆ -60ರೂ
ಮಕ್ಕಳಿಗೆ (5-12ವರ್ಷ) -30 ರೂ.

ಮೃಗಾಲಯ-ಕಾರಂಜಿ ಕಾಂಬೋ
ವಯಸ್ಕರಿಗೆ- 150 ರೂ.
ಮಕ್ಕಳಿಗೆ-80 ರೂ.

ವಿದ್ಯಾರ್ಥಿಗಳಿಗೆ ರಿಯಾಯಿತಿ

ಎಲ್‌ಕೆಜೆಯಿಂದ ಯುಕೆಜಿ ವಿದ್ಯಾರ್ಥಿಗಳಿಗೆ-ಉಚಿತ
1-7ನೇ ತರಗತಿ -40 ರೂ.
8-12ನೇ ತರಗತಿ – 50 ರೂ.

ಬ್ಯಾಟರಿ ಚಾಲಿತ ವಾಹನದ ಟಿಕೆಟ್
ವಯಸ್ಕರಿಗೆ-240 ರೂ.
ಮಕ್ಕಳಿಗೆ (5-12ವರ್ಷ) ಹಿರಿಯ ನಾಗರಿಕರಿಗೆ-180 ರೂ.

ಆಂದೋಲನ ಡೆಸ್ಕ್

Recent Posts

ಅಂಗಡಿ ವ್ಯಾಪಾರಕ್ಕೆ ಅನುಮತಿ ಪಡೆದು ಬಾರ್ ಆರಂಭ!

ಎಸ್.ಎಸ್.ಭಟ್ ಮಹಿಳೆಯರು, ಮಕ್ಕಳಲ್ಲಿ ಆತಂಕ; ಬಾರ್ ಮುಚ್ಚಿಸಲು ಕಸುವಿನಹಳ್ಳಿ ಗ್ರಾಮಸ್ಥರ ಆಗ್ರಹ ನಂಜನಗೂಡು: ಮದ್ಯಪಾನ, ಧೂಮಪಾನ ರಹಿತ ವ್ಯಾಪಾರಕ್ಕೆ ಅನುಮತಿ…

4 mins ago

ಹೆಣ್ಣು ಮಗು ಮಾರಾಟ ; ಐವರ ಬಂಧನ

ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…

11 hours ago

ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ : ಗಡಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…

11 hours ago

ಹಾಸನದಲ್ಲಿ ಜಾ.ದಳ ಶಕ್ತಿ ಪ್ರದರ್ಶನ : ಚುನಾವಣೆಗೆ ತಯಾರಾಗುವಂತೆ ಕಾರ್ಯಕರ್ತರಿಕೆ ಎಚ್‌ಡಿಕೆ ಕರೆ

ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…

12 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…

12 hours ago