ಮೈಸೂರು: ಮೊದಲ ಹಂತದಲ್ಲಿ ಆಗಮಿಸಿರುವ ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಗಿದೆ. ಶ್ರೀಕಂಠ ಆನೆ ಹೆಚ್ಚು ತೂಕ ಹೊಂದಿದೆ. ಆದರೆ ಆನೆಗಳ ತೂಕ ಹೆಚ್ಚಿಸುವುದು ನಮ್ಮ ಆದ್ಯತೆಯಲ್ಲ, ಆನೆಗಳ ಆರೋಗ್ಯ ಕಾಪಾಡುವುದು ಮುಖ್ಯ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
ಇಂದು ಸಂಜೆಯಿಂದಲೇ ಆನೆಗಳ ತಾಲಿಮು ಆರಂಭವಾಗಲಿದ್ದು, ಹಂತ ಹಂತವಾಗಿ ತಾಲಿಮು ನಡೆಸಲಾಗುತ್ತದೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ತಾಲಿಮಿನ ಬಳಿಕ ಅಂಬಾರಿ ಹೊರುವ ಆನೆಯನ್ನು ಆಯ್ಕೆ ಮಾಡಲಾಗುತ್ತದೆ. ನಮ್ಮಲ್ಲಿರುವ ಎಲ್ಲಾ ಆನೆಗಳು ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಈಗಿರುವ ಎಲ್ಲಾ ಆನೆಗಳು ಅನುಭವಿ ಆನೆಗಳಾಗಿವೆ. ಆನೆಗಳಿಗೆ ಯಾವ ಪ್ರಮಾಣದಲ್ಲಿ ಆಹಾರ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಆನೆಗಳ ವೀಕ್ಷಣೆಗೆ ಟಿಕೆಟ್ ಇಲ್ಲ: ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ. ಆನೆಗಳ ಬಳಿ ಯಾರೂ ಹೋಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ವಿಚಾರದಲ್ಲಿ ಯಾರಾದರೂ ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಫ್ ಪ್ರಭುಗೌಡ ಎಚ್ಚರಿಕೆ ನೀಡಿದ್ದಾರೆ.
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ…
ನಂಜನಗೂಡು: ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ರೈತನ ಸಾವಿಗೆ ಕಾರಣವಾಗಿದ್ದ ಆನೆಯನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದಿದೆ. ಸಾಕಾನೆಗಳ ನೆರವಿನಿಂದ…
ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…
ನಡೆಯಲಿ ಪ್ರಶಾಂತ...! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುತಿಹನು ಪ್ರಶಾಂತ ಎಲ್ಲವೂ ನಡೆಯಲಿ ಶಾಂತ... ಪ್ರಶಾಂತ ! ಅಭಿಮನ್ಯುವಿನ ಉತ್ತರಾಧಿಕಾರಿ…
ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…
ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ…