ಮೈಸೂರು : ಪೊಲೀಸ್ ಠಾಣೆಗಳಿರುವುದು ಮಹಿಳೆಯರ ರಕ್ಷಣೆಗಾಗಿ. ಹೀಗಾಗಿ ಪೊಲೀಸ್ ಠಾಣೆ ಎಂದರೆ ಭಯ ಬೇಡ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಹಿಳೆಯರಿಗೆ ಸಲಹೆ ನೀಡಿದರು.
ನಗರದ ಮಹಾರಾಣಿ ಕಾಲೇಜಿನಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹೆಣ್ಣು ಅತ್ಯಾಚಾರಕ್ಕೆ ಒಳಗಾದಾಗ, ಆ ಹೆಣ್ಣು ಪೊಲೀಸ್ ಠಾಣೆಗೆ ಹೋಗಲು ಭಯಪಡುತ್ತೆ. ಈ ಪ್ರವೃತ್ತಿ ನಿಲ್ಲಬೇಕು. ದೇಶದ ಕಾನೂನು ಮಹಿಳೆಯರ ಆತ್ಮರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಠಾಣೆಗಳು ಮಹಿಳೆಯರಿಗೆ ತವರು ಮನೆ ಇದ್ದಂತೆ. ಹೀಗಾಗಿ ಠಾಣೆ ಬಗ್ಗೆ ಭಯ ಪಡದೆ ಭರವಸೆ ಇರಲಿ ಎಂದು ಹೇಳಿದರು.
ಹೆಣ್ಣು ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಗುಣ ಬೆಳೆಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಶಿಕ್ಷಿತರಾಗಿ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದ ಅವರು ಅನ್ಯಾಯ, ಅತ್ಯಾಚಾರವಾದಾಗ ಹೆಣ್ಣಿನ ಪರ ಸಮಾಜ ಧ್ವನಿಯಾಗಬೇಕು ಎಂದು ಕರೆ ನೀಡಿದರು.
ಹೆಣ್ಣು ಗಂಡಿಗೆ ಪ್ರತ್ಯೇಕ ವೃತ್ತಿಗಳಿಲ್ಲ. ಎಲ್ಲಾ ಕೆಲಸನ್ನು ಎಲ್ಲರೂ ಸಮಾನವಾಗಿ ಮಾಡಬೇಕು ಎಂದು ತಿಳಿಸಿದರು.
ಬೆಂಗಳೂರು : ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅಗತ್ಯ ಇರುವ ಭೂಮಿಯ ಸ್ವಯಂ…
ಮೈಸೂರು : ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜ.25 ರಂದು ಬೆಳಗಿನ ಜಾವ 5.30ಕ್ಕೆ 108 ಸಾಮೂಹಿಕ ಸೂರ್ಯ ನಮಸ್ಕಾರ…
ಬೆಂಗಳೂರು : ರಥಸಪ್ತಮಿಯ ನಂತರ ಬಿಸಿಲು ಹೆಚ್ಚಾಗಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚುವ ಕಾರಣ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು…
ಬೆಂಗಳೂರು : ಸಿಲಿಕಾನ್ ಸಿಟಿ ಎಂಬ ಖ್ಯಾತಿಗೆ ಒಳಗಾಗಿರುವ ರಾಜ್ಯ ರಾಜಧಾನಿ ಬೆಂಗಳೂರು ಇದೀಗ ವಿಶ್ವದಲ್ಲೇ ಅತಿ ಹೆಚ್ಚು ವಾಹನ…
ಬೆಂಗಳೂರು : ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ಒರಿಜಿನಲ್ ವಿನಾಯಕ ಮೈಲಾರಿ-1938 ಹೋಟೆಲ್‍ನ ಬೆಂಗಳೂರು ಶಾಖೆಗೆ ಮುಖ್ಯಮಂತ್ರಿ…
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತುಪಡಿಸಿದ ತನಿಖಾ ತಂಡಕ್ಕೆ 25 ಲಕ್ಷ ರೂ. ನಗದು ಬಹುಮಾನ…