ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಗೆ ಬೆಂಬಲ ನೀಡಲಾಗುವುದು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ ಹೇಳಿದ್ದಾರೆ.
ಒಡೆಯರ್ ರಾಜಮನೆತನದದೊಂದಿಗೆ ವಕೀಲರ ಸಂಘ ಅವಿನಾಭಾವ ಸಂಬಂಧ ಹೊಂದಿದೆ. 2004ರಲ್ಲಿ ಸಂಸದರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಕೀಲರ ಸಂಘಕ್ಕೆ ರೂ. 10 ಲಕ್ಷ ದೇಣಿಗೆ ನೀಡಿದ್ದರು. ಮತ್ತು ಅದೇ ಹಣದಿಂದ ವಕೀಲರ ಸಂಘದ ಕಟ್ಟವನ್ನು ನಿರ್ಮಿಸಲಾಯಿತು ಎಂದು ಅವರು ನೆನೆದರು.
ನಾಲ್ವಡಿ ಕೃಷ್ಣರಾಜ್ ಒಡೆಯರ್ ಕಾಲದಿಂದಲೂ ಮೈಸೂರನ್ನು ಅಭಿವೃದ್ಧಿಪಡಿಸಿದ್ದು ಆ ಸಂಸ್ಥಾನದ ಮಹಾರಾಜರೇ. ಹಾಗೂ ಮೈಸೂರು ಕೋರ್ಟ್ ಕಟ್ಟಡ ಕೂಡಾ ಮಹಾರಾಜರ ದೇಣಿಗೆಯಾಗಿದೆ. ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಮಹಾರಾಜರು ನೀಡಿರುವ ಕೊಡುಗೆ ಅಪಾರವಾಗಿದೆ. ಹಾಗಾಗಿ ವಕೀಲರ ಸಂಘದ ಎಲ್ಲ ಸದಸ್ಯರು ಪಕ್ಷಭೇದ ಮರೆತು ಯದುವೀರ್ ಯಶಸ್ಸಿಗೆ ಸಹಕರಿಸಲಿದ್ದಾರೆ ಎಂದು ವಕೀಲ ಸಂಘ ಹೇಳಿದೆ ಎಂದು ಟಿವಿ9 ವರದಿ ಮಾಡಿದೆ.
ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಪಾತ್ರ ಏನು ಇಲ್ಲವೆಂದು ಹೇಳುತ್ತಾರೆ. ಆದರೆ, ಸಿಎಂ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ…
ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಅಭಿಲೇಖಾಲಯದ ದಾಖಲೆಗಳು ಸ್ಕ್ಯಾನಿಂಗ್ ಬಿ. ಟಿ. ಮೋಹನ್ ಕುಮಾರ್ ಮಂಡ್ಯ: ಕಂದಾಯ ದಾಖಲೆಗಳ ಗಣಕೀಕರಣ…
ನ. ೨೩ಕ್ಕೆ ಹನೂರು ಪಪಂ ೧೨ನೇ ವಾರ್ಡ್ ಉಪಚುನಾವಣೆ; ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ ಮಹಾದೇಶ್ ಎಂ ಗೌಡ…
ಸ್ಪೇನಿನಲ್ಲಿ ನನ್ನನ್ನು ಬಹಳಮಟ್ಟಿಗೆ ಕಲಕಿದ ವಿಷಯ ಎಂದರೆ ತೀರಾ ಎಳೆವಯಸ್ಸಿನ ಹುಡುಗ ಹುಡುಗಿಯರು ಮಕ್ಕಳನ್ನು ಹೊತ್ತು ಓಡಾಡುತ್ತಿದ್ದದ್ದು. ಕಾಲೇಜಿಗೆ ಹೋಗಬೇಕಾದ…
ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಈ ವರ್ಷದ ಕೊನೆಯ ಚುನಾವಣೆ. ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ…
ವಾಣಿವಿಲಾಸ ಮಾರುಕಟ್ಟೆ ಒಳಗಿನ ಶೌಚಾಲಯದ ದುಸ್ಥಿತಿ; ಬಹುತೇಕ ಶೌಚಾಲಯಗಳಲ್ಲೂ ಇದೇ ಸ್ಥಿತಿ ಹೆಚ್. ಎಸ್. ದಿನೇಶ್ ಕುಮಾರ್ ಮೈಸೂರು: ದೇಶದ…