ಮೈಸೂರು: ಏ.26 ರಂದು ನೆಡೆಯುವ ಲೋಕಸಭಾ ಚುನಾವಣೆಗೆ ನಾವು ಸಿದ್ದರಿದ್ದು, ಈ ಬಾರಿಯ ಚುನಾವಣೆಯನ್ನು ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಾಧನೆಗಳನ್ನು ಮುಂದಿಟ್ಟು ಚುನಾವಣೆ ಎದುರಿಸಲಿದ್ದೇವೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯನ್ನು ಪ್ರಧಾನಿ ಮೋದಿ ಅವರ ಅಭಿವೃದ್ಧಿಯ ಆಧಾರದಲ್ಲಿ ಎದುರಿಸುತ್ತೇವೆ. ಮೋದಿ ಅವರು ಪ್ರಧಾನಿ ಅಗುವ ಮುಂಚೆ ದೇಶದ ಆರ್ಥಿಕತೆ ಸುಧಾರಿಸಿಲಿಲ್ಲ. ಮೋದಿ ನಂತರ ದೇಶದ ಆರ್ಥಿಕತೆ ಉತ್ತವಾಗಿದೆ ಎಂದರು.
ದೇಶದ ಮಹಿಳೆಯರನ್ನು ಶಸಕ್ತರನ್ನಾಗಿ ಮಾಡುವುದು ಪ್ರಧಾನಿ ಮೋದಿ ಅವರ ಉದ್ದೇಶವಾಗಿತ್ತು. ಇಂದು ನಾವು ಮಹಿಳೆಯರ ಅಭಿವೃದ್ಧಿಯತ್ತ ಸಾಗಿದ್ದೇವೆ. ನಮ್ಮ ಸಂಕಲ್ಪ 2047 ಆಗಿದೆ. ಅವತ್ತಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷಗಳು ತುಂಬಲಿದೆ. ಅದರೊಂದಿಗೆ ದೇಶವನ್ನು ಅಭಿವೃದ್ಧಿ ಭಾರತ ನಿರ್ಮಾಣ ಮಾಡಲು ಈಗಿನಿಂದಲೇ ಶ್ರಮಿಸಲಾಗುವುದು. ಅದಕ್ಕಾಗಿ ದೇಶಾದ್ಯಂತ ಈ ಬಾರಿ 370 ಸ್ಥಾನಗಳನ್ನು ಗೆಲ್ಲಲು ಸಂಕಲ್ಪ ಮಾಡಲಾಗಿದ್ದು, ರಾಜ್ಯದಿಂದ 28ಕ್ಕೆ 28 ಕ್ಷೇತ್ರಗಳನ್ನು ಗೆದ್ದು ಬಲ ನೀಡಬೇಕಿದೆ ಎಂದು ಹೇಳಿದರು.
ಬೀದರ್ : ಹೈಕಮಾಂಡ್ ಅಂದರೆ ಹೈಕಮಾಂಡೇ, ಅವರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ನಾನು ಅದನ್ನೇ ಶುಕ್ರವಾರ ಹೇಳಿದ್ದು, ಹೈಕಮಾಂಡ್ ಸದ್ಯಕ್ಕೆ…
ಮೈಸೂರು : ಪಕ್ಷದೊಳಗೆ ಮುಖ್ಯಮಂತ್ರಿ ಅಥವಾ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಅಧಿಕಾರ ಹಂಚಿಕೆಯ ಪ್ರಸ್ತಾವವೇ ನಡೆದಿಲ್ಲ. ಹೈಕಮಾಂಡ್ ಸುಮ್ಮನಿದೆ ಎಂದರೆ…
ಮೈಸೂರು : ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಒಪ್ಪುತ್ತೇವೆ ಎಂದು ಶಾಸಕ ತನ್ವೀರ್‌ಸೇಠ್ ಹೇಳಿದರು. 5…
ಮೈಸೂರು : ಬೆಂಗಳೂರಿನಲ್ಲಿ ಸಂಚಾರ ಉಲ್ಲಂಘನೆಯ ಪ್ರಕರಣಗಳಲ್ಲಿ ವಸೂಲಾಗುವ ಶುಲ್ಕದ ಮೊತ್ತದಲ್ಲಿ ಶೇ.50ರಷ್ಟು ಸರ್ಕಾರಕ್ಕೆ ಮತ್ತು ಇಲಾಖೆಯಲ್ಲಿ ಬಳಸಲಾಗುತ್ತಿದ್ದು, ಅದೇ…
ಮೈಸೂರು : ರೇಷ್ಮೆ ಕೃಷಿಯ ವಿಚಾರಗಳನ್ನು ತಿಳಿದುಕೊಳ್ಳದವರು ಪ್ರಾಯೋಗಿಕವಾಗಿ ಬೆಳೆಯಲಾರರು. ಹವಾಮಾನ ವೈಪರೀತ್ಯ, ತಂತ್ರಜ್ಞಾನದ ಮಾಹಿತಿ ಕೊರತೆ ರೇಷ್ಮೆ ಕೃಷಿಯ…
ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರಗಳಲ್ಲಿ ಫೆಬ್ರವರಿ 9ರಿಂದ ಯೋಜಿಸಲಾಗಿದ್ದ ಸುಮಾರು 5% ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಂಗಳೂರು…