ಮೈಸೂರು

ಸಂಗೀತದ ಮೂಲಕ ಸಮಾಜವನ್ನು ಒಟ್ಟುಗೂಡಿಸುವ ಮಾಂತ್ರಿಕನನ್ನು ಕಳೆದುಕೊಂಡಿದ್ದೇವೆ : ಡಾ. ಹೆಚ್‌ಸಿ ಮಹದೇವಪ್ಪ

ಮೈಸೂರು :  ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವಾದ ಡಾ.ಹೆಚ್‌.ಸಿ.ಮಹದೇವಪ್ಪ ಅವರು ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿರುವ ಖ್ಯಾತ ಸರೋದ್ ವಾದಕರಾದ ಪಂಡಿತ್ ರಾಜೀವ್ ತಾರಾನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪಾರ್ಥೀವ ಶರೀರದ ಅಂತಿಮ‌ ದರ್ಶನ ಪಡೆದರು.

ಈ ವೇಳೆ ಮಾತನಾಡಿದ ಅವರು, ಪಂಡಿತ್ ರಾಜೀವ್ ತಾರಾನಾಥ್ ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಸಂಗೀತದ ಮೂಲಕ ಇಡೀ ಸಮಾಜವನ್ನೇ ಒಟ್ಟಾಗಿ ಕೂಡಿಸುವಂತ ಒಬ್ಬ ಮಾಂತ್ರಿಕ ಹಾಗೂ ದಿಗ್ಗಜನನ್ನು ಕಳೆದುಕೊಂಡು ದೇಶದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಅನುಭವಿಸುತ್ತಿದೆ ಎಂದರು.

ಸ್ವಯಂ ಪ್ರೇರಿತನಾಗಿ ಹಾಗೂ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ 10ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಬಂದಿದ್ದೆ. ಆರ್ಥಿಕ ಸಂಕಸ್ಟದಲ್ಲಿದ ಅವರಿಗೆ ಅವರ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ ಎಂದು ಹೇಳಿ ಬಂದಿದ್ದೆ ಎಂದರು.

ಆಸ್ಪತ್ರೆಯಲ್ಲಿ ಸುಮಾರು 45ನಿಮಿಷಗಳ ಕಾಲ ಅವರೊಂದಿಗೆ ಮಾತನಾಡಿದೆ. ಆಗ ಅವರ ತಾಯಿ ದಲಿತರು ಎಂದು ಹೇಳಿದ್ದರು. ಅದನ್ನು ಸಮಾಜದ ಮುಂದೆ ಹೇಳಿ ಎಂದು ಕೇಳಿದೆ. ಆಸ್ಪತ್ರೆಯಿಂದ ಹೊರ ಬಂದ ಕೂಡಲೆ ಸುದ್ದಿಗೋಷ್ಠಿನಡೆಸಿ ಹೇಳುವುದಾಗಿ ಹೇಳಿದ್ದರು. ಆದರೆ ಅದನ್ನು ಹೇಳುವ ಮೊದಲೇ ಅವರು ನಮ್ಮನ್ನು ಅಗಲಿದ್ದಾರೆ ಎಂದರು.

ಸರ್ಕಾರ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ಮಾಡಲು ಮುಖ್ಯಮಂತ್ರಿಗಳನ್ನು ಸೂಚನೆ ನೀಡಿದ್ದಾರೆ ಅದರಂತೆ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಮಹದೇವಪ್ಪ ತಿಳಿಸಿದರು.

 ಸ್ಮಾರಕ ನಿರ್ಮಾಣ : ಅಂತ್ಯಕ್ರಿಯೆ ಮುಗಿದ ಬಳಿಕ ಪಂಡಿತ್ ರಾಜೀವ್ ತಾರಾನಾಥ್ ಅವರ ನೆನಪು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವ ಕೆಲಸವನ್ನು ಕುಟುಂಬದವರೊಂದಿಗೆ ಚರ್ಚೆ ನಡೆಸಿ ಸರ್ಕಾರದ ವತಿಯಿಂದ ಮಾಡುತ್ತೇವೆ ಎಂದು ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ತಿಳಿಸಿದರು.

 

 

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ಮಹಾರಾಷ್ಟ್ರ : ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆ

ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್‌ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಈ ವರ್ಷದ ಕೊನೆಯ ಚುನಾವಣೆ. ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ…

19 mins ago

ನಿರ್ವಹಣೆ ಇಲ್ಲದ ಶೌಚಾಲಯ; ಇಲ್ಲಿ ಬಯಲೇ ಮೂತ್ರಾಲಯ

ವಾಣಿವಿಲಾಸ ಮಾರುಕಟ್ಟೆ ಒಳಗಿನ ಶೌಚಾಲಯದ ದುಸ್ಥಿತಿ; ಬಹುತೇಕ ಶೌಚಾಲಯಗಳಲ್ಲೂ ಇದೇ ಸ್ಥಿತಿ ಹೆಚ್. ಎಸ್. ದಿನೇಶ್ ಕುಮಾರ್ ಮೈಸೂರು: ದೇಶದ…

48 mins ago

ಮುಡಾ: 50:50 ಅನುಪಾತದಡಿ 1950 ಬದಲಿ ನಿವೇಶನ

ಕೆ. ಬಿ. ರಮೇಶನಾಯಕ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಽಕಾರದಲ್ಲಿ ೫೦:೫೦ ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿ ರುವ ಹಗರಣ ಕುರಿತು…

60 mins ago

ಸರ್ಕಾರಿ ಶಾಲೆ ಬಾಲಕಿಯರಿಗೆ ಬಯಲೇ ಶೌಚಾಲಯ!

ದೊಡ್ಡಕವಲಂದೆ: 3 ವರ್ಷಗಳಾದರೂ ನಿರ್ಮಾಣವಾಗದ ಶೌಚಾಲಯ; ಗುತ್ತಿಗೆದಾರ ನಾಪತ್ತೆ ಶ್ರೀಧರ್ ಆರ್. ಭಟ್ ನಂಜನಗೂಡು: ಸ್ವಚ್ಛತೆಗಾಗಿ ಕೇಂದ್ರ ಮತ್ತು ರಾಜ್ಯ…

3 hours ago

ಕಾಡಿನಿಂದಲೂ ಕಾಣೆಯಾದ ಕಾಡುಪಾಪ

ಬಿ. ಆರ್. ಜೋಯಪ್ಪ ಕೊಡಗಿನಲ್ಲಿ ಸ್ಥಳೀಯರು ‘ಕಾಡುಪಾಪ’ವನ್ನು ‘ಚೀಂಗೆ ಕೋಳಿ’ ಎಂದು ಕರೆಯುತ್ತಾರೆ. ಇದೊಂದು ನಿಶಾಚರಿ, ನಿರುಪದ್ರವಿ ಕಾಡಿನ ಜೀವಿ.…

3 hours ago

ಹಸಿವಿನ ಆಳ ಮತ್ತು ಅನ್ನ ಎಂಬ ದೃಶ್ಯ ಕಾವ್ಯ…..

ಚಾಮರಾಜನಗರ ನೆಲದ ಕಲಾವಿದರು, ಅಲ್ಲಿನ ಆಡುಭಾಷೆಯನ್ನೇ ಜೀವಾಳವಾಗಿಸಿಕೊಂಡು ಗೆದ್ದ ಅನ್ನ ಚಲನಚಿತ್ರ ರಶ್ಮಿ ಕೋಟಿ ಮನೆಗೆ ಕರೆದುಕೊಂಡು ಹೋಗಲು ಬಂದ…

3 hours ago