ಮೈಸೂರು

ಸಮಸ್ಯೆಗಳ ಆಗರವಾದ ಗ್ರಾಮಗಳು; ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಚಿವ ವೆಂಕಟೇಶ್

ವಿವಿಧ ಗ್ರಾಮಗಳಲ್ಲಿ ಗುದ್ದಲಿ ಪೂಜೆ,

ಪಿರಿಯಾಪಟ್ಟಣ: ಸಕಾಲಕ್ಕೆ ಸರಿಯಾಗಿ ನೀರೀಕ್ಷೆಗೂ ಮೀರಿ ಮಳೆಯಾಗಿ ಕೆರೆಕಟ್ಟೆಗಳು ಮೈದುಂಬಿ ತಾಲೂಕಿನ ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ ಎಂದು ರೇಷ್ಮೆ ಹಾಗೂ ಪಶುಪಾಲನ ಸಚಿವ ವೆಂಕಟೇಶ್ ಹೇಳಿದರು.

ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಹಾಗೂ ಕೆರೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ ಹಲವು ಹಳ್ಳಿಗಳಲ್ಲಿ ಮೂಲ ಸೌಕರ್ಯಗಳ ಕೊರೆತೆಯಿದ್ದು ಹಂತ ಹಂತವಾಗಿ ಸಮರ್ಪಕವಾಗಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತೇನೆ ಎಂದರು.

ಮರಡಿಯೂರು ಗ್ರಾಮದ ರಸ್ತೆ ಅಭಿವೃದ್ಧಿಗೆ ₹.೧.೩೫ಲಕ್ಷ, ಮುತ್ತಿನ ಮುಳ್ಳುಸೋಗೆ ಗ್ರಾಮದ ಚರಂಡಿ ದುರಸ್ತಿಕರಣಕ್ಕೆ ₹.೨೫ಲಕ್ಷ ,ಶ್ಯಾನಭೋಗನಹಳ್ಳಿ ಗ್ರಾಮದ ಹಾಲಿನ ಡೇರಿ ಆವರಣದಲ್ಲಿ ತಡೆಗೋಡೆ ನಿರ್ಮಾಣಕ್ಕೆ ₹.೬೦ಲಕ್ಷ, ದೊಡ್ಡನೇರಳೆ ಕೆರೆ ಅಭಿವೃದ್ಧಿಗೆ ೫೦ಲಕ್ಷ, ಲಕ್ಷ್ಮಿಪುರ ಗ್ರಾಮದ ಡಾಂಬರ್ ರಸ್ತೆ ಅಭಿವೃದ್ಧಿಗೆ ₹.೧.೫ಲಕ್ಷ, ಚಪ್ಪರದಹಳ್ಳಿ ಸಿ.ಸಿ ರಸ್ತೆ ನಿರ್ಮಾಣಕ್ಕೆ₹. ೧.೭೫ ಲಕ್ಷ ವೆಚ್ಚ ಮಾಡಿ ಗ್ರಾಮಗಳ ಅಭಿವೃದ್ಧಿ ಪಡಿಸಲು ಪ್ರಯತ್ನಿಸಿದ್ದೇನೆ. ತಾವುಗಳು ಸಹ ಅಡೆತಡೆಗಳಿಗೆ ಸಹಕರಿಸಬೇಕು, ಈ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಟೆಂಡರ್ ಕರೆದಿದ್ದು ಅಧಿಕಾರಿಗಳು ಸೂಚನೆ ಮೇರೆಗೆ ಶೀಘ್ರದಲ್ಲೆ ಕಾಮಗಾರಿ ಚಾಲನೆಗೊಳ್ಳಲಿದೆ ಎಂದರು.

ಸಚಿವರಿಗೆ ಗ್ರಾಮಸ್ಥರ ಬೇಡಿಕೆ
ಮರಡಿಯೂರು ಗ್ರಾಮಕ್ಕೆ ಸಮುದಾಯ ಭವನ ನಿರ್ಮಾಣ , ಗ್ರಾಮದ ಕ್ರಿಶ್ಚಿಯನ್ ಚರ್ಚ್ ಮುಂಭಾಗದ ಅವರಣಕ್ಕೆ ಗಂಟೆ ಗೋಪುರ ನಿರ್ಮಾಣಕ್ಕೆ ಫಾದರ್ ಜೋಸೆಫ್ ಮೆರಿ ಒತ್ತಾಯ,ಹಾಗೂ ಮುತ್ತಿನ ಮುಳ್ಳುಸೋಗೆ ಗ್ರಾಮದ ಸರ್ಕಾರಿ ಜಾಗದಲ್ಲಿ ಚೌಡೇಶ್ವರಿ ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ ಮಾಡಿದರು.

ಸಚಿವರಿಂದ ಅಧಿಕಾರಿಗೆ ತರಾಟೆ
ಮರಡಿಯೂರು ಗ್ರಾಮದ ಜನರ ಭೂಮಿ ಒಂದೇ ಸರ್ವೇ ನಂಬರ್ನಲ್ಲಿದ್ದು, ಕಳೆದ ಹತ್ತು ವರ್ಷಗಳಿಂದ ಹಾರ್ನಹಳ್ಳಿ ಹೋಬಳಿಗೆ ಗ್ರಾಮ ಲೆಕ್ಕಧಿಕಾರಿಯಾಗಿರುವಾಗಲೇ ಇವರ ಗಮನಕ್ಕೆ ತಂದಿದ್ದೆವು, ಈಗ ಆನಂದ್ ರವರು ಕಂದಾಯ ನೀರೀಕ್ಷಕರಾಗಿದ್ದರು ಸಹ ಪಕ್ಕ ಪೋಡ್ ಬಗ್ಗೆಯಲ್ಲಿ ಖಾತೆ ಮಾಡದೇ ಫೈಲ್ ಕಳೆದು ಹೋಗಿದೆ ಎಂದು ಜವಾಬ್ ನೀಡುತ್ತಿರುವುದು ಯಾವ ನ್ಯಾಯ ಎಂದು ಗ್ರಾಮದ ಜನರು ಕಂದಾಯ ನಿರೀಕ್ಷಕ ಆನಂದ್ ಮೇಲೆ ಆರೋಪ ಮಾಡಿದರು.

ಈ ವೇಳೆ ಗರಂ ಆದ ಸಚಿವರು ಇನ್ನೆರಡು ವಾರದೊಳಗೆ ಗೆ ಈ ಕೆಲಸ ಮುಗಿಸಿ ಜನರ ಕಷ್ಟಗಳಿಗೆ ಸ್ಪಂದಿಸಿ ಇಲ್ಲಾ ಕ್ರಮ ಕೈಗೊಳ್ಳಿ ಎಂದು ಎಚ್ಚರ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ನಿಸರ್ಗಪ್ರಿಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರೆಹಮಾತ್ ಜಾನ್ ಬಾಬು, ಡಿ.ಟಿ ಸ್ವಾಮಿ, ಇ,ಓ,ಸುನೀಲ್ ಕುಮಾರ್, ತಾಲೂಕು ಕಾರ್ಯಪಾಲಕ ಅಭಿಯಂತರರಾದ ವೆಂಕಟೇಶ್ ಎಂ.ಆರ್,  ಪಶುಪಾಲನ ಸಹಾಯಕ ನಿರ್ದೇಶಕ ಸೋಮಯ್ಯ, ಸಣ್ಣ ನೀರಾವರಿ ಎಇಇ ಕೃಷ್ಣಮೂರ್ತಿ, ಕೃಷಿ ಅಧಿಕಾರಿ ಪ್ರಸಾದ್, ಆಹಾರ ಇಲಾಖೆ ಸಣ್ಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಚಂದ್ರಶೇಖರ್, ಹಿಂದುಳಿದ ಕಲ್ಯಾಣ ಕಲ್ಯಾಣಧಿಕಾರಿ ಕೃಷ್ಣೇಗೌಡ ಹೊಸಳ್ಳಿ,  ಕಾವೇರಿ ನೀರಾವರಿ ನಿಗಮದ ಅಭಿಯಂತರರಾದ ಎಇಇ ಗೋಕುಲ್, ಡೈರಿ ಅಧ್ಯಕ್ಷ ಬಸವರಾಜ್‌ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಎಚ್.ಡಿ.ಕೋಟೆಯಲ್ಲಿ ಮತ್ತೆ ಶುರುವಾಯ್ತು ಹುಲಿ ಉಪಟಳ

ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…

6 hours ago

ಇನ್ಸ್ಟಾಗ್ರಾಮ್ ಪರಿಚಯ : ಪೊಲೀಸಪ್ಪನ ಜತೆ ಮೈಸೂರು ಮೂಲದ ಗೃಹಿಣಿ ಎಸ್ಕೇಪ್

ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…

6 hours ago

ಮೈಸೂರಲ್ಲಿ ಸಂಭ್ರಮದ ಹನುಮೋತ್ಸವ ; ಮೆರವಣಿಗೆಯಲ್ಲಿ ಸಾಗಿದ ಅತ್ಯಾಕರ್ಷಕ ಹನುಮಮೂರ್ತಿಗಳು

ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…

7 hours ago

ಫೇಸ್‌ಬುಕ್‌ ಕಹಾನಿ | ಪ್ರೀತಿ ಹರಸಿ ಬಂದವನಿಗೆ ಹನಿಟ್ರ್ಯಾಪ್‌ ಗಾಳದ ಶಂಕೆ ; ಹಣಕ್ಕೆ ಡಿಮ್ಯಾಂಡ್‌….

ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…

7 hours ago

ಯುನಿಟಿ ಮಾಲ್‌ ನಿರ್ಮಾಣಕ್ಕೆ ವಿರೋಧ ಇಲ್ಲ : ಸಂಸದ ಯದುವೀರ್‌

ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…

7 hours ago

ಮೈಸೂರಲ್ಲಿ ಎರಡು ದಿನ ಮಾಗಿ ಸಂಭ್ರಮ : ಅವರೆಕಾಯಿ ಸೊಗಡು ಜೋರು…

ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…

7 hours ago