ಮೈಸೂರು: ಭಾರತೀಯ ರಾಷ್ಟ್ರೀಯ ಬಾರ್ ಅಸೋಸಿಯೇಷನ್ (ಐಎನ್‌ಬಿಎ) ಕೊಡಮಾಡುವ ಪ್ರತಿಷ್ಠಿತ ‘ಫಿನಾಮಿನಲ್ ಶೀ’ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾಲಯದ ಜೆನಿಟಿಕ್ಸ್ ಮತ್ತು ಜೀನೋಮಿಕ್ಸ್ ಪ್ರಾಧ್ಯಾಪಕಿ ಡಾ.ಸುತ್ತೂರು ಎಸ್ ಮಾಲಿನಿ ಅವರು ಭಾಜನರಾಗಿದ್ದಾರೆ.
ಐಎನ್‌ಬಿಎ ಪ್ರಶಸ್ತಿ ಪ್ರಧಾನ ಏಳನೇ ಆವೃತ್ತಿಯು ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಮುಂಚೂಣಿಯರನ್ನು ಗುರುತಿಸಿ ಹೊಸದಿಲ್ಲಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಾನವ ತಳಿ ಶಾಸ್ತ್ರದ ಸಂಶೋಧನೆಯಲ್ಲಿ ಅಪೂರ್ವ ಸಾಧನೆ ಹಾಗೂ ಸಾರ್ವಜನಿಕರಿಗೆ ಅನುವಂಶಿಯ ಕಾಯಿಲೆಗಳ ಬಗ್ಗೆ ಅರಿವು, ಕನ್ನಡದಲ್ಲಿ ಅನುವಂಶಿ ಕಾಯಿಲೆಗಳ ಬಗ್ಗೆ ಪುಸ್ತಕಗಳ ರಚನೆ ಹಾಗೂ ಆರೋಗ್ಯದ ಬಗ್ಗೆ ಅರಿವನ್ನು ನೀಡುತ್ತಿರುವುದನ್ನು ಪರಿಗಣಿಸಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವುದು, ದೈಹಿಕ, ಮಾನಸಿಕ, ಸಾಮಾಜಿಕ, ಲೈಂಗಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುತ್ತಿರುವ ಸಮಾಜಮುಖಿ ಕೆಲಸಕ್ಕಾಗಿ ಡಾ.ಸುತ್ತೂರು ಎಸ್ ಮಾಲಿನಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಾಂತ್ ಎನ್.ಮಲ್ಲಿಕ್ ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲು…
‘ಮೇಘ’ ಚಿತ್ರದ ಬಿಡುಗಡೆಯ ನಂತರ ಕಿರುತೆರೆಯಲ್ಲಿ ‘ಕರ್ಣ’ನಾಗಿರುವ ಕಿರಣ್ ರಾಜ್, ಈಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದೊಂದಿಗೆ ಬರುವುದಕ್ಕೆ ಸಜ್ಜಾಗುತ್ತಿದ್ದಾರೆ.…
ಬೆಂಗಳೂರು: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಸಾವಿಗೆ ಕಾರಣರಾದ ಎ.ಎಸ್.ಪೊನ್ನಣ್ಣ, ತೆನ್ನಿರಾ ಮೈನಾ ಹಾಗೂ ಮಂಥರ್ ಗೌಡ…
ಮೈಸೂರು: ನಮ್ಮ ಪಕ್ಷದವರಿಂದಲೇ ಹನಿಟ್ರ್ಯಾಪ್ ಆಗಿದೆ ಎಂದು ನಾವು ಎಲ್ಲೂ ಕೂಡ ಹೇಳಿಲ್ಲ ಎಂದು ಎಂಎಲ್‌ಸಿ ಸಿ ರಾಜೇಂದ್ರ ಬಿಜೆಪಿ…
ಮೈಸೂರು: ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಲ್ಲಿರುವ ಬಗ್ಗೆ ಎಂಎಲ್‌ಸಿ ಸಿ.ರಾಜೇಂದ್ರ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಹೈಕಮಾಂಡ್…
ಕೊಡಗು: ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆಗೆ ಕಾಂಗ್ರೆಸ್ ಶಾಸಕ ಪೊನ್ನಣ್ಣ, ಮಂತರ್ ಗೌಡ ಹಾಗೂ ಕಾಂಗ್ರೆಸ್ ಕಾರ್ಯಕರ್ತ ತನ್ವೀರ್ ಮೈನಾ…