ಮೈಸೂರು

ರಾಹುಲ್ ಗಾಂಧಿ ಮನವಿ ಮಾಡಿದ್ದ ಗಾಯಾಳು ಆನೆ ಮರಿ ಚೇತರಿಕೆ

ಮೈಸೂರು: ಇತ್ತೀಚೆಗೆ ಗಾಯಗೊಂಡಿದ್ದ ನಾಗರಹೊಳೆಯ ಆನೆಮರಿಗೆ ಚಿಕಿತ್ಸೆ ನೀಡಲಾಗಿದ್ದು, ಮರಿಯು ಚೇತರಿಕೆ ಕಂಡುಕೊಂಡಿದೆ. ತನ್ನ ತಾಯಿಯೊಂದಿಗೆ ಸುರಕ್ಷಿತವಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷ ಚಿಕ್ಕನರಗುಂದ ತಿಳಿಸಿದ್ದಾರೆ.

ರಾಹುಲ್‌ ಅ. 5ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸಮಯದಲ್ಲಿಗಾಯಗೊಂಡ ಆನೆ ಮರಿಯೊಂದು ತನ್ನ ತಾಯಿಯೊಂದಿಗೆ ಕರುಣಾಜನಕ ಸ್ಥಿತಿಯಲ್ಲಿಸಂಚರಿಸುವುದನ್ನು ಗಮನಿಸಿದ್ದರು. ಆನೆ ಮರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.

ಅಂತರಸಂತೆ ವನ್ಯ ಜೀವಿ ವಲಯದ ಬಿಸಿಲವಾಡಿ ಕೆರೆ ಬಳಿ ಡಾ. ಪ್ರಸನ್ನ ಡಾ ವಾಸಿಮ್ ಮತ್ತು ಇಲಾಖೆಯ ಸಿಬ್ಬಂದಿ ಆನೆ ಮರಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮರಿಯಾನೆ ಸುಮಾರು 1 ತಿಂಗಳ ಗಂಡು ಮರಿಯಾಗಿದ್ದು ಆನೆ ಸೊಂಡಿಲು, ಬೆನ್ನು ಹಾಗೂ ಬಾಲದಲ್ಲಿ ಗಾಯವಾಗಿತ್ತು. ಕಾಡು ನಾಯಿ ದಾಳಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ದಾಳಿ ವೇಳೆ ತಾಯಿ ಆನೆ ನಾಯಿಯನ್ನ ಓಡಿಸಿದೆ ಅಂತ ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

.

andolana

Recent Posts

ಯೋಗೇಶ್ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ಯೋಗೇಶ್ ಗೌಡ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ಶಿಕ್ಷೆ ಪ್ರಕಟವಾಗಿದೆ. 17ನೇ ಆರೋಪಿ ಕಾಂಗ್ರೆಸ್ ಶಾಸಕ ವಿನಯ್…

14 mins ago

ಮೈಸೂರು | ಮನೆಯ ಮಂಚದ ಕೆಳಗೆ ಚಿರತೆ ಪ್ರಕ್ಷತ್ಯ, ಆತಂಕಕ್ಕೀಡಾದ ಮನೆಮಂದಿ

ಮೈಸೂರು : ನಗರದ ಸಿದ್ದಾರ್ಥ ನಗರದಲ್ಲಿ ಚಿರತೆಯೊಂದು ಮನೆಯೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುರೇಶ್ ಎಂಬುವವರ ಮನೆಯಲ್ಲಿ…

37 mins ago

ಚಾರಣಿಗರ ಮೊಬೈಲ್ ಗೆ ಟ್ರ್ಯಾಕಿಂಗ್ ಆಪ್ ಅಳವಡಿಕೆ ಕಡ್ಡಾಯ: ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕ…

1 hour ago

ಅಮೆರಿಕ-ಇರಾನ್ ಎರಡನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನ ಸಿದ್ಧತೆ

ಇಸ್ಲಾಮಾಬಾದ್ : ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು…

2 hours ago

ಕಾರು-ಖಾಸಗಿ ಬಸ್‌ ಡಿಕ್ಕಿ : 6 ಮಂದಿ ಸಜೀವ ದಹನ

ಯಾದಗಿರಿ : ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಹೊತ್ತಿಯುರಿದಿದ್ದು, 6 ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ…

3 hours ago

ಕುಡಿಯಲು ಶುದ್ಧ ನೀರಿಲ್ಲದೆ ಆಲಗೂಡು ಗ್ರಾಮಸ್ಥರ ಪರದಾಟ

ಸಿದ್ದೇಗೌಡ ಕೊಡಿಯಾಲ ಶ್ರೀರಂಗಪಟ್ಟಣ : ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಶ್ರೀರಂಗಪಟ್ಟಣ ವಿಧಾನಸಭಾ…

4 hours ago