ಮೈಸೂರು : ಬಡವರು, ಮಧ್ಯಮ ವರ್ಗದವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಮಹಾರಾಜರು ಸ್ಥಾಪಿಸಿದ ಮೈಸೂರಿನ ದೊಡ್ಡಾಸ್ಪತ್ರೆಯಲ್ಲೀಗ ಉಚಿತ ಚಿಕಿತ್ಸೆ ಮರೀಚಿಕೆಯಾಗಿದೆ. ಶತಮಾನದಷ್ಟು ಹಳೆಯದಾದ ಮೈಸೂರಿನ ಹೃದಯ ಭಾಗದ ಕೃಷ್ಣ ರಾಜೇಂದ್ರ ಆಸ್ಪತ್ರೆಯ ಎಲ್ಲಾ ಬಗೆಯ ವೈದ್ಯಕೀಯ ಸೇವೆಗಳಿಗೂ ಶುಲ್ಕ ವಿಧಿಸುವಂತಾಗಿದೆ.ಎಸ್ಸಿ, ಎಸ್ಟಿ, ಅನಾಥರು, ಹಾಗೂ ಜೈಲು ವಾರ್ಡ್ಗಳ ರೋಗಿಗಳನ್ನು ಹೊರತು ಪಡಿಸಿ ಉಳಿದಂತೆ ಬರುವ ಬಿಪಿಎಲ್,ಎಪಿಎಲ್ ಕಾರ್ಡುದಾರರನ್ನೊಳಗೊಂಡ ಎಲ್ಲಾ ಬಗೆಯ ಜನರಿಗೂ ಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆಯಲ್ಲಿ ದರ ನಿಗದಿಗೊಳಿಸಿ ಹಣ ವಸೂಲು ಮಾಡಲಾಗುತ್ತಿದೆ.ಆಸ್ಪತ್ರೆಗೆ ಬರುವ ರೋಗಿಗಳು ದಿಗ್ಬ್ರಾಂತರಾಗಿದ್ದು, ಹಣ ಕಟ್ಟಲಾಗದೇ ಕಂಗಾಲಾಗಿದ್ದಾರೆ. ಮೈಸೂರು ಜಿಲ್ಲೆಯ ದೂರದ ಊರುಗಳು, ಸುತ್ತಲಿನ ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳ ಆಸ್ಪತ್ರೆಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ರೆಫರ್ ಆಗಿ ಬರುವ ರೋಗಿಗಳಂತೂ ಸರ್ಕಾರದ ಹೊಸ ಆದೇಶದಿಂದ ಪರಿತಪಿಸುವಂತಾಗಿದೆ.
ಗರ್ಭಿಣಿಯರಿಗೆ ನೆಲದ ಹಾಸಿಗೆಯೇ ಗತಿ :ಮೈಸೂರು ಮಹಾರಾಜರಿಂದ ಸ್ಥಾಪನೆಗೊಂಡ ರಾಜ್ಯದ ‘ದೊಡ್ಡಾಸ್ಪತ್ರೆ’ ಎನಿಸಿರುವ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ರೋಗಿಗಳು ಬರುತ್ತಿರುವುದರಿಂದ ಇಲ್ಲಿ ಹಾಸಿಗೆಗಳ ಕೊರತೆಯಿದೆ. ಇದೇ ಸ್ಥಿತಿ ಚೆಲುವಾಂಬ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಕಂಡು ಬಂದಿದೆ.
ಇಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಹಿಳೆಯರು ಚಿಕಿತ್ಸೆಗೆ ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿ ಈಗ ಹಾಸಿಗೆಗಳ ತೀವ್ರ ಕೊರತೆ ಎದುರಾಗಿದೆ. ಚೆಲುವಾಂಬ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ ಇದ್ದು, ಪ್ರತಿನಿತ್ಯ ಸರಾಸರಿ 100 ರಿಂದ 110 ಹೆರಿಗೆ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ 50-55 ಸಾಮಾನ್ಯ ಹೆರಿಗೆ, 10ರಿಂದ 15 ಸಿಸೇರಿಯನ್ ಶಸ್ತ್ರಚಿಕಿತ್ಸೆಯಡಿ ಹೆರಿಗೆಗಳಾಗುತ್ತಿವೆ.ಆದರೆ ಇಲ್ಲಿ ಬೆಡ್ಗಳ ಕೊರತೆ ಇದೆ. ಚೆಲುವಾಂಬ ಆಸ್ಪತ್ರೆಯಲ್ಲಿರುವ ಬೆಡ್ಗಳ ಸಂಖ್ಯೆ 420. ಮಂಜೂರಾಗಿರುವ ಬೆಡ್ಗಳ ಸಂಖ್ಯೆ 470. ಅಂದರೆ 50 ಬೆಡ್ಗಳ ಕೊರತೆ ಇದೆ. ಮಂಜೂರಾಗಿರುವಷ್ಟು ಬೆಡ್ಗಳನ್ನು ಹಾಕಲು ಚೆಲುವಾಂಬ ಕಟ್ಟಡದಲ್ಲಿ ಕೊಠಡಿಗಳ ಕೊರತೆಯೂ ಇದೆ. ಇರುವಷ್ಟು ಜಾಗದಲ್ಲಿ ಬೆಡ್ಗಳನ್ನು ಹಾಕಲಾಗಿದ್ದು, ಉಳಿದ ಬೆಡ್ಗಳಿಗೆ ಅಗತ್ಯ ಕೊಠಡಿಗಳಿಲ್ಲದಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಯಾವ ವಿಭಾಗ ಎಲ್ಲಿದೆ.? ಎನ್ನುವುದು ರೋಗಿಗಳಿಗೆ ತಿಳಿಯುವುದಿಲ್ಲ.! ಪಾರಂಪರಿಕ ಕಟ್ಟಡವಾಗಿ ರುವ ಕೆ.ಆರ್.ಆಸ್ಪತ್ರೆಯಲ್ಲಿ ಆಧುನಿಕ ರೀತಿಯ ಸೌಲಭ್ಯಗಳನ್ನು ನೀಡುವುದು ಸವಾಲಾಗಿದೆ. ಶತಮಾನದ ಕಟ್ಟಡದಲ್ಲಿ 1300ಕ್ಕೂ ಹೆಚ್ಚು ಹಾಸಿಗೆಗಳಿದ್ದು, ಓಡಾಡುವುದೇ ಕಷ್ಟ.ಕೆ.ಆರ್.ಆಸ್ಪತ್ರೆಗೆ ಬರುವುದು ಸುಲಭವಾದರೂ ಬಂದ ನಂತರ ಬೇರೆ ಬೇರೆ ಘಟಕಗಳನ್ನು ಹುಡುಕುವುದೇ ಹಿಂಸೆ. ನಿತ್ಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಸೌಲಭ್ಯವಿಲ್ಲದೆ ತೀವ್ರ ಒತ್ತಡದಲ್ಲಿ ಆಸ್ಪತ್ರೆ ಇದೆ.
ಹೊಸ ಚಿಕಿತ್ಸಾ ದರ :ಹೊರರೋಗಿಗಳ ನೋಂದಣಿಗೆ 10ರೂ. ಹಾಗೂ ಒಳರೋಗಿ
ನೋಂದಣಿಗೆ 25 ರೂ. ಶುಲ್ಕದಲ್ಲಿ ಮಾತ್ರ ಬದಲಾವಣೆ ಇಲ್ಲ.ಉಳಿದಂತೆ ಒಳರೋಗಿಗಳ ದಿನದ ಹಾಸಿಗೆ ಶುಲ್ಕ 25 ರೂ., ವಿಶೇಷವಾರ್ಡ್ ಶುಲ್ಕ 750 ರೂ, ವಿಐಪಿ ಸೂಟ್ಸ್ ವಾರ್ಡ್ಗಳಿಗೆ 3,000
ರೂ. ಶುಲ್ಕ ನಿಗದಿಗೊಳಿಸಲಾಗಿದೆ.ಐಸಿಯುನಲ್ಲಿ ದಿನಕ್ಕೆ 2000ರೂ.ಶಸ್ತ್ರಚಿಕಿತ್ಸೆಗೆ ಮೊದಲ ಒಂದು ಗಂಟೆ ಅವಧಿಗೆ 750 ರೂ. ಮತ್ತು ನಂತರದ ಅವಧಿಗೆ ಪ್ರತಿ 1 ಗಂಟೆಗೆ 400 ರೂ. ಶುಲ್ಕವನ್ನು ರೋಗಿಗಳು
ಪಾವತಿಸಬೇಕಾಗಿದೆ.
“ನನ್ನ ಮೊಮ್ಮಗಳಿಗೆ ಹೆರಿಗೆಗೆಂದು ಇಲ್ಲಿಗೆ ಸೇರಿಸಿದ್ದೇನೆ. ಆದರೆ ಅವಳಿಗೆ ಬೆಡ್ ಇಲ್ಲ ಅಂತ ಚೆಲುವಾಂಬ ಆಸ್ಪತ್ರೆ ಸಿಬ್ಬಂದಿ ನೆಲದ ಮೇಲೆ ಹಾಸಿಗೆ ಹಾಕಿಕೊಟ್ಟಿದ್ದಾರೆ.”ಬೇರೆ ಆಸ್ಪತ್ರೆಗೆ ಹೋಗಲು ಹಣವಿಲ್ಲದೇ, ಇದೇ ಆಸ್ಪತ್ರೆಯಲ್ಲಿ ಕಷ್ಟ ಅನುಭವಿಸುವಂತಾಗಿದೆ.
ಶಿವಮ್ಮ ಹಿರಿಯ ಮಹಿಳೆ
ಸ್ಕ್ಯಾನಿಂಗ್, ಶಸ್ತ್ರ ಚಿಕಿತ್ಸೆ ವಿಭಾಗ, ಹೆರಿಗೆ ವಿಭಾಗ ಮತ್ತು ಸ್ಪೆಷಲ್ ವಾರ್ಡ್ ಯಾವುದೂ ಸರಿಯಿಲ್ಲ. ಇತ್ತೀಚೆಗೆ ದುರಸ್ತಿಪಡಿಸಿರುವ ಸ್ಪೆಷಲ್ ವಾರ್ಡ್ನ್ನು ಯಾರಿಗೂ ನೀಡುತ್ತಿಲ್ಲ. ಮುಗ್ದ ಜನರ ಬಳಿ ಹಣ ವಸೂಲಿ ಹಾಗೂ ಒಂದಿಬ್ಬರು ಸಮಾಜ ಸೇವಕರ ಸೋಗಿನಲ್ಲಿ ಈ ಆಸ್ಪತ್ರೆಯಲ್ಲಿಹಣ ಪೀಕುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಂಜೇಗೌಡ ಮೈಸೂರು ನಿವಾಸಿ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…