ಮೈಸೂರು: ಇಂದು( ಜು.29) ಅಂತರಾಷ್ಟ್ರೀಯ ಹುಲಿ ದಿನ. ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಕೂಡ ಹೌದು. ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿನತ್ತ ಹುಲಿಯ ಸಂತತಿ ಸಾಗುತ್ತಿದೆ. ಕಾಡಿಗೆ ಹುಲಿಗಳ ಅವಶ್ಯವೇನು ಹಾಗೂ ಕ್ಷೀಣಿಸುತ್ತಿರುವ ಹುಲಿಗಳ ಸಂತತಿಯ ರಕ್ಷಿಸುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಅಂತರಾಷ್ಟ್ರೀಯ ಹುಲಿಗಳ ದಿನವನ್ನು ಆಚರಿಸಲಾಗುತ್ತದೆ.
ವಿಶ್ವದಾದ್ಯಂತ ಜುಲೈ 29 ರಂದು ಹುಲಿಗಳ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಹುಲಿಗಳ ದಿನದ ಸಂಧರ್ಭದಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಎಷ್ಟಿಟ್ಟಿದೆ ಎಂಬುದು ಇಲ್ಲಿದೆ ಗಮನಿಸಿ.
ಭಾರತದಲ್ಲಿ ಮಧ್ಯಪ್ರದೇಶ ಅತಿ ಹೆಚ್ಚು ಹುಲಿಗಳನ್ನು ಹೊಂದಿದ್ದು, ಕೆಲವು ರಾಜ್ಯಗಳಲ್ಲಿ ಒಂದೇ ಒಂದು ಹುಲಿಯು ಇಲ್ಲ.
ಮಧ್ಯಪ್ರದೇಶವು 785 ಹುಲಿಗಳನ್ನು ಹೊಂದಿದ್ದು, ಉತ್ತರಖಂಡವು 560 ಹುಲಿಗಳನ್ನು ಹೊಂದಿದೆ. ನಮ್ಮ ರಾಜ್ಯ ಕರ್ನಾಟಕವು 524 ಹುಲಿಗಳನ್ನು ಹೊಂದಿ ಕ್ರಮವಾಗಿ ದೇಶದಲ್ಲಿ ಅತಿಹೆಚ್ಚು ಹುಲಿ ಹೊಂದಿರುವ ಮೂರನೇ ರಾಜ್ಯವಾಗಿದೆ.
ಇನ್ನೂ ಮಹಾರಾಷ್ಟ್ರವು 444, ತಮಿಳುನಾಡು 306, ಉತ್ತರ ಪ್ರದೇಶ 205, ಕೇರಳ 183, ಅಸ್ಸಾಂ 182, ಪಶ್ಚಿಮ ಬಂಗಾಳ 131ಹುಲಿಗಳನ್ನು ಹೊಂದಿದೆ.
ಇನ್ನುಳಿದ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ 100 ಕ್ಕಿಂತಲೂ ಕಡಿಮೆ ಇದೆ. ನೆರೆ ಆಂದ್ರಪ್ರದೇಶದಲ್ಲಿ 62 ಹುಲಿಗಳಿವೆ. ರಾಜಸ್ಥಾನದಲ್ಲಿ 88 ಹುಲಿಗಳಿವೆ.
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…