ಮೈಸೂರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ : ಯತೀಂದ್ರ ಸಿದ್ದರಾಮಯ್ಯ

ಮೈಸೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲವಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರಲಿದ್ದಾರೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ . ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮಾಧ್ಯಮದಲ್ಲಿ ಮಾತ್ರ ಸಿಎಂ ಬದಲಾವಣೆ ಚರ್ಚೆ ಆಗುತ್ತಿದೆ. ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನು ಇಳಿಸಿ ಅಂತ ಯಾರು ಕೇಳುತ್ತಿಲ್ಲ ಎಂದರು.

ಮನರೇಗಾ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಜಟಾಪಟಿ ವಿಚಾರವಾಗಿ ಮಾತನಾಡಿ ನಾವು ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯಲ್ಲಿ ಸಾಗುತ್ತಿದ್ದೇವೆ. ಬಿಜೆಪಿ ಅವರಿಗೆ ಜನರ ಕೆಲಸ ಬೇಕಿಲ್ಲ. ಗಾಂಧೀಜಿಯ ಆಶಯಗಳು ಬೇಕಿಲ್ಲ. ಅದಕ್ಕಾಗಿ ಹೆಸರು ಬದಲಾವಣೆ ಮಾಡಿದ್ದಾರೆ ಸಾವಿರಾರು ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ. ಅವರು ನಮ್ಮ ಮೇಲೆ ಮಾಡುವ ಆರೋಪ ಎಲ್ಲ ಸುಳ್ಳು ಎಂದರು.

ಕೆ.ಜೆ ಜಾರ್ಜ್ ಇಲಾಖೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಮೂಗು ತೂರಿಸಿದ್ದಾರೆ ಎಂಬ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಈ ವಿಚಾರದ ಬಗ್ಗೆ ನಿಜಕ್ಕೂ ನನಗೆ ಗೊತ್ತಿಲ್ಲ. ಖುದ್ದು ಕೆ.ಜೆ ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಸುಖಾ ಸುಮ್ಮನೆ ನನ್ನ ಹೆಸರನ್ನು ಬಿಜೆಪಿ ಎಳೆದು ತರುವ ಕೆಲಸ ಮಾಡಿದೆ ಇದು ಹೊಸದೇನಲ್ಲ. ಅವರ ಆರೋಪದಲ್ಲಿ ಯಾವುದೇ ಉರುಳಿಲ್ಲ. ಸದನದಲ್ಲೂ ಕೂಡ ಬಿಜೆಪಿ ನನ್ನ ಹೆಸರು ಹೇಳಿದೆ. ಈ ಹಿಂದಿನಿಂದಲೂ ನನ್ನ ಟಾರ್ಗೆಟ್ ಮಾಡಿಕೊಂಡು ಬಂದಿದ್ದಾರೆ. ಅವರ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಕೂಡ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ಮಾಡೋದನ್ನು ಸ್ವಾಗತಿಸುತ್ತೇನೆ. ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಇವಿಎಂ ಮಿಷನ್ ರದ್ದು ಮಾಡಿ ಬ್ಯಾಲೆಟ್ ಪೇಪರ್ ಬಳಸುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರಗಳೇ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆಗೆ ಮುಂದಾಗಿದೆ. ನನ್ನ ಅಭಿಪ್ರಾಯವು ಅದೇ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸುವುದು ಸೂಕ್ತ. ಇದು ನನ್ನ ಅಭಿಪ್ರಾಯ ಎಂದರು.

ಮುಡಾ ಹಗರಣ ಕೋರ್ಟ್ ಬಿ ರಿಪೋರ್ಟ್ ಪುರಸ್ಕಾರ ವಿಚಾರ, ನಮಗೆ ಕಾನೂನಿನಲ್ಲಿ ನಂಬಿಕೆ ಇತ್ತು. ನಾವೇನೂ ತಪ್ಪು ಮಾಡಿರಲಿಲ್ಲ. ಕೋರ್ಟ್ ತೀರ್ಪು ಸ್ವಾಗತ ಮಾಡುತ್ತೇವೆ. ನಮ್ಮ ತಾಯಿ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಸ್ನೇಹಮಯಿ ಕೃಷ್ಣ ಹೋರಾಟ ಮಾಡಲಿ. ಕಾನೂನು ಎಲ್ಲರಿಗೂ ಒಂದೆ ಎಂದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಹನೂರು | ಪಶುವೈದ್ಯಾಧಿಕಾರಿಗಳ ನಿರ್ಲಕ್ಷದಿಂದ ಸಾವಿಗೀಡಾದ 500 ನಾಟಿ ಕೋಳಿಗಳು

ಹನೂರು : ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಮನೋಹರ್ ಎಂಬುವರಿಗೆ ಸೇರಿದ 500ಕ್ಕೂ ಹೆಚ್ಚು ನಾಟಿ ಕೋಳಿಗಳಿಗೆ ರೋಗ ತಗುಲಿ ಮೃತಪಟ್ಟಿದ್ದರು,…

6 mins ago

ಕಾಂತಾರಾ ಮಿಮಿಕ್ರಿ ವಿವಾದ : ಚಾಮುಂಡಿ ಬೆಟ್ಟಕ್ಕೆ ಭೇಡಿ ನೀಡಲಿದ್ದಾರೆ ನಟ ರಣವೀರ್‌ ಸಿಂಗ್‌

ಮುಂಬೈ : ‘ಕಾಂತಾರ’ ಸಿನಿಮಾದಲ್ಲಿ ದೈವದ ಕುರಿತು ವೇದಿಕೆ ಮೇಲೆ ಅನುಕರಣೆ ಮಾಡಿ ‘ಫೀಮೇಲ್ ಗೋಸ್ಟ್’ ಎಂದು ಕರೆದು ವಿವಾದಕ್ಕೆ…

1 hour ago

ಉತ್ತರ ಸಿಕ್ಕಿಂನಲ್ಲಿ ಭೂಕುಸಿತ : ಚುಂಗಾಥಾಂಗ್‌ನಲ್ಲಿ ಸಿಲುಕಿದ 200 ಪ್ರವಾಸಿಗರು

ಸಿಕ್ಕಿಂ : ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಚುಂಗ್‌ಥಾಂಗ್‌ನಲ್ಲಿ…

2 hours ago

ಸಂಘರ್ಷ ಶಮನಕ್ಕೆ 15 ಅಂಶ ಮುಂದಿಟ್ಟ ಟ್ರಂಪ್‌ ; ಸಂಧಾನ ಅಣಕಿಸಿದ ಇರಾನ್‌

ವಾಷಿಂಗ್ಟನ್‌ : ಪಶ್ಚಿಮ ಏಪ್ಯಾ ಸಂಘರ್ಷ ಶಮನಕ್ಕೆ ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ, ಟ್ರಂಪ್ ಆಡಳಿತ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್…

2 hours ago

ಹನೂರು | ಬಾವಿಗೆ ಬಿದ್ದ ಶ್ವಾನ, ಅಗ್ನಿಶಾಮಕ ಠಾಣಾ ಸಿಬ್ಬಂದಿಗಳಿಂದ ರಕ್ಷಣೆ

ಹನೂರು : ನೀರಿರುವ ಬಾವಿಗೆ ಬಿದ್ದಿದ್ದ ಶ್ವಾನವನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಘಟನೆಯ ವಿವರ ಹನೂರು…

3 hours ago

ಎಲ್‌ಪಿಜಿ ಕೊರತೆ ಪರಿಸ್ಥಿತಿ ; ಹಾಲಿನ ವಹಿವಾಟು ಯಥಾಸ್ಥಿತಿ

ಕೆ.ಬಿ.ರಮೇಶ ನಾಯಕ ಮೈಸೂರು : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವಯುದ್ಧದ ಪರಿಣಾಮದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಗೆ ದೊಡ್ಡ ಹೊಡೆತ ಬಿದ್ದು…

3 hours ago