ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದ ಅರ್ಚಕ ದೇವಪ್ರಸಾದ್ ದೀಕ್ಷಿತ್ ಅವರ ಮೇಲೆ ಸಿದ್ಧಾಂತ್ ಎಂಬ ಯುವಕ ಹಲ್ಲೆ ಮಾಡಿ ಹುಚ್ಚಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಅರ್ಚಕ ದೇವಪ್ರಸಾದ್ ದೀಕ್ಷಿತ್ ಅವರ ಮೇಲೆ ಹಲ್ಲೆ ಮಾಡಿರುವ ಸಿದ್ಧಾಂತ್ ಎಂಬಾತ ಸಿದ್ದಾರ್ಥ ಬಡಾವಣೆಯ ಶಾಂತಲಾ ಶಾಲೆ ಮುಖ್ಯಸ್ಥ ಪ್ರೊ. ಸಂತೋಷ್ ಮಗ ಎಂದು ಗುರುತಿಸಲಾಗಿದೆ. ಅಲ್ಲದೇ ದೇವಪ್ರಸಾದ್ ದೀಕ್ಷಿತ್ ಅವರ ಕುಟುಂಬ ಸಿದ್ಧಾರ್ಥನಗರ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಇದೇ ಬಡಾವಣೆಯಲ್ಲಿ ಪ್ರೊ.ಸಂತೋಷ್ ಎಂಬುವವರ ಕುಟುಂಬವೂ ಇದೆ.
ಈ ಘಟನೆಗೆ ಕಾರಣವಾಗಿರುವ ಸಿದ್ಧಾಂತ್ ಸೋಮವಾರ(ಫೆಬ್ರವರಿ.10) ರಂದು ದೇವಪ್ರಸಾದ್ ಅವರ ಮನೆಗೆ ರಾತ್ರಿ ೯ ಗಂಟೆಗೆ ನುಗ್ಗಿ ಹಣ ನೀಡುವಂತೆ ಪೀಡಿಸಿದ್ದಾನೆ. ಆ ವೇಳೆ ಹಣ ನೀಡಲು ನಿರಾಕರಿಸಿದ ದೇವಪ್ರಸಾದ್ ಅವರ ಮುಖಕ್ಕೆ ಗುದ್ದಿ, ಗಾಯಗೊಳಿಸಿದ್ದಾನೆ. ಅದೇ ಸಮಯಕ್ಕೆ ಮನೆಗೆ ಬಂದ ಅರ್ಚಕರ ಮಗ ಸುದೇವ್ ಎಂಬುವವರು ನೆರೆಹೊರೆಯವರ ಸಹಾಯ ಪಡೆದು ಸಿದ್ಧಾಂತ್ ಅನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್ನೂ ಮಗನ ಹುಚ್ಚಾಟದ ವಿಚಾರವನ್ನು ತಿಳಿದ ಪ್ರೊ.ಸಂತೋಷ್ ಮತ್ತು ಅವರ ಪತ್ನಿ ಚಾಮುಂಡಿ ಬೆಟ್ಟದ ಅರ್ಚಕ ದೇವಪ್ರಸಾದ್ ದೀಕ್ಷಿತ್‌ರ ಬಳಿ ಗೋಳಾಟ ಮಾಡಿದ್ದರಿಂದ ಅವರು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…
೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…
ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…
ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…