ಮೈಸೂರು,: ದೇಶದಲ್ಲಿ ಇದೀಗ ಬೇಕಿರುವುದು ಐಕ್ಯತೆ ಹಾಗೂ ನಾವೆಲ್ಲ ಒಂದು ಎಂಬ ಭಾವನೆ. ಇದಕ್ಕೆ ಪೂರಕವಾದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಹಿಂದು-ಮುಸ್ಲಿಮರ ನಡುವೆ ಸೌರ್ಹಾದತೆ ಮೂಡುವಂತೆ ಮಾಡಿದೆ.
ಮೈಸೂರಿನ ಪುಲಿಕೇಶಿ ರಸ್ತೆಯ ಸುನ್ನಿ ಚೌಕದಲ್ಲಿ ಶಿವಮ್ಮ( ಕುಳ್ಳಿ) ಎಂಬ ಮಹಿಳೆ ತಡರಾತ್ರಿ ನಿಧನರಾಗಿದ್ದರು. ಇವರ ಅಂತ್ಯಸಂಸ್ಕಾರಕ್ಕೆ ಯಾರೊಬ್ಬರು ಕೂಡ ಮುಂದೆ ಬರಲಿಲ್ಲ. ಶಿವಮ್ಮರ ಬಂಧು ಬಾಂಧವರು ದೂರ ಉಳಿದರು. ಕೊನೆಗೆ ಶಿವಮ್ಮಳ ಅಂತಿಮ ಸಂಸ್ಕಾರಕ್ಕೆ ಮುಸ್ಲಿಂ ಬಾಂಧವರು ಹೆಗಲು ಕೊಟ್ಟು ನಾವೆಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ.
ಯಾವಾಗ ಶಿವಮ್ಮ ಅಂತ್ಯಸಂಸ್ಕಾರಕ್ಕೆ ಯಾರು ಬರಲಿಲ್ಲವೋ ಆಗ ಬಡಾವಣೆಯ ಮುಸ್ಲಿಂ ಬಾಂಧವರು ಮಾತುಕತೆ ನಡೆಸಿದರು. ಹಿಂದು ಸಂಪ್ರದಾಯದಂತೆ ಯಾವ ರೀತಿ ಪೂಜೆ-ಪುನಸ್ಕಾರ ಮಾಡಬೇಕು ಎಂಬುದನ್ನು ಚರ್ಚೆ ಮಾಡಿ ಇತರರಿಂದ ಕೇಳಿ ತಿಳಿದುಕೊಂಡರು. ಅಂತಿಮವಾಗಿ ಹಿಂದೂ ಮಹಿಳೆ ಅಂತ್ಯ ಸಂಸ್ಕಾರವನ್ನು ಸ್ಥಳೀಯರು ಹಿಂದೂ ಸಂಪ್ರದಾಯದಂತೆ ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ.
ಜೋಡಿ ತೆಂಗಿನಮರದ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಮಾಜಿ ನಗರ ಪಾಲಿಕೆ ಸದಸ್ಯ ಸೋಹೆಲ್ ಬೇಗ್ ನೇತೃತ್ವದಲ್ಲಿ ಶವ ಸಂಸ್ಕಾರ ನಡೆಸಲಾಯಿತು. ಅಲ್ಲದೆ, ಕುಟುಂಬಕ್ಕೆ ಸಾಂತ್ವನ ಹೇಳಿರುವುದು ನಿಜಕ್ಕೂ ಶ್ಲಾಘನೀಯವಾಗಿತ್ತು. ಈ ಬಗ್ಗೆ ಮಾತನಾಡಿದ ಸೋಹೆಲ್ ಬೇಗ್, ನಿನ್ನೆ ರಾತ್ರಿಯಿಂದ ನಾವೇ ಮುಂದೆ ನಿಂತು ಶವಸಂಸ್ಕಾರ ಮಾಡಿದೆವು. ರಾಜ್ಯದ ಜನತೆಯಲ್ಲಿ ನಾನು ಮನವಿ ಮಾಡುವುದೆಂದರೆ ನಾವೆಲ್ಲರೂ ಒಂದೇ. ಹಿಂದು-ಮುಸ್ಲಿಂ ಎಂಬ ಬೇಧಭಾವ ಇರಬಾರದು. ಟಿಪ್ಪು ಜಯಂತಿ ದಿನ ನಾವು ಅನ್ನಸಂತರ್ಪಣೆ ಮಾಡಿದ್ದೆ. ಆ ವೇಳೆ ಎಲ್ಲಾ ಅಡುಗೆ ಕೆಲಸವನ್ನು ಅವರೇ ಮುಂದೆ ನಿಂತು ಮಾಡಿದ್ದರು ಎಂದು ಸ್ಮರಿಸಿಕೊಂಡರು.
ಚಾ.ನಗರದ ತರಕಾರಿ ಮಾರುಕಟ್ಟೆ, ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಮುಚ್ಚಿದ ಶೌಚಾಲಯಗಳು; ಜನರಿಗೆ ಸಮಸ್ಯೆ ಚಾಮರಾಜನಗರ: ನಗರದಲ್ಲಿನ ಎರಡು ಸಾರ್ವಜನಿಕ…
ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು…
ಕೆ.ಬಿ.ರಮೇಶ ನಾಯಕ ೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ…
ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ…
ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಕ್ಷಿಪ್ರ ಕಾರ್ಯಪಡೆ ರಚನೆಗೆ ಒಪ್ಪಿಗೆ ಮೈಸೂರು: ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತಿತರ ಸೇವಾ…