ಮೈಸೂರು: ಮೋಸ ಆಗುವವರು ಇರೋವರೆಗೂ ಮೋಸ ಮಾಡುವವರು ಇದ್ದೇ ಇರ್ತಾರೆ. ಜಗತ್ತೇ ಬೆಚ್ಚಿಬೀಳುವಂತಹ ಕೆಲಸ ಮಾಡಿದ ವ್ಯಕ್ತಿ ಈಗ ಮೈಸೂರಲ್ಲಿ ತಗ್ಲಾಕೊಂಡಿದ್ದಾನೆ. ಈತ 15 ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 15 ಮದುವೆಯಾಗಿ ವಂಚನೆ ಮಾಡಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ಬಡಾವಣೆ ನಿವಾಸಿ ಮಹೇಶ್ ಬಂಧಿತನಾಗಿದ್ದು, ವಿಧವೆ, ಅವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಮದುವೆಯಾಗಿ ಮಹಿಳೆಯರನ್ನ ವಂಚಿಸುತ್ತಿದ್ದ ಆರೋಪಿ ಹಣ, ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ. ಡಾಕ್ಟರ್ ಎಂದು ಹೇಳಿ ಮೈಸೂರಿನ ಮಹಿಳೆಯೊಬ್ಬರನ್ನ ಆನ್ ಲೈನಲ್ಲಿ ಪರಿಚಯಿಸಿಕೊಂಡು ನಂಬಿಸಿ ವಿಶಾಖಪಟ್ಟಣದಲ್ಲಿ ಮದುವೆಯಾಗಿದ್ದ. ಕ್ಲಿನಿಕ್ ತೆರೆಯಬೇಕೆಂದು 70 ಲಕ್ಷ ರೂಪಾಯಿ ಸಾಲವನ್ನು ಕೊಡಿಸುವಂತೆ ಮಹೇಶ್ ಒತ್ತಾಯಿಸಿದ್ದು, ಸಾಲ ಕೊಡಿಸಲು ಮಹಿಳೆ ಹಿಂದೇಟು ಹಾಕಿದ್ದರು.
ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು
ಈ ಹಿನ್ನೆಲೆ ಮಹಿಳೆಗೆ ಕೊಲೆ ಬೆದರಿಕೆ ಹಾಕಿ 15 ಲಕ್ಷ ಹಣ, ಚಿನ್ನಾಭರಣ ಕದ್ದು ಮಹೇಶ್ ಪರಾರಿಯಾಗಿದ್ದು, ಈ ಸಂಬಂಧ ಕುವೆಂಪುನಗರ ಪೊಲೀಸರಿಗೆ ಮಹಿಳೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿ ಮಹೇಶನ ಹೆಡೆಮುರಿ ಕಟ್ಟಿದ್ದಾರೆ.
ಬಂಧಿತನಿಂದ 2 ಲಕ್ಷ ನಗದು, 2 ಕಾರ್, ಬ್ರೇಸ್ ಲೇಟ್, ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನ ವಿಚಾರಣೆ ವೇಳೆ ಈತ ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದು ಹೇಳಿಕೊಂಡು ಈವರೆಗೆ ಸುಮಾರು 15 ಮಹಿಳೆಯರಿಗೆ ದೋಖಾ ಮಾಡಿರುವುದು ಬೆಳಕಿಗೆ ಬಂದಿದೆ.
ಮಾತಲ್ಲಿ ಮರುಳು ಮಾಡ್ತಿದ್ದ ಮಹೇಶ್..!
ಹೆಣ್ಣು ಮಕ್ಕಳ ಜೊತೆ ಬಹಳ ನಾಜೂಕಾಗಿ ವರ್ತಿಸುತ್ತಿದ್ದ ಮಹೇಶ್, ತನ್ನ ಪ್ರೀತಿಯ ಮಾತುಗಳಿಂದ ಎಲ್ಲರನ್ನ ಬಲೆಗೆ ಬೀಳಿಸಿಕೊಳ್ತಿದ್ದ. ತನ್ನ ವರ್ತನೆಯಲ್ಲಿ ಯಾರಿಗೂ ಅನುಮಾನ ಬಾರದ ರೀತಿ ತನ್ನ ಕೆಲಸ ಮಾಡಿಕೊಳ್ಳುತ್ತಿದ್ದ. ಹೆಣ್ಮಕ್ಕಳಿಂದ ಪಡೆದ ದುಡ್ಡಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಯಾರೊಬ್ಬರಿಗೂ ಡೌಟ್ ಬಾರದ ರೀತಿ ಇವನ ಜೀವನ ಮುಂದುವರಿದಿತ್ತು. ಹೀಗೆಯೇ ಬರೋಬ್ಬರಿ 15 ಮಂದಿಗೆ ದೋಖಾ ಮಾಡಿದ್ದು, ಈಗ ಕಡೆಗೂ ಪೊಲೀಸರ ಅತಿಥಿಯಾಗಿದ್ದಾನೆ . ಪೊಲೀಸರು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದು, ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.
ಕೆಲ ದಿನಗಳ ಹಿಂದೆ ಮಂಗಳೂರಿನಲ್ಲೂ ಇದೇ ರೀತಿ ಹೆಣ್ಣುಮಕ್ಕಳಿಗೆ ಮೋಸ ಮಾಡುತ್ತಿದ್ದ ಖದೀಮನೊಬ್ಬನ ಬಂಧನವಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಹೆಣ್ಣುಮಕ್ಕಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ಹೆಣ್ಣುಮಕ್ಕಳನ್ನು ಪ್ರೀತಿ ಪ್ರೇಮದ ಬಲೆಗೆ ಬೀಳಿಸಿ ಅವರ ಹಣದಲ್ಲೇ ಮಜಾ ಮಾಡುತ್ತಿದ್ದ. ಸಂತ್ರಸ್ತ ಯುವತಿಯೊಬ್ಬಳು ಈತನ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಆತನ ವಂಚನೆ ಬಯಲಿಗೆ ಬಂದಿತ್ತು. ವಿವಾಹಿತನಾಗಿದ್ದ ಆತ ಶೋಕಿಗೋಸ್ಕರ ಇದನ್ನೆಲ್ಲಾ ಮಾಡುತ್ತಿದ್ದ ಎಂದು ತಿಳಿದು ಬಂದಿತ್ತು.
ನಂಜನಗೂಡು: ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಬ್ಲಾಸ್ಟ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಚಾಮಲಾಪುರದ ನಿವಾಸಿ ಮಂಜುಳ ಸಾವನ್ನಪ್ಪಿರುವ…
ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.…
ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ…
ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಆರಂಭಿಸಲ್ಪಟ್ಟಿದ್ದ ಜನ ಔಷಧ ಕೇಂದ್ರಗಳು ಹಲವು ವರ್ಷಗಳಿಂದ ರಾಜ್ಯದೆಲ್ಲೆಡೆ ಕಾರ್ಯನಿರ್ವಹಿಸುತ್ತಿವೆ. ಕಡು ಬಡಜನರಿಗೆ ಹಾಗೂ…
ಡಿ. 25ರ ಗುರುವಾರ ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟ ಸಂಭವಿಸಿದ್ದು, ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ…
‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ…