ಮೈಸೂರು

ಆದಿವಾಸಿಗಳಿಗೆ ಸಿಗದ ಅರಣ್ಯ ಇಲಾಖೆ ಮಮತೆ

ಮೈಸೂರು ಭಾಗದಲ್ಲಿ ಹತ್ತಾರು ಪ್ರಕರಣ ದಾಖಲು

ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ೧೫೦ ಆದಿವಾಸಿಗಳು

ಅರಣ್ಯವಾಸಿಗಳ ಹಕ್ಕು ರಕ್ಷಣೆ ಇನ್ನೂ ಗಗನಕುಸುಮ

ಮಂಜು ಕೋಟೆ

ಎಚ್.ಡಿ.ಕೋಟೆ: ಅರಣ್ಯದ ಮೇಲೆ ಪ್ರೀತಿ ಇಟ್ಟುಕೊಂಡು ಶತಮಾನಗಳಿಂದ ಮನಃಪೂರ್ವಕವಾಗಿ ಕಾಡು ರಕ್ಷಣೆ ವಾಡುತ್ತಿರುವ ಗಿರಿಜನ ಮಕ್ಕಳಿಗೆ ಅರಣ್ಯ ಇಲಾಖೆ ಎಂಬ ತಾಯಿಯಿಂದಲೇ ಸಿಗುತ್ತಿಲ್ಲ ಮಮತೆ.

ಮೈಸೂರು ಭಾಗದಲ್ಲಿಯೇ ರಾಜ್ಯದ ಮೂರನೇ ಒಂದು ಭಾಗದಷ್ಟು ಗಿರಿಜನರು ಬದುಕು ಕಂಡುಕೊಂಡಿದ್ದಾರೆ. ಆದಿವಾಸಿ ಕರಿಯಪ್ಪನ ಸಾವಿನ ಪ್ರಕರಣ ಈ ಭಾಗದ ಹಾಡಿಗಳಲ್ಲಿ ಭಯ ಮೂಡಿಸಿದೆ. ತಮ್ಮ ಹಕ್ಕುಗಳ ರಕ್ಷಣೆಗಾಗಿ ಆದಿವಾಸಿಗಳು ಹೊಸ ಮಾರ್ಗಗಳನ್ನು ಅರಸುವಂತಾಗಿದೆ.

ಮೈಸೂರು ಜಿಲ್ಲೆಯಲ್ಲಿ  215 , ಚಾಮರಾಜನಗರ ಜಿಲ್ಲೆಯಲ್ಲಿ140, ಕೊಡಗಿನಲ್ಲಿ 145 ಹಾಡಿಗಳಲ್ಲಿ ಒಟ್ಟಾರೆ ಅಂದಾಜು 3 ಲಕ್ಷ ಗಿರಿಜನರು ಇದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿಗೆ ಹೊಂದಿಕೊಂಡಿರುವ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನವನದ ವ್ಯಾಪ್ತಿಯಲ್ಲಿ ಅಧಿಕವಾಗಿದ್ದು, ಹೆಚ್ಚು ದೌರ್ಜನ್ಯದ ಪ್ರಕರಣಗಳೂ ವರದಿಯಾಗುತ್ತಿವೆ.

ಎಚ್‌ಡಿಕೋಟೆ-ಸರಗೂರು ತಾಲ್ಲೂಕಿನ ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಕಾಡಿನೊಳಗೆ ಮತ್ತು ಕಾಡಿನ ಅಂಚಿನಲ್ಲಿರುವ 119 ಹಾಡಿಯಲ್ಲಿ ವಾಸಿಸುತ್ತಿರುವ 685 ಕುಟುಂಬದ 19 ಸಾವಿರ ಗಿರಿಜನರು ಹಲವಾರು ವರ್ಷಗಳಿಂದ ನಡೆಯುತ್ತಿರುವ ಸಾವಿನ ಪ್ರಕರಣದಿಂದಾಗಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅವರನ್ನು ಕಂಡರೆ ಭಯಭೀತಿಯಿಂದ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ.

ಪರಿಶಿಷ್ಟರಿಗೆ ಮೀಸಲಾಗಿರುವ ಹೆಗ್ಗಡದೇವನಕೋಟೆ ಕ್ಷೇತ್ರದಲ್ಲಿ ಗಿರಿಜನರಿಗೆ ಅರಣ್ಯ ಇಲಾಖೆಯವರು ನಡೆಸಿರುವ ಗುಂಡಿನ ದಾಳಿ ಮತ್ತು ಹಲ್ಲೆಗಳಿಂದ ಸಾವನ್ನಪ್ಪಿದ ಅನೇಕ ಕುಟುಂಬಗಳಿಗೆ ಪರಿಹಾರ ಮತ್ತು ನ್ಯಾಯದಿಂದ ಮುಂಚಿತವಾಗಿ ವಿವಿಧ ಪ್ರಕರಣಗಳಿಂದ  150 ಆದಿವಾಸಿ ಜನರು ನ್ಯಾಯಾಲಯಕ್ಕೆ  ಅಲೆದಾಡುತ್ತಿದ್ದಾರೆ.ಗಿರಿಜನರ 6 ಗಂಭೀರ ಪ್ರಕರಣಗಳಲ್ಲಿ 1 ಪ್ರಕರಣ ಮಾತ್ರ ಜೀವಂತವಾಗಿ ಉಳಿದು ನ್ಯಾಯಾಲಯ ಮತ್ತು ಸರ್ಕಾರದ ಪರಿಹಾರಕ್ಕಾಗಿ ಹಾಗೂ ನ್ಯಾಯಕ್ಕಾಗಿ ಭೀಮಸೇನ ಮತ್ತು ರವಿ ಗಿರಿಜನ ಮುಖಂಡರೊಂದಿಗೆ ಹೋರಾಟ ನಡೆಸುತ್ತಿದ್ದಾರೆ.

ಗಿರಿಜನರಿಗೆ ಸಮರ್ಪಕವಾದ ಬೆಂಬಲ ಹಾಗೂ ಅರಿವು ಹಣಕಾಸಿನ ತೊಂದರೆಯಿಂದ ಅರಣ್ಯ ಇಲಾಖೆಯ  ವಿರುದ್ಧವಾಗಿ ನ್ಯಾಯ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಆ ಕುಟುಂಬಗಳಿಗೆ ಪರಿಹಾರ ಮತ್ತು ನ್ಯಾಯ ಮರೀಚಿಕೆಯಾಗಿದೆ.

 

‘ಗಿರಿಜನರು ಮತ್ತು ಅರಣ್ಯ ಇಲಾಖೆಯವರಿಗೆ ಅರಣ್ಯ ಹಕ್ಕು ಕಾಯಿದೆ ವಿಚಾರವಾಗಿ ಅರಿವು ಮೂಡಿಸಬೇಕಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆದಿವಾಸಿ ಜನರಿಗೆ ಸರ್ಕಾರದ ಸೌಲಭ್ಯ ಮತ್ತು ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸಿದಾಗ ಗಿರಿಜನರು ಕಾಡನ್ನು ಅವಲಂಬಿಸುವುದು ಸ್ವಲ್ಪ ಕಡಿಮೆಯಾಗಲಿದೆ ಎನ್ನುವುದು ಗಿರಿಜನ ಮುಖಂಡ ವಡ್ಡರಗುಡಿ ಅವರ ಚಿಕ್ಕಣ್ಣ ಸಲಹೆ.

 

ಅರಣ್ಯ ನಿವಾಸಿಗಳ ಹಕ್ಕುಗಳು ಸಂರಕ್ಷಣೆಯಾಗಬೇಕು ಎಂದು ಒಂದೂವರೆ ದಶಕದ ಹಿಂದೆಯೇ ಕಾಯಿದೆ ರೂಪಿಸಿದರೂ ಅದು ನೆಪ ಮಾತ್ರವಾಗಿದೆ. ಕಾನೂನನ್ನೇ ತಿರುಚುವ ಕೆಲಸ ನಡೆದಿದೆ. ಗಿರಿಜನರನ್ನೇ ಹೊಡೆದು ಸಾಯಿಸುವ ಪ್ರಕರಣಗಳೂ ನಡೆಯುತ್ತಲೇ ಇವೆ. ಅರಣ್ಯ ಇಲಾಖೆಯವರಿಗೆ ಮೊದಲು ಸಂವಿಧಾನದ ಆಂಶವನ್ನು ತಿಳಿಸಿಕೊಡಬೇಕಾಗಿದೆ.

-ಡೀಡ್ ಶ್ರೀಕಾಂತ್. ಗಿರಿಜನಪರ ಹೋರಾಟಗಾರ ಹುಣಸೂರು

ಎಂಥ ಸನ್ನಿವೇಶದಲ್ಲೂ ಅರಣ್ಯ ಇಲಾಖೆ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಿರಿಜನರ ಮೇಲೆ ಅನಗತ್ಯ ಕಿರುಕುಳ ನೀಡಬಾರದು ಎನ್ನುವ ಸೂಚನೆಯನ್ನು ನೀಡಿದ್ದೇವೆ. ಬಹಳಷ್ಟು ಕಡೆ ಸೌಹಾರ್ದಯುತ ವಾತಾವರಣ ಈಗಲೂ ಇದೆ. ಪ್ರಾಣಿಬೇಟೆ, ಕಳ್ಳತನದಂಥ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಆದರೆ, ಜೀವಹಾನಿಯಂತಹ ಪ್ರಕರಣ ಆಗಬಾರದು.

-ಕುಮಾರ ಪುಷ್ಕರ್, ಎಪಿಸಿಸಿಎಫ್, ವನ್ಯಜೀವಿ ವಿಭಾಗ ಬೆಂಗಳೂರು.

ಇನ್ನೂ ಕ್ರಮವಿಲ್ಲವೇಕೆ?

20 ದಿನದ ಹಿಂದೆಯೇ ಅರಣ್ಯ ಇಲಾಖೆ ದೌರ್ಜನ್ಯದಿಂದ ಕರಿಯಪ್ಪ ಎಂಬ ಗಿರಿಜನ ವ್ಯಕ್ತಿ ಮೃತಪಟ್ಟು ಆರ್‌ಎಫ್‌ಒ ಸಹಿತ 17ಮಂದಿ ವಿರುದ್ದ ಮೊಕದ್ದಮೆ ದಾಖಲಾಗಿದೆ. ಈವರೆಗೂ ಅವರನ್ನು ಬಂಧಿಸಿಲ್ಲ. ಅರಣ್ಯ ಇಲಾಖೆಯೂ ಕ್ರಮ ಕೈಗೊಂಡಿಲ್ಲ. ಚಿಕ್ಕಮಗಳೂರಿನಲ್ಲಿ ಕೆಲ ದಿನಗಳ ಹಿಂದೆ ಗಿರಿಜನ ವ್ಯಕ್ತಿ ಮೇಲೆ ದಾಳಿ ಮಾಡಿದವರನ್ನು ಅಲ್ಲಿನ ಪೊಲೀಸರು ಬಂಧಿಸಲು ಸಾಧ್ಯವಾದರೆ ಮೈಸೂರು ಜಿಲ್ಲಾ ಪೊಲೀಸರು ಯಾಕೆ ಕ್ರಮ ವಹಿಸಿಲ್ಲ ಎನ್ನುವುದು ಇಲ್ಲಿನ ಗಿರಿಜನರ ಪ್ರಶ್ನೆ.

andolana

Recent Posts

ಹುಣಸೂರು| ಅಪೆ ಆಟೋ ಕೆರೆಗೆ ಉರುಳಿ ಚಾಲಕ ಸಾವು

ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಅಪೆ ಆಟೋವೊಂದು ಕೆರೆಗೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯಲ್ಲಿ…

9 mins ago

ಓದುಗರ ಪತ್ರ: ಸಾರ್ವಜನಿಕ ಶೌಚಾಲಯ ನಿರ್ಮಿಸಿ

ಎಚ್.ಡಿ.ಕೋಟೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಅನೈರ್ಮಲ್ಯ ವಾತಾವರಣ…

15 mins ago

ಓದುಗರ ಪತ್ರ:  ವಿಮಾ ವಲಯದಲ್ಲಿ ಶೇ.೧೦೦ ಎಫ್ಡಿಐ ಜನ ವಿರೋಧಿ

ವಿಮಾ ವಲಯದಲ್ಲಿ ಶೇ. ೧೦೦ ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ(ಎ-ಡಿಐ)ಯಿಂದ ವಿಮಾ ರಕ್ಷಣೆ ಪಡೆದ ಜೀವಗಳ ಮತ್ತು ಆಸ್ತಿಗಳ…

43 mins ago

ಓದುಗರ ಪತ್ರ: ಸಜ್ಜನ ರಾಜಕಾರಣಿಯಾಗಿದ್ದ ಶಾಮನೂರು ಶಿವಶಂಕರಪ್ಪ

ರಾಜ್ಯದ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರೆನಿಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪನವರ ನಿಧನ ನಿಜಕ್ಕೂ ನೋವಿನ ಸಂಗತಿ. ದೇಶದ…

49 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಅಂಚೆ ಚೀಟಿ ಮೂಲಕ ಟಿಪ್ಪು ಸುಲ್ತಾನ್ ವಂಶಸ್ಥೆಯನು ಗೌರವಿಸಿದ ಫ್ರಾನ್ಸ್‌

ಶತ್ರುಗಳಿಗೆ ಸೆರೆ ಸಿಕ್ಕು ಚಿತ್ರ ಹಿಂಸೆ ಅನುಭವಿಸಿದರೂ ಗುಟ್ಟು ಬಿಡದ ನೂರ್ ಇನಾಯತ್ ಖಾನ್‌  ನವೆಂಬರ್ ತಿಂಗಳಲ್ಲಿ ಫ್ರಾನ್ಸ್ ಸರ್ಕಾರ…

58 mins ago

ಮಂಜಿನ ನಗರಿಯಲ್ಲಿ ಮೈ ಕೊರೆಯುವ ಚಳಿ

ಹೆಚ್ಚುತ್ತಿರುವ ಶೀತ ವಾತಾವರಣ; ಸದ್ಯಕ್ಕಿಲ್ಲ ಮಳೆಯ ಆತಂಕ  ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದ್ದು, ಫೆಬ್ರವರಿವರೆಗೆ ಇದೇ…

2 hours ago