ಮೈಸೂರು : ಜಿಣುಗುಟ್ಟುತ್ತಿರುವ ಮಳೆಯಿಂದಾಗಿ ನಗರದಾದ್ಯಂತ ಸಾಕಷ್ಟು ಕಾಲುವೆಗಳು ತುಂಬಿ ಹರಿಯುತ್ತಿವೆ. ಕಳೆದ ಅಕ್ಷೋಬರ್ ನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಜೆಎಲ್ ಬಿ ರಸ್ತೆಯ ಚಾಮುಂಡಿಪುರಂ ಸಮೀಪದ ರಾಜಕಾಲುವೆಯಲ್ಲಿ ಹರಿದುಬಂದ ನೀರಿನೊಟ್ಟಿಗೆ ಮೊಸಳೆಯೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿತ್ತು. ಮೂರ್ನಾಲ್ಕು ಗಂಟೆಗಳ ತನಕ ಈ ಮೊಸಳೆ ಇಲ್ಲಿಯೇ ಇತ್ತು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಬರುವಷ್ಟರಲ್ಲಿ ಅದು ಪೊದೆಗಳ ಮಧ್ಯೆ ಮರೆಯಾಗಿದ್ದರಿಂದ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಅಕ್ಟೋಬರ್ 29 ರಂದು ಮೊಸಳೆ ನೀರಿನಿಂದ ಮೇಲೆ ಬಂದು ಸೀವೇಜ್ ಫಾರಂ ಬಳಿಯ ಕಾಲ ಸಂಕದ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಜನರ ಸದ್ದು ಗದ್ದಲದ ನಡುವೆ ಸಾಕಷ್ಟು ಕಾಲ ಮೊಸಳೆ ಈ ಜಾಗ ಬಿಟ್ಟು ಕದಲಿರಲಿಲ್ಲ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೊಸಳೆಯನ್ನು ಸೆರೆ ಹಿಡಿಯಲು ಮತ್ತೆ ವಿಫಲವಾದರು ಪರಿಣಾಮ ಇಂದು ಬೆಳಿಗ್ಗೆ ನಗರದ ರಾಮಾನುಜ ರಸ್ತೆಯ 9ನೇ ಕ್ರಾಸ್ ಬಳಿ ಇರುವ ಕೆರೆಯ ದಡದಲ್ಲಿ ಮೊಸಳೆ ಬಾಯಿಗೆ ಹಸು ಬಲಿಯಾಗಿರುವ ಘಟನೆ ನಡೆದಿದ್ದು ಅದೇ ಮೊಸಳೆಯೇ ಹಸುವನ್ನು ತಿಂದು ಹಾಕಿದೆಯೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ನೀರನ್ನು ಕುಡಿಯಲು ಹೋದ ಹಸುವನ್ನು ಎಳೆದೊಯ್ದು ಮೊಸಳೆ ತಿಂದು ಹಾಕಿದೆ ಎನ್ನುತ್ತಿದ್ದಾರೆ. ಆದರೆ ಸಾವಿಗೀಡಾದ ಹಸುವಿನ ಮಾಲೀಕರು ಹಸು ಸಾವಿಗೆ ಮೊಸಳೆಯೇ ಕಾರಣ ಇಂದು ಬೆಳಿಗ್ಗೆ ಮೇಯಲು ಬಿಟ್ಟಿದ್ದ ಹಸುವನ್ನು ಮೊಸಳೆಯೇ ಕೆರೆಯ ಒಳಗೆ ಎಳೆದುಕೊಂಡು ಹೋಗಿರುವುದನ್ನು ನಾವೇ ನೋಡಿದ್ದೇವೆ ಹಸು ಸಾವಿಗೆ ಮೊಸಳೆಯೇ ಕಾರಣ ಎಂದು ಹೇಳುತ್ತಿದ್ದಾರೆ. ಸದ್ಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೊಸಳೆಯನ್ನು ಸೆರೆಹಿಡಿಯಲು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್ ಎಫ್ ಓ ಸುರೇಂದ್ರ, ಡಿ ಆರ್ ಎಫ್ ವೆಂಕಟಾಚಲ ಹಾಗೂ ಸಿಬ್ಬಂದಿಗಳು ಸೇರಿದಂತೆ ಒಟ್ಟು 6 ಜನ ಸಿಬ್ಬಂದಿಗಳು ಮೊಸಳೆಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಬಗ್ಗೆ ಆಂದೋಲನದೊಟ್ಟಿಗೆ ಮಾತನಾಡಿ ಅವರು ಮೊಸಳೆಯನ್ನು ಹಿಡಿಯಲು ಬೆಳಿಗ್ಗೆ 11.30 ರಿಂದ ಕಾರ್ಯಾಚರಣೆಯ ಆರಂಭವಾಗಿದ್ದು, ಕೆರೆಯಲ್ಲಿರುವ ನೀರನ್ನು ಮೋಟಾರ್ ಬಳಸಿ ಹೊರೆಚೆಲ್ಲಿಸಿ ತದ ನಂತರ ಮೊಸಳೆಯನ್ನು ಸೆರೆ ಹಿಡಿಯಲಾಗುವುದು ಎಂದರು. ಇವತ್ತಿನ ಕಾರ್ಯಚರಣೆಯಲ್ಲಿ ಮೊಸಳೆ ಸಿಗದ ಕಾರಣ ನಾಳೆ ಬೆಳಿಗ್ಗೆ ಮತ್ತೆ ಕಾರ್ಯಚರಣೆ ಆರಂಭಿಸುತ್ತೇವೆ ಎಂದು ಅರಣ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಂಡ್ಯ: ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದು ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ನಗದು ದರೋಡೆ ಮಾಡಿರುವ ಘಟನೆ ಮಂಡ್ಯ…
ಹೈದರಾಬಾದ್: ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್ಗೆ ನೋಟಿಸ್ ನೀಡಲಾಗಿದೆ. ನಾಳೆ ಬೆಳಿಗ್ಗೆ 11…
ಬೆಂಗಳೂರು: ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಂದು ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ…
ಮುಂಬೈ: ಬಾಲಿವುಡ್ನ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಂದು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ…
ಜೈಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ…
ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…