ಮೈಸೂರು

ದೇಶದ ಭವಿಷ್ಯ ನಿರೂಪಿಸುವ ಹೊಣೆ ಶಿಕ್ಷಕರದ್ದು : ಶಾಸಕ ಜಿಟಿಡಿ

ಮೈಸೂರು : ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಸಂಸ್ಕೃತಿಯನ್ನು ದೂರ ಮಾಡಿಸುವ ಜತೆಗೆ,ದೇಶದ ಭವಿಷ್ಯವನ್ನು ನಿರ್ಮಿಸುವ ಮಕ್ಕಳನ್ನುತಯಾರು ಮಾಡುವ ಹೊಣೆ ಶಿಕ್ಷಕರದ್ದಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ ಹಾಲ್‌ನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ಅವರ ಜನ್ಮ ದಿನಚರಣೆ ಅಂಗವಾಗಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಬರುತ್ತಿದೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ.ಅಂತಹವರನ್ನು ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು.

ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳ ಸೌಲಭ್ಯ ಒದಗಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆ ಮಾಡುವುದು ಹೆಚ್ಚಾಗಿದೆ. ಓದುವ ಮಕ್ಕಳಲ್ಲಿ ಮೊಬೈಲ್ ಬಳಸದಂತೆಹಾಗೂ ಮೊಬೈಲ್ ಸಂಸ್ಕೃತಿಯನ್ನು ದೂರವಿರಿಸಿ ಶಿಕ್ಷಣದ ಕಡೆಗೆ ಗಮನಹರಿಸುವಂತೆ ಮಾಡಬೇಕು.

ಪ್ರತಿಭಾವಂತ ಮಕ್ಕಳನ್ನು ತಯಾರು ಮಾಡುವ ಜವಾಬ್ದಾರಿ ಅರಿತು ಕೆಲಸಮಾಡಬೇಕು ಎಂದರು. ಬಡವರ ಮಕ್ಕಳು ಮೆರಿಟ್‌ನಲ್ಲಿ ತೇರ್ಗಡೆ ಹೊಂದುವಂತೆ ಮಾಡಬೇಕು. ಬಡವರ ಮಕ್ಕಳಿಗೆ ಶಿಕ್ಷಣಕೊಡಿಸುವ ಅವಕಾಶವನ್ನು ದೇವರು ಕಲ್ಪಿಸಿದ್ದಾನೆ. ಸಂಬಳಕ್ಕಾಗಿ ಕೆಲಸ ಮಾಡದೆ ನಿಸ್ವಾರ್ಥ ಸೇವೆಯನ್ನು ಇಟ್ಟುಕೊಂಡುಕೆಲಸಮಾಡಬೇಕಿದೆ. ನಮ್ಮ ತಂದೆ ಬಡವರು.

ಹಸು ಸಾಕಲು ಊರಿನ ಹೊರಗೆ ಹುಲ್ಲು ತರುತ್ತಿದ್ದೆ. ಕುಟುಂಬದ ಹೊಣೆ ಹೊತ್ತು ಹಗಲುರಾತ್ರಿ ಕೆಲಸ ಮಾಡಿದ್ದೇನೆ. ಸೊಸೈಟಿಯಲ್ಲಿ ಅಕ್ಕಿ ಅಳೆಯುತ್ತಿದ್ದೆ. ಅಲ್ಲಿಯೇ ಮಲಗಿ ಜನರ ಸಂಪಾದನೆ ಮಾಡಿದೆ. ನಂತರ,ಸಹಕಾರ ಕ್ಷೇತ್ರದಿಂದ ಮೇಲಕ್ಕೆ ಬಂದಿದ್ದೇನೆ ಎಂದರು. ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು ತಮ್ಮ ಶಾಲೆಯನ್ನು ಹದ್ದುಬಸ್ತಿನಲ್ಲಿಡಬೇಕು.

ಶೌಚಾಲಯ,ಕುಡಿಯುವ ನೀರಿನ ಗಮನಹರಿಸಬೇಕು. ಕೆಲವು ಗ್ರಾಮಗಳ ಶಾಲೆಗಳಲ್ಲಿ ಕಸ ಕ್ಲೀನ್ ಮಾಡದೆ ಕೆಲವು ಕಡೆ ಹಾಗೆಯೇ ಬಿದ್ದಿರುತ್ತದೆ. ಬರೀ ಪಾಠ ಮಾಡುವುದಕ್ಕೆ ಮಾತ್ರಮುಖ್ಯ ಶಿಕ್ಷಕರ ಕೆಲಸವಲ್ಲ. ಶಾಲೆಯನ್ನು ತಮ್ಮ ಮನೆಯಂತೆ ಜವಾಬ್ದಾರಿಯಿಂದ ಗಮನಿಸಬೇಕು. ಶಾಲೆಗಳ ಸರ್ವೆ ಮಾಡಿ ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಭ್ರಷ್ಟಾಚಾರರಹಿತ ಕ್ಷೇತ್ರ:ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಭ್ರಷ್ಟಾಚಾರ ಇಲ್ಲದೆ ನಡೆಯುತ್ತಿರುವ ಕ್ಷೇತ್ರ ಇದ್ದರೆ ಅದು ಶಿಕ್ಷಕರ ಕ್ಷೇತ್ರವಾಗಿದೆ. ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವುದಾದರೇ ಅದು ಶಿಕ್ಷಕರು ಮಾತ್ರ ಎಂದು ಬಣ್ಣಿಸಿದರು.

ಡಾ.ರಾಧಾಕೃಷ್ಣನ್ ಅವರ ಬಗ್ಗೆ ಹೇಳಬೇಕಿಲ್ಲ. ದೇಶದಲ್ಲೇ ತತ್ವಜ್ಞಾನಿ,ದೊಡ್ಡ ಮೇಧಾವಿಯಾಗಿದ್ದರು. ಒಬ್ಬ ಶಿಕ್ಷಕರೊಬ್ಬರು ಏನೆಲ್ಲಾ ಪದವಿಗಳನ್ನು ಪಡೆಯಬಹುದು ಎಂಬುದಕ್ಕೆ ಅವರೇ ಉದಾಹರಣೆಯಾಗಿದ್ದಾರೆ. ಶಿಕ್ಷಕರು ದೇಶದ ಭವಿಷ್ಯವನ್ನು ನಿರ್ಮಿಸುವ ಹೊಣೆ ಹೊಂದಿದ್ದಾರೆ. ಶಿಕ್ಷಕರ ದಿನಾಚರಣೆತ ದಿನದಂದು ಪ್ರಧಾನಮಂತ್ರಿಗಳು,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಶಿಕ್ಷಕರನ್ನುನೆನಪಿಸಿಕೊಂಡರು. ನಡಿಗೆ ಮೂಲಕ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಿ ಬರುತ್ತಿದ್ದರು. ಈಗ ರಸ್ತೆ,ಬಸ್ ವ್ಯವಸ್ಥೆ ಮಾಡಿಕೊಡಲಾಗಿದೆ. ಶಿಕ್ಷಣ,ಕಲೆ,ಸಾಹಿತ್ಯ,ಸಂಗೀತ,ಯೋಗ,ಧ್ಯಾನ ಕಲಿಸಬೇಕು ಎಂದರು.

ದಲಿತ ಮಹಿಳೆ ಸಾವಿತ್ರಿಬಾಪುಲೆ ಅವರು ಶಾಲೆಯನ್ನು ತೆರೆದು ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಿದರು. ಮೊದಲ ಶಿಕ್ಷಕಿಯಾಗಿ ಕೆಲಸ ಮಾಡಿದ ಸಾವಿತ್ರಿಬಾಪುಲೆ ಅವರ ತತ್ವ,ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಾಗಬೇಕು. ಕಲಿಸು ಫೌಂಡೇಷನ್‌ನಿಂದ ೨೦ ಲಕ್ಷ, ಕೆನರಾ ಬ್ಯಾಂಕ್‌ನಿಂದ ೧ ಕೋಟಿ, ಟಿವಿಎಸ್,ಐಟಿಸಿ ಕಂಪೆನಿ,ಸಾಯಿ ಗಾರ್ಮೆಂಟ್ಸ್, ಜೆ.ಕೆ.ಟೈರ್ಸ್‌ ಸೇರಿದಂತೆ ಅನೇಕ ಕಂಪನಿಗಳು,ಕಾರ್ಖಾನೆಯವರು ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಮಾರ್ಟ್‌ಕ್ಲಾಸ್ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಶಿಕ್ಷಕರು ತುಂಬಾ ಸಂತೋಷದಿಂದ ಬಂದಿದ್ದಾರೆ. ಗುರುಗಳ ಸ್ಥಾನದಲ್ಲಿ ಇರುವ ಶಿಕ್ಷಕರು ಉತ್ತಮ ಪ್ರಜೆಗಳನ್ನರೂಪಿಸಬೇಕು. ಶಿಸ್ತನ್ನುಕಾಪಾಡಿಕೊಳ್ಳಬೇಕು.

ಶಾಲೆಗಳಿಗೆ ಬೇಕಾದ ಕೊಠಡಿಗಳು,ಕುಡಿಯುವ ನೀರು,ಶೌಚಾಲಯ ಇಲ್ಲವೆಂದರೆ ಕಟ್ಟಿಸಿಕೊಡುವ ಶ್ರೀಮಂತರು ಇಲ್ಲೇ ಕುಳಿತಿದ್ದಾರೆ.ಆದರೆ,ಶಿಕ್ಷಕರು ಪದೇ ಪದೇ ಎದ್ದು ಹೋಗಿ ಮಾಡುವುದು ಸರಿಯಲ್ಲ. ಶಿಕ್ಷಕರೇ ಶಿಸ್ತು ಕಲಿಯದಿದ್ದರೆ ಬೇರೆಯವರಿಗೆ ಹೇಗೆ ಕಲಿಸಲು ಸಾಧ್ಯವಿದೆ ಎಂದು ಬೇಸರಿಸಿದರು.

ಇಂದು ಇರುವ ಜಮೀನುಗಳನ್ನುಮಾರಾಟ ಮಾಡಿ ಮದುವೆ ಮಾಡುವುದು ಹೆಚ್ಚಾಗುತ್ತಿದೆ. ಶಿಕ್ಷಕರು ಸರಳ ವಿವಾಹದ ಬಗ್ಗೆ ಅರಿವು ಮೂಡಿಸಬೇಕು. ಸಮಾಜವನ್ನು ಬದಲಿಸುವ ಕೆಲಸ ಮಾಡಬೇಕು. ನಾನೇನನ್ನ ಮಗ,ಇಬ್ಬರು ಹೆಣ್ಣು ಮಕ್ಕಳಿಗೆ ತಿರುಪತಿಯಲ್ಲಿ, ತಮ್ಮನ ಮಗನ ಮದುವೆಯನ್ನು ಧರ್ಮಸ್ಥಳದಲ್ಲಿ ಮದುವೆ ಮಾಡಿದ್ದೇನೆ. ಹಾಗಾಗಿ, ಹೆಣ್ಣು ಮಕ್ಕಳಿಗೆ ಸರಳ ವಿವಾಹ ಮಾಡಿ ಅವರ ಹೆಸರಿನಲ್ಲಿ ಜಮೀನು ಬರೆದುಕೊಡಬೇಕು ಎಂದು ನುಡಿದರು.ಜಿಪಂ ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿ.ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್ ಮತ್ತಿತರರು ಹಾಜರಿದ್ದರು. ಮೈಸೂರಿನ ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ ಹಾಲ್‌ನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ಅವರ ಜನ್ಮ ದಿನಚರಣೆ ಅಂಗವಾಗಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು..ಜಿಪಂ ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿ.ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್ ಮತ್ತಿತರರು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ವಾಚ್‌ ವಿಚಾರವಾಗಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ…

3 mins ago

ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ: ಸಚಿವ ದಿನೇಶ್‌ ಗುಂಡೂರಾವ್‌

ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.…

48 mins ago

ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ

ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…

58 mins ago

ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ, ಶ್ರೀ ನಂಜುಂಡಸ್ವಾಮಿಗಳ 16ನೇ ಸಂಸ್ಮರಣೋತ್ಸವ

ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…

1 hour ago

ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…

1 hour ago

ಮಂಡ್ಯ ಕೃಷಿ ಪ್ರದಾನ ಜಿಲ್ಲೆ: ಸಿಎಂ ಸಿದ್ದರಾಮಯ್ಯ

ಮಂಡ್ಯ: ಲ್ಯಾಬ್‌ ಟು ಲ್ಯಾಂಡ್‌ ಆದರೆ ಮಾತ್ರ ರೈತರಿಗೆ ಸಂಪೂರ್ಣ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತು…

2 hours ago