ತಲಕಾಡು (ತಿ.ನರಸೀಪುರ ತಾ.): ನದಿ ನೀರಿಗಿಳಿದು ಐವರು ಗೆಳೆಯರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಮೇದಿನಿ ಗ್ರಾಮದ ಶ್ರೀ ರಾಮ ಕಟ್ಟೆಯ ನದಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಕೊಳ್ಳೇಗಾಲ ಮೂಲದ ಭರತ್ (17) ಮತ್ತು ಲಿಖಿತ್ (18) ಎಂಬ ವಿದ್ಯಾರ್ಥಿಗಳು ಮೃತಪಟ್ಟವರು. ಭರತ್, ಲಿಖಿತ್, ಅಕ್ಷಯ್, ಡ್ಯಾನಿಯಲ್, ಭಾರತ್ ಎಂಬ ಐವರು ಕೊಳ್ಳೇಗಾಲ ಪಟ್ಟಣದ ಮಾನಸ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ಇತ್ತೀಚೆಗಷ್ಟೇ ಪರೀಕ್ಷೆ ಬರೆದಿದ್ದರು. ಶನಿವಾರ ಮಧ್ಯಾಹ್ನ ವಿಹಾರಾರ್ಥವಾಗಿ ಮೇದಿನಿ ಶ್ರೀರಾಮ ಅಣೆಕಟ್ಟೆಯ ಬಳಿಗೆ ತೆರಳಿದ್ದರು.
ಭರತ್ ಹಾಗೂ ಲಿಖಿತ್ ನದಿಗಿಳಿದು ನೀರಿನಲ್ಲಿ ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ನೀರಿನ ಆಳಕ್ಕೆ ಜಾರಿದ್ದಾರೆ. ಇಬ್ಬರಿಗೂ ಈಜು ಬಾರದ್ದರಿಂದ ಅಪಾಯದಿಂದ ಪಾರಾಗಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ನೀರಿನ ರಭಸ ಹೆಚ್ಚಿದ್ದರಿಂದ ಕಟ್ಟೆಯ ಗೇಟ್ ಒಳಗಡೆಯಿಂದ ಹೊರನದಿಗೆ ನೂಕಲ್ಪಟ್ಟಿರಬಹುದು ಎಂದು ಅಂದಾಜು ನಡೆಸಿದ ಪೊಲೀಸರು, ಗೇಟ್ ಬಳಿ ಸೇರಿದಂತೆ ಗೇಟ್ ಕೆಳಭಾಗದ ನದಿ ಉದ್ದಕ್ಕೂ ಶವಗಳ ಶೋಧನೆ ನಡೆಸಿದ್ದಾರೆ.
ಸ್ಥಳಕ್ಕೆ ತಲಕಾಡು ಠಾಣೆಯ ಪೊಲೀಸರು ಧಾವಿಸಿದ್ದು, ಶವದ ಶೋಧನೆಗೆ ನೆರವಾಗಿದ್ದಾರೆ. ಜಿಲ್ಲಾ ಅಡಿಷನಲ್ ಎಸ್‌ಪಿ ಮಲಿಕ್, ನಂಜನಗೂಡು ಡಿವೈಎಸ್‌ಪಿ ರಘು, ತಲಕಾಡು ಎಸ್‌ಐ ಆನಂದ್ ಕುಮಾರ್, ಎಸ್‌ಐ ಮಹದೇವು, ಎಎಸ್‌ಐ ನಾಗೇಂದ್ರ, ಸಿಬ್ಬಂದಿ ವರ್ಗ, ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹಗಳ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…