ಮೈಸೂರು

ಪ್ರತ್ಯೇಕ ಪ್ರಕರಣ | 48 ಲಕ್ಷ ರೂ ವಂಚನೆ

ಮೈಸೂರು : ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆನ್‌ಲೈನ್ ವಂಚನೆಗೆ ಒಳಗಾಗಿರುವ ಮೂವರು ಸುಮಾರು ೪೮ ಲಕ್ಷ ರೂ.ಗಳನ್ನು ವಂಚಕರ ಖಾತೆಗೆ ಜಮೆ ಮಾಡಿ ಕಳೆದುಕೊಂಡಿದ್ದಾರೆ.

ಮೊದಲನೇ ಪ್ರಕರಣದಲ್ಲಿ ವಿವೇಕಾನಂದನಗರ ನಿವಾಸಿ,ಯೋಗ ಶಿಕ್ಷಕಿಯೊಬ್ಬರು ವಂಚಕನ ಮಾತಿಗೆ ಮರುಳಾಗಿ ೧೦.೦೯ ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಜರ್ಮನ್ ದೇಶದ ಪ್ರಜೆ ಎಂದು ಪರಿಚಯಿಸಿಕೊಂಡ ಅಪರಿಚಿತ ತಾನು ಯೋಗ ಶಾಲೆಗೆ ದಾಖಲಾಗುವುದಾಗಿ ಹೇಳಿಕೊಂಡಿದ್ದಾನೆ. ನಂತರ ನೀವು ಯೋಗ ಶಿಕ್ಷಣವನ್ನು ಉತ್ತಮವಾಗಿ ಹೇಳಿಕೊಡುತ್ತೀರಿ. ಹೀಗಾಗಿ ನಿಮಗೆ ೫೦ ಲಕ್ಷ ರೂ. ಬೆಲೆಬಾಳುವ ಉಡುಗೊರೆ ನೀಡುತ್ತಿರುವುದಾಗಿ ತಿಳಿಸಿದ್ದಾನೆ. ನಂತರ ಇಲ್ಲಿ ಕಸ್ಟಮ್ಸ್ ಹಣ ಪಾವತಿಸಬೇಕು. ಹೀಗಾಗಿ ೧೦.೦೯ ಲಕ್ಷ ರೂ.ಗಳನ್ನು ಖಾತೆಗೆ ಹಾಕುವಂತೆ ತಿಳಿಸಿದ್ದಾನೆ. ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹೀಗಾಗಿ ಅವರಿಗೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

ಎರಡನೇ ಪ್ರಕರಣದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ವಂಚಕರ ಮಾತನ್ನು ನಂಬಿದ ಗೋಕುಲಂನ ವ್ಯಕ್ತಿಯೊಬ್ಬರು ೨೯.೦೪ ಲಕ್ಷ ರೂ. ಕಳೆದುಕೊಂಡಿದ್ದಾರೆ.
ಇನ್ಸ್ಟಾ ಗ್ರಾಂ ಮೂಲಕ ಅವರು ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡಿದ್ದಾರೆ. ನಂತರ ಅಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ವಂಚಕರು ಹೇಳಿದಂತೆ ಅವರ ಖಾತೆಗೆ ಹಣ ಜಮೆ ಮಾಡಿದ್ದಾರೆ. ನಂತರ ಅವರಿಗೆ ಯಾವ ಲಾಭವೂ ಬಂದಿಲ್ಲ. ನಂತರ ಅವರಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.

ಇದನ್ನೂ ಓದಿ:-ಶ್ವಾನ ಪ್ರದರ್ಶನ : ಜರ್ಮನ್ ಶಫರ್ಡ್‌ಗೆ ಮೊದಲ ಸ್ಥಾನ

ಮೂರನೇ ಪ್ರಕರಣದಲ್ಲಿ ಆನ್‌ಲೈನ್ ಮೂಲಕ ಉದ್ಯೋಗ ಗಿಟ್ಟಿಸಿದ್ದ ಮಹಿಳೆಯೊಬ್ಬರು ನಂತರ ನಕಲಿ ಕಂಪೆನಿ ಸಿಬ್ಬಂದಿಯ ಮಾತನ್ನು ನಂಬಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಮೂಲಕ ೮ ಲಕ್ಷ ರೂ. ಕಳೆದುಕೊಂಡಿದ್ದಾರೆ.
ಚಲನಚಿತ್ರಗಳನ್ನು ಪ್ರಮೋಟ್ ಮಾಡುವ ಕೆಲಸಕ್ಕೆ ಸೇರಿದ ಮಹಿಳೆ ಮೊದಲು ೬ ಸಾವಿರ ರೂ. ಗಳನ್ನು ನಕಲಿ ಕಂಪೆನಿ ಮೂಲಕ ಪಡೆದಿದ್ದಾರೆ. ನಂತರ ಷೇರು ಮಾರುಕಟ್ಟೆ ಬಗ್ಗೆ ಅವರಿಂದ ಉತ್ತೇಜಿತರಾದ ಆಕೆ ೮ ಲಕ್ಷ ರೂ.ಗಳನ್ನು ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

42 mins ago

ಓದುಗರ ಪತ್ರ: ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆ ಅಕ್ಷಮ್ಯ

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…

44 mins ago

ಓದುಗರ ಪತ್ರ: ಅಮೆರಿಕ ಅಧ್ಯಕ್ಷರ ಹುಚ್ಚುತನ

ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…

47 mins ago

ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮ

ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…

50 mins ago

ಬಾಚಳ್ಳಿ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…

55 mins ago