ಮೈಸೂರು

ರಾಜ್ಯ ಬಜೆಟ್‌ ಹಲಾಲ್‌ ಬಜೆಟ್‌ ಎಂಬ ಬಿಜೆಪಿ ಹೇಳಿಕೆ: ಸೌಮ್ಯ ರೆಡ್ಡಿ ತಿರುಗೇಟು

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್‌ ಅನ್ನು ಬಿಜೆಪಿಯೂ ರಾಜ್ಯ ಬಜೆಟ್ ಮುಸ್ಲಿಮರ ತುಷ್ಟೀಕರಣ,ಹಲಾಲ್ ಬಜೆಟ್ ಎಂಬ ಬಿಜೆಪಿ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕೆಪಿಸಿಸಿ ಮಹಿಳಾ ಅಧ್ಯಕ್ಷರಾದ ಸೌಮ್ಯರೆಡ್ಡಿ ತಿರುಗೇಟು ನೀಡಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ  ಇಂದು(ಮಾರ್ಚ್‌.9) ಈ ಕುರಿತು ಸುದ್ದಿಗೋಷ್ಠಿಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಹೊಟ್ಟೆಉರಿ ತಡೆದುಕೊಳ್ಳಲು ಆಗುತ್ತಿಲ್ಲ. ಅಸೂಯೆಯಿಂದ ಹಾಗೇ ಹೇಳಿಕೆ ನೀಡುತ್ತಾರೆ, ಅಸೂಯೆಗೆ ಮಂದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಯಾರು ನಿರೀಕ್ಷೆ ಮಾಡದಿರುವ ಒಂದೊಳ್ಳೆ ಬಜೆಟ್‌ ಅನ್ನು ಮಂಡಿಸಿದ್ದಾರೆ. ಅಲ್ಲದೇ ರಾಜ್ಯದ ಸಮಗ್ರ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ನೀಡಿದ್ದಾರೆ ಎಂದರು.

ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ರಾಜೀವ್ ಗಾಂಧಿಯವರ ಕನಸು

ದೇಶದಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕೆಂಬುದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಕನಸಾಗಿತ್ತು. ಅಂತೆಯೇ ಮಹಿಳೆಯರ ಅಭಿವೃದ್ಧಿಗೆ ಸಿದ್ದರಾಮಯ್ಯನವರು ರಾಜ್ಯ ಬಜೆಟ್‌ನಲ್ಲಿ ಸುಮಾರು 93 ಸಾವಿರ ಕೋಟಿ ರೂ. ನೀಡಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ವಿರೋಧಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮಹಿಳಾ ಸಮಾನತೆಗಾಗಿ ಆಗಿಂದಲೂ ಹೋರಾಟ ನಡೆಯುತ್ತಿದೆ. ಆದರೆ ಮಹಿಳೆಯರಿಗೆ ಇನ್ನೂ ಸಹ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಅಲ್ಲದೇ ಬಿಜೆಪಿಯವರು ಶೇ.33% ಮಹಿಳಾ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳಿಕೊಂಡು ಬರುತ್ತಾರೆ. ಆದರೆ ಅದನ್ನು ಇಲ್ಲಿಯವೆಗೂ ಜಾರಿ ಮಾಡಿಲ್ಲ. ಹೀಗಾಗಿ ನಮಗೂ ಕಾಲ ಬರಲಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬಂದಾಗ ಮಹಿಳಾ ಮೀಸಲಾತಿಯನ್ನು ಶೇ.33% ರಷ್ಟು ಜಾರಿ ಮಾಡುತ್ತದೆ ಎಂದು ತಿಳಿಸಿದರು.

ಅರ್ಚನ ಎಸ್‌ ಎಸ್

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

6 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

7 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

8 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

10 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

10 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

11 hours ago