ನಂಜನಗೂಡು ಬಸ್ ನಿಲ್ದಾಣದಲ್ಲಿ ದಾರುಣ ಘಟನೆ
ನಂಜನಗೂಡು: ತಂದೆ ಎದುರೇ ಮಗ ಬಸ್ ನಿಲ್ದಾಣದಲ್ಲಿ ಬಸ್ ಚಕ್ರಕ್ಕೆ ಸಿಲುಕಿ ಸಾವಿಗೀಡಾದ ದಾರುಣ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ನಂಜನಪುರದ ಪ್ರಕಾಶ ಅವರ ಪುತ್ರ ಪ್ರಜ್ವಲ್ (೧೪) ಮೃತಪಟ್ಟ ಬಾಲಕ. ಊರಿಗೆ ತೆರಳಲು ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಈ ದುರಂತ ನಡೆದಿದೆ.
ತಂದೆ ಬಸ್ ಹತ್ತಿದ್ದು ಮಗ ಪ್ರಜ್ವಲ್ ಮುಂಬಾಗಿಲಿನಲ್ಲಿ ಹತ್ತಲು ಹೋದಾಗ ಹಿಂಬಂದಿಯಲ್ಲಿ ಹತ್ತು ಎಂಬ ಧ್ವನಿ ಕೇಳಿದ ಬಾಲಕ ಹಿಂದಿನ ಬಾಗಿಲಿನಲ್ಲಿ ಹತ್ತಲು ಹೊದಾಗ ಚಾಲನೆಗೊಂಡ ಬಸ್‌ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶವ ಸಾಗಿಸಲು ವಾಹನವೇ ಇಲ್ಲ: ಅಪಘಾತದಲ್ಲಿ ಸಿಲುಕಿದವರನ್ನು ಕೊಂಡೊಯ್ಯಲು ಅನೇಕ 108 ಆಂಬ್ಯುಲೆನ್ಸ್ ವಾಹನಗಳಿರುವ ನಂಜನಗೂಡಲ್ಲಿ ಶವಸಾಗಿಸಲು ವಾಹನದ ಕೊರತೆ ಇದೆ. ಬಸ್ ನಿಲ್ದಾಣದಲ್ಲಿ ಸಾವಿಗೀಡಾದ ಬಾಲಕನ ಶವ ಸಾಗಿಸಲು ಯಾವುದೇ ವಾಹನ ಬಾರದಿದ್ದಾಗ ಸಂಚಾರ ಠಾಣೆ ಎಸ್‌ಐ ಯಾಸ್ಮಿನ್ ತಾಜ್, ಆಟೋ ಚಾಲಕ ಪಾಷ ಆಗಮಿಸಿ ಮೃತದೇಹವನ್ನು ಸಾಗಿಸಿದರು.
ಮೈಸೂರು : ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆಯೇ ಮಚ್ಚು ಲಾಂಗುಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ…
ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…