ಮೈಸೂರು : ಜಾಗತಿಕ ಮಟ್ಟದಲ್ಲಿ ಭಾರತದ ಮಹತ್ವವನ್ನು ಸಾರಿದ ಜಿ-20 ಶೃಂಗಸಭೆಯು ಸಾಂಸ್ಕೃತಿಕ ನಗರಿ ಮೈಸೂರಿನ ಮಹಿಳಾ ಕಲಾವಿದರೊಬ್ಬರ ಬದುಕಿಗೂ ಸಾರ್ಥಕತೆಯನ್ನು ಕಲ್ಪಿಸಿದೆ. ವಿದೇಶಗಳ ಗಣ್ಯ ಮಹೋದಯರೆದುರು ಅವರ ಸಂಗೀತ ಸಾಧನೆ ಅನಾವರಣಗೊಂಡಿತು.
ನಗರದ ಸರಸ್ವತಿಪುರಂ ನಿವಾಸಿಯಾಗಿರುವ ಮೈಸೂರು ಆಕಾಶವಾಣಿ ಪ್ರಥಮ ಶ್ರೇಣಿ ಕಲಾವಿದ (ಕೊಳಲು)ರಾದ ಸ್ಮಿತಾ ಶ್ರೀಕಿರಣ್ ಅವರೇ ಇಂತಹ ಅಪೂರ್ವ ಅವಕಾಶ ಪಡೆದವರು. ಸೆ.9 ಮತ್ತು 10ರಂದು ನಡೆದ ಶೃಂಗಸಭೆಯ ಮೊದಲ ದಿನ ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಅಂತಾರಾಷ್ಟ್ರೀಯ ಮತ್ತು ಕನ್ವೆಷನ್ ಸೆಂಟರ್‌ನ ಭಾರತ್ ಮಂಟಪಮ್‌ನಲ್ಲಿ ದೇಶ ಎಲ್ಲ ರಾಜ್ಯಗಳಿಂದ 78 ಮಂದಿ ಒಟ್ಟಾಗಿ ಸಂಗೀತವನ್ನು ಸಾದರಪಡಿಸಿದರು.
ರಾಷ್ಟ್ರೀಯ ಸಂಗೀತ-ನಾಟಕ ಅಕಾಡೆಮಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅಮೆರಿಕ, ಜಪಾನ್, ಶ್ರೀಲಂಕಾ, ಜರ್ಮನಿ, ರಷ್ಯಾ ಮುಂತಾದ ಪ್ರತಿಷ್ಠಿತ ದೇಶಗಳ ನೇತಾರರ ಎದುರು ಸುವಾರು 3 ಗಂಟೆಗಳ ಕಾಲ ಈ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರತಿಯೊಂದು ರಾಜ್ಯದವರು ಅವರವರ ಸಂಗೀತ ಕಲೆಯನ್ನು ಸಾಕ್ಷೀಕರಿಸಿದರು. ಸ್ಮಿತಾ ಅವರು ಪುರಂದರ ದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮ ಕೀರ್ತನೆಯನ್ನು ಕೊಳಲಿನಲ್ಲಿ ನುಡಿಸುವ ಮೂಲಕ ಶ್ರೋತೃಗಳು ತಲೆದೂಗುವಂತೆ ಮಾಡಿದರು.
“ಆಂದೋಲನ”ದೊಂದಿಗೆ ವಾತನಾಡಿದ ಸ್ಮಿತಾ ಅವರು, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನನ್ನನ್ನು ಆಕಾಶವಾಣಿ ಮೂಲಕ ಗುರುತಿಸಿ ಆಹ್ವಾನ ನೀಡಲಾಗಿತ್ತು. ಆ.30ರಂದು ಹೊಸದಿಲ್ಲಿಗೆ ತೆರಳಿದೆ. ಸೆ.8ರವರೆಗೂ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ತಾಲೀಮು ನಡೆಯುತ್ತಿತ್ತು. ಅದು ನನ್ನ ಅಪೂರ್ವ ಅನುಭವ ಆಗಿತ್ತು ಎಂದು ಭಾವುಕರಾಗಿ ನುಡಿದರು.
ಜಿ-20 ಶೃಂಗಸಭೆ ಆರಂಭದ ದಿನ ನಡೆದ ಸಂಗೀತ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು, ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಮತ್ತಿತರ ಕೇಂದ್ರ ಸರ್ಕಾರದ ಸಚಿವರು ಪಾಲ್ಗೊಂಡಿದ್ದಲ್ಲದೆ, ಕೊನೆಯ ಅರ್ಧ ಗಂಟೆ ಇರುವಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಗಮಿಸಿದ್ದು, ಅವರಿಗಾಗಿ ಇಡೀ ತಂಡ ವಿಶೇಷ ಸಂಗೀತ ಸಾದರಪಡಿಸಿದ್ದು, ನನ್ನ ಪಾಲಿಗೆ ಅವಿಸ್ಮರಣೀಯ
– ಸ್ಮಿತಾ ಶ್ರೀಕಿರಣ್, ಕೊಳಲು ವಾದಕರು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…