congress
ಮೈಸೂರು : ಜನನಾಯಕ ಹಾಗೂ ಉತ್ತಮ ಆಡಳಿತಗಾರರು ಎಂಬ ಎರಡು ವರ್ಗದ ರಾಜಕಾರಿಣಿಗಳಿದ್ದಾರೆ. ಈ ಎರಡೂ ಗುಣಗಳನ್ನೂ ಒಟ್ಟಿಗೆ ಹೊಂದಿರುವ ಸಿದ್ದರಾಮಯ್ಯ ಅವರು ಅಪರೂಪದ ರಾಜಕಾರಣಿ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನಮಟ್ಟು ಹೇಳಿದರು.
ಸೋಮವಾರ ನಗರದ ದೇವರಾಜ ಮಾರುಕಟ್ಟೆ ಬಳಿ ಇರುವ ಚಿಕ್ಕ ಗಡಿಯಾರದ ಮುಂಭಾಗ ನಗರ ಕಾಂಗ್ರೆಸ್ ವತಿಯಿಮದ ಏರ್ಪಡಿಸಲಾಗಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಮಾ ಬಾಂಡ್ ವಿತರಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಯಡಿಯೂರಪ್ಪ, ಬಂಗಾರಪ್ಪ ಅವರು ಜನ ನಾಯಕರು ಆದರೆ, ಉತ್ತಮ ಆಡಳಿತಗಾರರು ಎನಿಸಿಕೊಳ್ಳಲಿಲ್ಲ. ಮನಮೋಹನ್‌ಸಿಂಗ್, ಪಿ.ವಿ.ನರಸಿಂಹರಾವ್, ಡಿ.ದೇವರಾಜ ಅರಸು ಅವರು ಉತ್ತಮ ಆಡಳಿತಗಾರರು ಆದರೆ, ಜನನಾಯಕರಾಗಲಿಲ್ಲ ಎಂದರು.
ಆದರೆ ಸಿದ್ದರಾಮಯ್ಯ ಅವರು ೧೬ ಬಜೆಟ್‌ಗಳನ್ನು ಮಂಡಿಸಿ ಉತ್ತಮ ಆಡಳಿತಗಾರರು ಎನಿಸಿಕೊಂಡರಲ್ಲದೆ. ಜನರನ್ನು ಸೂಜಿಗಲ್ಲಿನಂತೆ ಸೆಳೆಯುವ ಮೂಲಕ ಜನನಾಯಕರೂ ಆದರು. ಇದೇ ಮಾದರಿಯಲ್ಲಿ ಇಂದಿರಾಗಾಂದಿ ಕೂಡ ಜನನಾಯಕಿ ಹಾಗೂ ಉತ್ತಮ ಆಡಳಿತಗಾರ್ತಿ ಎನಿಸಿಕೊಂಡರು ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ. ರಾಜಕೀಯ ಪಕ್ಷಗಳು ಹಾಗೂ ರಾಜಕಾರಿಣಿಗಳು ಎಂದೂ ಕೂಡ ಕಚೇರಿಗಳಲ್ಲಿ ಕೂರಬಾರದು. ಬೀದಿಗಿಳಿದು ಹೋರಾಟಗಳನ್ನು ಮಾಡಬೇಕು. ಗಾಂಧೀಜಿ ಅವರು ದಂತದ ಗೋಪುರದಲ್ಲಿ ಇರಬಹುದಿತ್ತು. ಆದರವರು ಬೀದಿಗಳಿದು ಹೋರಾಟ ಮಾಡುವ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು ಎಂದರು.
ಸಿದ್ದರಾಮಯ್ಯ ಅವರಿಗೆ ಬೆಳ್ಳಿ ತಟ್ಟೆಯಲ್ಲಿ ಉಡುಗೊರೆಯಾಗಿ ಅಧಿಕಾರ ಸಿಗಲಿಲ್ಲ. ತಮ್ಮ ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲಿ ಬೆವರು ಹರಿಸಿ ಅಧಿಕಾರ ಪಡೆದಿದ್ದಾರೆ. ಬಡವರು, ಶೋಷಿತರ ಬಗೆಗಗಿನ ಅವರ ಖಾಳಜಿ, ಯೋಜನೆಗಳು ಅವರ ಬಜೆಟ್‌ಗಳಲ್ಲಿ ಕಾಣಿಸುತ್ತಿದ್ದವು ಎಂದರು.
ಅವರು ನೀಡಿದ ಭಾಗ್ಯಗಳು ಬಡವರ ಬದುಕಿಗೆ ನೆರವಾಗಿವೆ. ಮಹಿಳೆಯರಿಗೆ ಅನುಕೂಲವಾಗಿದೆ. ಹೀಗಾಗಿ ಇಡೀ ದೇಶವೇ ಸಿದ್ದರಾಮಯ್ಯ ಅವರ ಆಡಳಿತದ ಕಡೆ ತಿರುಗಿ ನೋಡುತ್ತಿದೆ. ಯಾವುದೇ ಜಾತಿ ಧರ್ಮ ನೋಡದೆ ಕಾರ್ಯಕ್ರಮವನ್ನು ರೂಪಿಸಿರುವುದು ಅವರ ಜನಪರ ಆಡಳಿತಕ್ಕೆ ಸಾಕ್ಷಿ ಎಂದರು.
ಸಿದ್ದರಾಮಯ್ಯ ಹೈ ಕಮಾಂಡ್ ನಿಂದ ಚೀಟಿ ಬಂದು ಮುಖ್ಯಮಂತ್ರಿ ಆದವರಲ್ಲ ಶಾಸಕರ ಬಲದಿಂದ ಮುಖ್ಯಮಂತ್ರಿ ಆದವರು ಎಂದರು. ದುಡ್ಡು ಮಾಡಿದ್ದರೆ ದುಡ್ಡಿನ ಸಾಮ್ರಾಜ್ಯ ಉಳಿಸುಕೊಳ್ಳೋಕೆ ಹರಸಾಹಸ ಪಡಬೇಕಾಗುತ್ತೆ ಅದರ ಗೋಜಿಗೆ ಹೋಗದ ಸಿದ್ದರಾಮಯ್ಯ ಶುದ್ಧ ಹಸ್ತದ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಹರೀಶ್‌ಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಭಾಗಕ್ಕೆ ನೀಡಿರುವ ಕೊಡುಗೆ ಮುಂದಿನ ಸಾವರ ವರ್ಷಕ್ಕೂ ಸವೆಯುವುದಿಲ್ಲ. ಅದೇ ಮಾದರಿ ಸಿದ್ದರಾಮಯ್ಯ ಅವರು ನೀಡಿರುವ ಕೊಡುಗೆಗಳನ್ನೂ ಮರೆಯಲು ಸಾಧ್ಯವಿಲ್ಲ ಎಂದರು.
೧೦೦ ವರ್ಷಗಳ ಹಿಂದೆ ಮಹಾರಾಣಿ ಅವರು ತಮ್ಮ ಹೆಸರಿನಲ್ಲಿ ಕಾಲೇಜಿನ್ನು ಕಟ್ಟಿಸಿದ್ದರು. ಇದೀಗ ಅಲ್ಲಿ ಸಾವಿರಾರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಾರೆ. ಆದೆ, ೩೦೦ ಮಂದಿಗೆ ಮಾತ್ರ ವಸತಿನಿಲಯವಿತ್ತು. ಅದನ್ನು ಮನಗಂಡ ಸಿದ್ದರಾಮಯ್ಯ ಅವರು ೨೧೪ ಕೋಟಿ ರೂ. ಅನುದಾನ ನೀಡಿ ೩೫೦೦ ಮಂದಿ ವಿದ್ಯಾರ್ಥಿನಿಯರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಇದು ಸಾಧನೆ ಅಲ್ಲವೆ ಎಂದರು.
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ನೀಡಿರುವ ಕೊಡುಗೆಗಳು ಸಾಕಷ್ಟಿವೆ. ಕೇವಲ ಮೈಸೂರಿಗೆ ಮಾತ್ರವಲ್ಲದೆ ರಾಜ್ಯದ ಎಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇವುಗಳು ಗೊತ್ತಿದ್ದರೂ ಬಿಜೆಪಿ ಮುಖಂಡರು ಸಿದ್ದರಾಮಯ್ಯ ಅವರನ್ನು ತೆಗಳುತ್ತಾರೆ. ಅದು ಅವರ ಚಾಳಿ ಎಂದರು.
ಮಾಜಿ ಮಂತ್ರಿಗಳು ಹಾಗೂ ಖ್ಯಾತ ಲೇಖಕಿ ಡಾ.ಬಿ.ಟಿ.ಲಲಿತ ನಾಯಕ್ ಮಾತನಾಡಿ, ನಾನು ಮೊದಲು ಜಾ.ದಳ ಪಕ್ಷದಲ್ಲಿ ಇದ್ದೆ. ಸಿದ್ದರಾಮಯ್ಯ ಮತ್ತು ಅವರ ಸ್ನೇಹಿತರು ಪಕ್ಷ ಬಿಟ್ಟು ಬರುವಾಗ ನನ್ನನ್ನು ಆಹ್ವಾನಿಸಿದರು ಆದರೆ ನಾನು ಅಂದು ಬರಲಿಲ್ಲ ಆದರೆ ಜಾ.ದಳ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ನಾನು ಪಕ್ಷ ಬಿಟ್ಟೆ ಎಂದರು.
ಮಹಿಳಾ ಸಬಲೀಕರಣದ ವಿಚಾರದಲ್ಲಿ ಸಿದ್ದರಾಮಯ್ಯ ಎಂದೂ ರಾಜಿ ಮಾಡಿಕೊಂಡವರಲ್ಲ. ಮಹಿಳೆಯರ ಆರ್ಥಿಕ ಪ್ರಗತಿ ಮತ್ತು ಸ್ವಾವಲಂಬನೆಯ ಬದುಕಿಗಾಗಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ಮಹಿಳೆಯರಿಗೆ ಕೊಟ್ಟಿರುವ ಯೋಜನೆ ಪರೋಕ್ಷವಾಗಿ ಪುರುಷರಿಗೆ ಲಭಿಸಿದೆ. ಸಮಾಜವಾದಿ ಗುಣ ಇರುವವರು ಸರಳವಾಗಿ ಇರುತ್ತಾರೆ. ಹಾಗೆಯೇ ಸಿದ್ದರಾಮಯ್ಯರವರು ಕೂಡ ಸರಳ ಜೀವನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದರು.
ಸರ್ಕಾರಕ್ಕೆ ತಾಯಿ ಕರುಳು ಇರಬೇಕು ಎಂದು ಹೇಳಿ ವಿರೋಧ ಪಕ್ಷದವರ ಟೀಕೆಗೆ ತಲೆ ಕೆಡಿಸಿಕೊಳ್ಳುವ ಹಾಗಿಲ್ಲ ಕೋಮುವಾದಿ ಮತ್ತು ಮನೋವಾದವನ್ನು ಸಂಪೂರ್ಣವಾಗಿ ತೊಡೆದು ಹಾಕುವುದೇ ನಮ್ಮ ಉದ್ದೇಶವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್, ೨೦೨೫ ಮೈಸೂರು ಭಾಗದ ಕಾಂಗ್ರೆಸಿಗರ ಪಾಲಿಕೆ ಬಹಳ ಮಹತ್ವಪೂರ್ಣವಾದ ವರ್ಷ. ಹೊಸ ಕಾಂಗ್ರೆಸ್ ಕಚೇರಿಗೆ ಶಂಕು ಸ್ಥಾಪನೆ, ಜಿಲ್ಲಾ ಕಾಂಗ್ರೆಸ್‌ಗೆ ೭೫ ವಸಂತಗಳ ಸಂಭ್ರಮ, ಹಾಗೂ ಸಿದ್ದರಾಮಯ್ಯ ಅವರಿಗೆ ೭೮ ವರ್ಷದ ಸಂಭ್ರಮಾಚಾರಣೆ ಎಲ್ಲವೂ ಅರ್ಥಪೂರ್ಣವಾಗಿ ನಡೆದಿವೆ ಎಂದರು. ಸಿದ್ದರಾಮಯ್ಯ ಅವರ ವಿರುದ್ಧ ಎಷ್ಟೇ ಷಡ್ಯಂತ್ರ ಮಾಡಿದರು ಅದು ನೆಡೆಯುವುದಿಲ್ಲ. ಬಿಜೆಪಿಯವರ ಅನ್ಯಾಯದ ವಿರುದ್ಧ ಸಿದ್ದರಾಮಯ್ಯನವರ ನ್ಯಾಯ ಪರವಾದ ಯುದ್ಧಕ್ಕೆ ನಾವು ಸಿದ್ದರಿದ್ದೇವೆ ಎಂಬ ಘೋಷವಾಕ್ಯವನ್ನು ನುಡಿದರು.
ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಮಂತ್ರಿ ಕೋಟೆ ಎಂ.ಶಿವಣ್ಣ, ಮಜಿ ಮಹಾಪೌರರಾದ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಆರ್.ನಾಗೇಶ್, ಪ್ರಕಾಶ್ ಮುಂತಾದವರು ಹಾಜರಿದ್ದರು.
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…