ಮೈಸೂರು

ಸಿದ್ದರಾಮಯ್ಯ ಯಾವತ್ತೂ ಜಾತಿ ರಾಜಕೀಯ ಮಾಡಿಲ್ಲ: ಲಕ್ಷ್ಮಣ್‌

ಮೈಸೂರು: ಸಿಎಂ ಸಿದ್ದರಾಮಯ್ಯ ಇಡೀ ರಾಜಕೀಯ ಜೀವನದಲ್ಲಿ ಜಾತಿ ರಾಜಕಾರಣ ಮಾಡಿಲ್, ಶಾಮನೂರು ಶಿವಶಂಕರಪ್ಪನವರಿಗೆ ಯಾರು ಸುಳ್ಳು ಮಾಹಿತಿ ಕೊಟ್ಟಿದ್ದಾರೆ ಅಂತ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳು ಕಷ್ಟವನ್ನುಅನುಭವಿಸುತ್ತಿದ್ದಾರೆ ಎಂಬ ಶಾಮನೂರು ಹೇಳಿಕೆಯನ್ನು ಅಲ್ಲಗೆಳೆದ ಅವರು, ಸರ್ಕಾರದಲ್ಲಿ 7 ಮಂದಿ ಲಿಂಗಾಯತ ಮಂತ್ರಿಗಳಿದ್ದಾರೆ ಎಂದಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಶಾಮನೂರು ಶಿವಶಂಕರಪ್ಪನವರಿಗೆ ದಾಖಲೆಗಳನ್ನ ಕಳುಹಿಸಿಕೊಡುತ್ತೇನೆ. ಅವರನ್ನ ಭೇಟಿ ಮಾಡಿ ಮಾಹಿತಿ ಕೊಡುತ್ತೇನೆ. ಜಾತಿ ರಾಜಕಾರಣವನ್ನು ಸಿದ್ದರಾಮಯ್ಯ ಜೀವನದಲ್ಲಿ ಮಾಡಿಲ್ಲ. ಕುರುಬರೇ ಸರ್ಕಾರ ನಡೆಸುತ್ತಿದ್ದಾರೆ ಎನ್ನುವುದು ತಪ್ಪು. ಜಾತಿ ಜಾತಿಗಳ ನಡುವೆ ಜಗಳ ತರುವುದು ಬಿಜೆಪಿ ಕೆಲಸ.

ಶಾಮನೂರು ಶಿವಶಂಕರಪ್ಪನವರಿಗೆ ಯಾರು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯ ನಮ್ಮನ್ನು ಕೈಹಿಡಿದಿದೆ. ಒಕ್ಕಲಿಗರು ಸೇರಿದಂತೆ ಎಲ್ಲರೂ ಕೈ ಹಿಡಿದಿದ್ದಾರೆ ಎಂದು ಎಂ ಲಕ್ಷ್ಮಣ್ ಸ್ಪಷ್ಟನೆ ನೀಡಿದರು.

ಶ್ರಮ ಹಾಕಿದವರಿಗೆ ಅಧಿಕಾರ ಸಿಕ್ಕಿಲ್ಲ : ಶಾಮನೂರು ಶಿವಶಂಕರಪ್ಪನವರ ಹೇಳಿಕೆ ಬಹಳಷ್ಟು ಸದ್ದು ಮಾಡುತ್ತಿದೆ. ಬಿಜೆಪಿ ಜೆಡಿಎಸ್ ಗೆ ಆಹಾರ ಆಗಿದೆ. ಇದಕ್ಕೆ ಸ್ಪಷ್ಟೀಕರಣ ಕೊಡುತ್ತಿದ್ದೇನೆ. ಪಕ್ಷ ಅಧಿಕಾರಕ್ಕೆ ಬರಲು ಲಕ್ಷಾಂತರ ಕಾರ್ಯಕರ್ತರ ಶ್ರಮ ಇದೆ. ಎಷ್ಟೊ ಜನರ ಮೇಲೆ ಕೇಸ್ ಗಳನ್ನು ಹಾಕಲಾಗಿದೆ. ಶ್ರಮ ಹಾಕಿದವರಿಗೆ ಯಾವುದೇ ಅಧಿಕಾರ ಸಿಕ್ಕಿಲ್ಲ. ಅಧಿಕಾರದಲ್ಲಿರುವವರು ತಾಳ್ಮೆಯಿಂದ ಇರಬೇಕು. ಶಾಮನೂರು ಶಿವಶಂಕರಪ್ಪನವರ ಮೇಲೆ ಸಾಕಷ್ಟು ಗೌರವ ಇದೆ. ಯಾರೋ ಅವರನ್ನ ಮಿಸ್ ಲೀಡ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಸಾಕಷ್ಟು ದಾಖಲೆಗಳನ್ನ ತೆಗೆದುಕೊಂಡಿದ್ದೇನೆ. 40 ಚೀಫ್ ಎಂಜಿನಿಯರ್ ಗಳಲ್ಲಿ 10 ಲಿಂಗಾಯತರು, 9 ವಕ್ಕಲಿಗರು, 4 ಕುರುಬರು ಇದ್ದಾರೆ. 41 ವಿಶ್ವವಿದ್ಯಾಲಯಗಳಲ್ಲಿ 14 ಜನ ಕುಲಪತಿಗಳು ಲಿಂಗಾಯತರು ಇದ್ದಾರೆ. ಬ್ರಾಹ್ಮಣರು 8 ಮಂದಿ ಇದ್ದಾರೆ. ರಾಜ್ಯದಲ್ಲಿ 272 ಐಎಎಸ್ ಅಧಿಕಾರಿಗಳಿದ್ದಾರೆ. 87 ಜನ ಕರ್ನಾಟಕದ ಕೇಡರ್ ಗಳಿದ್ದಾರೆ. ಉಳಿದವರು ಬೇರೆ ರಾಜ್ಯದವರು. 87 ಜನರ ಪೈಕಿ 22 ಮಂದಿ ಲಿಂಗಾಯತರು ಇದ್ದಾರೆ. 31 ಜಿಲ್ಲಾಧಿಕಾರಿಗಳ ಪೈಕಿ 4 ಲಿಂಗಾಯತರು, 5 ಮಂದಿ ಒಕ್ಕಲಿಗರಿದ್ದಾರೆ. ಸಿಇಒಗಳು ಪೈಕಿ 10 ಮಂದಿ ಲಿಂಗಾಯತರಿದ್ದಾರೆ, 9 ಒಕ್ಕಲಿಗರಿದ್ದಾರೆ. 409 ಕೆಎಸ್ ಅಧಿಕಾರಿಗಳಿದ್ದಾರೆ. ಇದರಲ್ಲಿ 102 ಮಂದಿ ಲಿಂಗಾಯರಿದ್ದಾರೆ. ಕುರುಬರು ಮೂವರಿದ್ದಾರೆ. ಜಾತಿ ಆಧಾರದ ಮೇಲೆ ಹುದ್ದೆ ಕೊಡುವುದಲ್ಲ. ಯಾವುದೇ ಜಾತಿಯನ್ನೂ ಕಡೆಗಣನೆ ಮಾಡಿಲ್ಲ ಎಂದು ಮಾಹಿತಿ ನೀಡಿದರು.

ಸಿಪಿ ಯೋಗೇಶ್ವರ್ ಗೆ ಟಾಂಗ್ಸಂಕ್ರಾಂತಿ ಬಳಿಕ ಸರ್ಕಾರ ಬದಲಾಗುತ್ತದೆ ಎನ್ನುವ ಸಿಪಿ ಯೋಗೇಶ್ವರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ ಲಕ್ಷ್ಮಣ್, ಹೀಗೆ ಹೇಳುವವರಿಗೆ ತಲೆಕೆಟ್ಟಿದೆ. ಮೊದಲಿಂದಲೂ ಯತ್ನಾಳ್ ಹೀಗೆ ಹೇಳಿಕೊಂಡು ಓಡಾಡ್ತಿದ್ದಾರೆ. ಈಗಲೂ ಕಾಂಗ್ರೆಸ್ ಸೇರಲು 25 ರಿಂದ 30 ಎಂಎಲ್ ಎಗಳು ರೆಡಿ ಇದ್ದಾರೆ. ನಮ್ಮ ಪಕ್ಷದ ಹೈಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಅವರ ಪಕ್ಷದವರು ಹೋಗುವವರನ್ನು ತಡೆಯೋದಿಕ್ಕೆ ಹೀಗೆ ಸುಳ್ಳು ಹೇಳ್ಕೊಂಡು ತಿರುಗಾಡುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

andolanait

Recent Posts

ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಮಹಿಳೆ ಸಾವು: ಇಬ್ಬರಿಗೆ ಗಾಯ

ಹುಣಸೂರು: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನ ಯಶೋಧರಪುರ ಗೇಟ್‌ ಬಳಿ…

52 mins ago

ಜನವರಿ 28 ಮತ್ತು 29ರಂದು ‘ತಟ್ಟೆ ಇಡ್ಲಿ ರಾದ್ಧಾಂತ’ ಹಾಸ್ಯ ನಾಟಕ ಪ್ರದರ್ಶನ

ಮೈಸೂರು: ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ: 28.01.2026 ಮತ್ತು 29.01.2026ರ ಸಂಜೆ…

1 hour ago

ರಾಜೀವ್‌ ಗೌಡಗೆ ಆಶ್ರಯ ನೀಡಿದ ಉದ್ಯಮಿಯೂ ಪೊಲೀಸರ ವಶಕ್ಕೆ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡರನ್ನು…

2 hours ago

ಅಮೇರಿಕಾದಲ್ಲಿ ಭೀಕರ ಹಿಮ ಬಿರುಗಾಳಿ: 25 ಜನ ಸಾವು

ವಾಷಿಂಗ್ಟನ್:‌ ಅಮೇರಿಕಾದಾದ್ಯಂತ ಬೀಸುತ್ತಿರುವ ಭೀಕರ ಹಿಮಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹಿಮಪಾತ ಹಾಗೂ ಮೈಕೊರೆಯುವ ಚಳಿಗೆ ಇದುವರೆಗೆ ಸುಮಾರು 25ಕ್ಕೂ ಹೆಚ್ಚು…

3 hours ago

ನಟಿ ಕಾವ್ಯಾ ಗೌಡಗೆ ಪತಿ ಸಂಬಂಧಿಕರಿಂದ ಹಲ್ಲೆ: ಪತಿಗೂ ಚಾಕು ಇರಿತ

ಬೆಂಗಳೂರು: ನಟಿ ಕಾವ್ಯಾಗೌಡ ಹಾಗೂ ಆಕೆಯ ಪತಿ ಸೋಮಶೇಖರ್‌ ಮೇಲೆ ಪತಿ ಸಂಬಂಧಿಕರೇ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ…

3 hours ago

ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಅರಬ್ಬಿ ಸಮುದ್ರದ ಮೇಲೆ ತೇವಾಂಶ ಭರಿತ ಮೋಡಗಳು ಹಾದು ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದೆ. ರಾಜಧಾನಿ…

6 hours ago