ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಮಾರ್ಗದರ್ಶಕರ ಕೊರತೆಯಿಂದ ಹೊಸದಾಗಿ ಪಿಎಚ್.ಡಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ತೊಡಕಾಗಿದೆ. ಹೀಗಾಗಿ, ಹೆಚ್ಚುವರಿ ಪಿಎಚ್.ಡಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ವಿದ್ಯಾನಿಲಯದ ಕ್ರಾಫಡ್ ಭವನ ಮುಂಭಾಗ ನಡೆಯುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಬೇಡಿಕೆ ಈಡೇರಿಸುವವಗೆರೆ ಧರಣಿ ಮುಂದುವರಿಸಲಾಗುವುದು. ವಿ.ವಿ ಆಡಳಿತ ವಿಳಂಬ ಧೋರಣೆ ಅನುಸರಿಸಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಎಚ್ಚರಿಸಿ, ಆಕ್ರೋಶ ಹೊರಹಾಕಿದ್ದಾರೆ.
ಮೈಸೂರು ವಿ.ವಿಯಲ್ಲಿ ಖಾಯಂ ಪ್ರಧ್ಯಾಪಕರ ಕೊರತೆಯಿಂದಾಗಿ ಸಂಶೋಧನೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ, ಸಂಶೋಧನಾ ಆಕಾಂಕ್ಷೆ ಉಳ್ಳ ವಿದ್ಯಾರ್ಥಿಗಳು ಬೀದಿ ಪಾಲಾಗಿದ್ದಾರೆ. ಈಗಾಗಲೇ ಇರುವಂತ ಖಾಯಂ ಪ್ರಾಧ್ಯಾಪಕರ ಬಳಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರವೇಶಾತಿ ಪಡೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನ್ಯಾಯಯುತ ಬೇಡಿಕೆ ;
ಈ ನಡುವೆ ಪೊಲೀಸರು ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೂ ಮಾತಿನ ಚಕಮಕಿ ನಡೆಯಿತು. ವಿ.ವಿ ಕುಲಪತಿ ನಮ್ಮ ಮನವಿಯನ್ನು ಸ್ವೀಕರಿಸಲೇಬೇಕು. ನಮ್ಮದು ನ್ಯಾಯಯುತ ಬೇಡಿಕೆ ಎಂದು ಪಟ್ಟು ಹಿಡಿದರು.
ಇನ್ನಷ್ಟು ಓದಿ : ಪಿಎಚ್.ಡಿ ಮಾರ್ಗದರ್ಶಕರ ಕೊರತೆ : ಮೈಸೂರು ವಿವಿ ವಿರುದ್ಧ ಅಹೋರಾತ್ರಿ ಧರಣಿ
ಸಾಕಷ್ಟು ಅರ್ಹತೆ, ಸಾಮರ್ಥ್ಯ ಇದ್ದರೂ ಸಂಶೋಧನೆಗೆ ಅವಕಾಶ ಸಿಗದೆ ಬೀದಿ ಪಾಲಾಗಿದ್ದೇವೆ. ನಮಗೆ ವಿ.ವಿ ಪರ್ಯಾಯ ವ್ಯವಸ್ಥೆ ಮಾಡಿಕೊಡಲೇಬೇಕು ಅಲ್ಲಿಯವರೆಗೂ ನಾವು ಪ್ರತಿಭಟನಾ ಧರಣಿಯಿಂದ ಹಿಂದೆ ಸರಿಯಲ್ಲ ಎಂದು ಪಟ್ಟು ಹಿಡಿದು ಧರಣಿ ಕುಳಿತಿದ್ದಾರೆ.
ಎಐಡಿಎಸ್‌ಒ ಬೆಂಬಲ ;
ಹೆಚ್ಚುವರಿ ಸಂಶೋಧನಾ ಮಾರ್ಗದರ್ಶನಕ್ಕಾಗಿ ಪ್ರತಿಭಟನೆ ಮಾಡುತ್ತಿರುವ ಸಂಶೋಧನಾ ಆಕಾಂಕ್ಷಿಗಳ ಹೋರಾಟಕ್ಕೆ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಬೆಂಬಲ ಸೂಚಿಸಿದೆ.
ಇನ್ನಷ್ಟು ಓದಿ : ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ದ ಅತ್ಯಾಚಾರ ಆರೋಪ ; FIR ದಾಖಲು
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮಹದೇವು, ಸಂಶೋಧನಾ ವಿದ್ಯಾರ್ಥಿ ಪ್ರದೀಪ್ ಮುಮ್ಮಡಿ, ಸಂಶೋಧನಾ ಆಕಾಂಕ್ಷಿಗಳಾದ ಮಹೇಶ್, ರೋಹನ್, ನವೀನ್ ಅಳಗಂಜಿ, ನಂದೀಶ್, ಕರ್ಣ, ರವಿ, ರೋಜಾ, ರಂಗನಾಥ್, ಕಿರಣ್, ಹೃತಿಕ್, ಸುರೇದ್ರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಸಿದ್ದಾಪುರ : ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲ್ದಾರೆ–ಗುಡ್ಲೂರು ರಸ್ತೆ ಹಾಗೂ ಮೈಲಾಪುರ–ಗುಡ್ಲೂರು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದರೂ, ಕಾಮಗಾರಿಯಲ್ಲಿ ಬಳಸಿದ…
ಬೆಂಗಳೂರು : ಪಶ್ಚಿಮ ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿ ಇದೀಗ ದೇಶದಲ್ಲಿ ಅನಿಲ ಬಿಕ್ಕಟ್ಟು ಎದುರಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ…
24ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಬೇತ್ರಿ ಮುಕ್ಕಾಟೀರ ಕುಟುಂಬಸ್ಥರಿಂದ ಸಿದ್ದತೆ; 24 ದಿನಗಳ ಕಾಲ ಕ್ರಿಕೆಟ್ ಹಬ್ಬ ಪುನೀತ್ ಮಡಿಕೇರಿ…
ಮುರ್ಖರ ದಿನ ವಾದ ಏಪ್ರಿಲ್ ಒಂದರಂದು ( ಬುಧವಾರ), ಕೆಲವು ಜಾಲತಾಣಗಳಲ್ಲಿ ದೇಶದ ರಾಷ್ಟ್ರೀಯ ಲಾಂಛನದ ಅಡಿಯಲ್ಲಿ,(ಸಿಂಹ ಮತ್ತು ಅಶೋಕ…
ನಿ. . . ದರ್ಶನ ! ಟೇಪು ಕತ್ತರಿಸಿ, ಗುದ್ದಲಿ ಪೂಜೆ ನೆರವೇರಿಸಿ ಸರಸರನೆ ಪರದೆಯನು ಸರಿಸಿ ನೀಡುವರು ಫೋಟೋಗೆ…
ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಿರುವ ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಹೆಚ್ಚಿನ ನಿಗಾವಹಿಸುವುದು ಅಗತ್ಯವಾಗಿದೆ. ಮಕ್ಕಳು ಬಿಸಿಲಿನಬೇಗೆಯಿಂದ…