ಮೈಸೂರು

ಜನನ, ಮರಣ ಪ್ರಮಾಣ ಪತ್ರಕ್ಕೆ ಹೊಸ ನಿಗಧಿ ದರ ಜಾರಿ: ಶೇಕ್‌ ತನ್ವೀರ್‌ ಆಸೀಫ್‌

ಮೈಸೂರು: ಕೇವಲ 5ರೂ. ಇದ್ದ ಜನನ ಮತ್ತು ಮರಣದ ಪತ್ರ ಇನ್ನೂ ಮುಂದೆ ದುಬಾರಿಯಾಗಿದ್ದು, ಕೇವಲ 25 ರೂಪಾಯಿ ನೀಡಿ 5 ಪ್ರತಿ ಪಡೆಯುತ್ತಿದ್ದ ಸಾರ್ವಜನಿಕರಿಗೆ ದಿಢೀರ್‌ ಬೆಲೆ ಏರಿಕೆಯಿಂದ ಶಾಕ್‌ ನೀಡಿದಂತಾಗಿದೆ.

ಬಸ್, ಪೆಟ್ರೋಲ್, ಡೀಸೆಲ್, ಹಾಲು ದರ ಹೆಚ್ಚಳದ ನಡುವೆ ಜನಸಾಮಾನ್ಯರಿಗೆ ತಮ್ಮ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಬೆಲೆ ಏರಿಕೆಯಾಗಿದೆ. ಇದೀಗ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ 50 ರೂಪಾಯಿಗಳನ್ನು ನಿಗಧಿ ಪಡಿಸಲಾಗಿದೆ. ಈ ನೂತನ ಶುಲ್ಕದ ಪ್ರಕಾರ 5 ಪ್ರತಿಗೆ 250 ರೂ ನಿಗಧಿ ಪಡಿಸಿದ್ದು,
ಒಂದೇ ಬಾರಿಗೆ 10 ಪಟ್ಟು ಶುಲ್ಕವನ್ನು ನಗರಭಿವೃದ್ಧಿ ಇಲಾಖೆ ಹೆಚ್ಚಿಸಿದೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಇಂದು(ಫೆಬ್ರವರಿ.6) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವದ್ಧಿ ಇಲಾಖೆ ವತಿಯಿಂದ ಶುಲ್ಕ ಹೆಚ್ಚಳ ಮಾಡಲಾಗಿದೆ. ಕೇವಲ 5 ರೂಪಾಯಿ ಇದ್ದ ಜನನ ಮತ್ತು ಮರಣ ಪತ್ರವನ್ನು ಇದೀಗ 50 ರೂಪಾಯಿ ಶುಲ್ಕ ನಿಗಧಿಯಾಗಿದೆ. ಈ ದರವೂ ಬುಧವಾರದಂದು (ಫೆ.5) ಜಾರಿಯಾಗಿದೆ. ಹೀಗಾಗಿ ಈ ಹಣವನ್ನು ಪಾವತಿಸಿ ಜನನ ಮತ್ತು ಮರಣ ಪತ್ರ ಪಡೆಯಬಹುದಾಗಿದೆ. ಈ ಹೊಸ ನಿಗಧಿತ ದರಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಶೇಕ್‌ ತನ್ವೀರ್‌ ಆಸೀಫ್‌ ಮನವಿ ಮಾಡಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಕಲಬುರ್ಗಿ: ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಸಿಎಂ…

20 mins ago

ನಾಳೆ ಬುದ್ಧ ಪೂರ್ಣಿಮೆ: ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

ಬೆಂಗಳೂರು: ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ನಾಳೆ(ಮೇ.1ರಂದು) ಬೆಂಗಳೂರು ನಗರದಾದ್ಯಂತ ಮಾಂಸ ಮಾರಾವನ್ನು ನಿಷೇಧಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಆದೇಶ ಹೊರಡಿಸಿದೆ.…

1 hour ago

ಪತ್ನಿಯನ್ನು ಕೊಡಲಿಯಿಂದ ಹೊಡೆದು ಸಾಯಿಸಿ ಪೊಲೀಸರಿಗೆ ಶರಣಾದ ಪತಿ

ಮೈಸೂರು: ಸಣ್ಣ ವಿಚಾರಕ್ಕೆ ಆರಂಭವಾದ  ಕೌಟುಂಬಿಕ ಕಲಹವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಕೆಲಸ…

2 hours ago

ನಾಳೆಗೆ 60 ದಿನಗಳ ಡೆಡ್‌ಲೈನ್‌ ಅಂತ್ಯ: ಸಂಕಷ್ಟದಲ್ಲಿ ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಅಮೇರಿಕಾ ಮತ್ತು ಇರಾನ್‌ ನಡುವಿನ ಮಿಲಿಟರಿ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌…

2 hours ago

ರಾಜ್ಯದಲ್ಲಿ ಮೂರು ದಿನ ಮಳೆ ಮುನ್ಸೂಚನೆ: ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ರಾಜ್ಯದಲ್ಲಿ ಮೂರು ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ.1ರಂದು ರಾಯಚೂರು, ಕೊಪ್ಪಳ,…

4 hours ago

ಯಾಲಕ್ಕೂರು, ಸುತ್ತಲಿನ ಗ್ರಾಮಗಳಿಗೆ ಬಂತು ಸಾರಿಗೆ ಬಸ್ಸು!

ಚಾಮರಾಜನಗರ: ತಾಲ್ಲೂಕಿನ ಯಾಲಕ್ಕೂರು ಹಾಗೂ ಸುತ್ತಮುತ್ತಲಿನ ಆರು ಗ್ರಾಮಗಳಿಗೆ ಸಾರಿಗೆ ಬಸ್ಸೇ ಇಲ್ಲ ಎಂದು ‘ಆಂದೋಲನ ಪತ್ರಿಕೆ’ಯಲ್ಲಿ ಈಚೆಗೆ ಪ್ರಕಟವಾಗಿದ್ದ…

7 hours ago