ನಂಜನಗೂಡು : ಮೈಸೂರು ಚಾಮರಾಜನಗರ ಬೈಪಾಸ್ ರಸ್ತೆಯ ಮಧ್ಯದಲ್ಲಿ ಕುರಿ ಮತ್ತು ದನಗಳ ವ್ಯಾಪಾರ ಮಾಡುವುದು ನಡೆಯುತ್ತವೆ.
ಪ್ರತಿ ಶುಕ್ರವಾರ ನಡೆಯುವ ದನದ ವ್ಯಾಪಾರ ಮತ್ತು ಕುರಿ ವ್ಯಾಪಾರ ಸಂತೆ ರದ್ದಾಗಿದೆ ಕಾರಣ ಹಸುಗಳಿಗೆ ಗಂಟು ರೋಗ ಬರುತ್ತಿರುವ ಹಿನ್ನೆಲೆಯಲ್ಲಿ ಸಂತೆ ರದ್ದು ಮಾಡಲಾಗಿದೆ.
ಆದರೆ ನಿಗದಿತ ಸ್ಥಳದಲ್ಲಿ ವ್ಯಾಪಾರ ಇಲ್ಲದ ಕಾರಣ ಗ್ರಾಮಾಂತರಗಳಿಂದ ಬರುವ ಹಸುಗಳ ಮತ್ತು ಕುರಿಗಳ ವ್ಯಾಪಾರಸ್ಥರು ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಖಾಲಿ ಇರುವ ಜಾಗದ ಜೊತೆಗೆ ರಸ್ತೆಯ ಅರ್ಧಭಾಗವನ್ನು ಅಕ್ರಮಿಸಿಕೊಂಡು ರಸ್ತೆಯಲ್ಲಿ ನಿಂತು ಕುರಿಗಳ ವ್ಯಾಪಾರ ದನಗಳ ವ್ಯಾಪಾರ ಮಾಡುತ್ತಿದ್ದಾರೆ.
ಆದರೆ ಮೈಸೂರಿನಿಂದ ಚಾಮರಾಜನಗರ, ನರಸೀಪುರ , ಕೊಳ್ಳೇಗಾಲ, ಹನೂರು, ಕೊಯಮತ್ತೂರು, ಈ ಮಾರ್ಗವಾಗಿ ಹೋಗುವ ಬಸ್ಸುಗಳು, ಲಾರಿಗಳು, ಪ್ರತಿನಿತ್ಯ ಸಾವಿರಾರು ವಾಹನಗಳು ಬೆಳಗಿನ ಜಾವದಿಂದಲೇ ಓಡಾಡುತ್ತಿರುತ್ತವೆ, ಆದರೆ ದನ ಮತ್ತು ಕುರಿ ವ್ಯಾಪಾರಸ್ಥರು ಯಾವುದೇ ಭಯಭೀತಿಲ್ಲದೆ ರಸ್ತೆಯ ಮಧ್ಯದಲ್ಲಿ ನಿಂತು ಪರಿಜ್ಞಾನವಿಲ್ಲದೇ ವ್ಯಾಪಾರ ಮಾಡುತ್ತಿರುತ್ತಾರೆ. ಏನಾದರೂ ಆಯ ತಪ್ಪಿ ಅನಾಹುತ ಉಂಟಾದರೆ ನೂರಾರು ರೈತರು ತಮ್ಮ ದನ ಕರುಗಳು ಕುರಿಗಳ ಜೊತೆ ಪ್ರಾಣ ಕಳೆದುಕೊಳ್ಳುವ ಸಂಭವ ನಿರ್ಮಾಣ ಆಗುತ್ತದೆ.
ದ್ವಿಚಕ್ರ ವಾಹನಗಳು ಲಾರಿಗಳು ಬಸ್ಸುಗಳು ಎಷ್ಟೇ ಶಬ್ಧ ಮಾಡಿದರು ಕೂಡ ರಸ್ತೆಯನ್ನು ಬಿಟ್ಟು ಜಗ್ಗುವುದಿಲ್ಲ, ವಾಹನ ಚಾಲಕರೇ ಆದಷ್ಟು ನಿಧಾನಗತಿಯಲ್ಲಿ ರಸ್ತೆದಾಟು ಪರಿಸ್ಥಿತಿ ಉಂಟಾಗಿದೆ. ಹೆಚ್ಚಿನ ಅನಾಹುತ ಉಂಟಾಗುವ ಮೊದಲು ಸಂಬಂಧಪಟ್ಟವರು ರಸ್ತೆಯಲ್ಲಿ ವ್ಯಾಪಾರ ಮಾಡುವ ಕುರಿ ಮತ್ತು ದನದ ಸಂತೆಗಳನ್ನು ರದ್ದುಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ…
ಓದುಗರ ಪತ್ರ: ಗಾಳಿ... ತಂಗಾಳಿ ! ಚಾಮರಾಜನಗರದ ಶುದ್ಧ ಗಾಳಿಗೆ ದೇಶದಲ್ಲಿ ೪ನೇ ಸ್ಥಾನ ಎಂಥ ಪ್ರಾಣವಾಯು ! ಮಲೆ ಮಾದಪ್ಪ…
ರಾಜ್ಯ ಸರ್ಕಾರ ಮಂಡಿಸಿದ ದ್ವೇಷ ಭಾಷಣ ಮಸೂದೆ ೨೦೨೫ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ವ್ಯಾಪಕ…
ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಬಯಲಾಗಿವೆ. ಮುಡಾ ಹಗರಣದ…
ಮೈಸೂರಿನ ಬಹುತೇಕ ಭಾಗಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ರಸ್ತೆಯ ಮೇಲೆ ಸಂಚರಿಸುವುದು ಅನಿವಾರ್ಯವಾಗಿದೆ. ನಗರದ…
ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ೫೭,೭೩೩ ಸೈಬರ್ ಪ್ರಕರಣಗಳು ದಾಖಲಾಗಿದ್ದು, ೫,೪೭೫ ಕೋಟಿ ರೂ. ವಂಚನೆ ನಡೆದಿರುವುದಾಗಿ, ಬೆಳಗಾವಿ…