ತೋಟದಿಂದ 4 ವನ್ಯ ಪಕ್ಷಿ ವಶ : ದರ್ಶನ್‌ ದಂಪತಿ ವಿರುದ್ಧ ಪ್ರಕರಣ ದಾಖಲು

ಅರಣ್ಯ ಸಂಚಾರಿ ಅಧಿಕಾರಿಗಳಿಂದ ದಾಳಿ

ಮೈಸೂರು : ತಿ.ನರಸೀಪುರತಾಲ್ಲೂಕು ವ್ಯಾಪ್ತಿಯ ಕೆಂಪಯ್ಯನ ಹುಂಡಿಯಲ್ಲಿರುವ ನಟ ದರ್ಶನ್ ಅವರ ಮಾಲೀಕತ್ವದ ತೂಗುದೀಪ ಫಾರ್ಮ್ ಹೌಸ್ ಮೇಲೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮಂಗೋಲಿಯಾದ ೪ ವಲಸೆ ಹಕ್ಕಿ ‘ಬಾರ್ ಹೆಡೆಡ್ ಗೂಸ್’ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ದರ್ಶನ್, ಪತ್ನಿ ವಿಜಯಲಕ್ಷ್ಮೀ ಹಾಗೂ ಫಾರ್ಮ್ ಹೌಸ್ ವ್ಯವಸ್ಥಾಪಕ ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರೇಡಿಯೋ ಜಾಕಿಯೊಬ್ಬರು ಮಾಡಿದ ವಿಡಿಯೋ ಒಂದರಿಂದ ಈಗ ದರ್ಶನ್ ಗೆ ಸಂಕಷ್ಟ ಎದುರಾಗಿದೆ.

ರೇಡಿಯೋ ಜಾಕಿಯೊಬ್ಬರು ಸಂಕ್ರಾಂತಿ ಹಬ್ಬಕ್ಕೆ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಮಾಡಿದ ವಿಡಿಯೋದಿಂದ ಬಾರ್ ಹೆಡೆಡ್ ಗೂಸ್ ಹಕ್ಕಿಗಳು ದರ್ಶನ್ ಫಾರ್ಮ್ ಹೌಸ್ ಪಂಜರದಲ್ಲಿ ಇರುವುದು ಕಂಡು ಬಂದಿತ್ತು. ಈ ಹಕ್ಕಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ ಷೆಡ್ಯೂಲ್-೨ ಅಡಿಯಲ್ಲಿ ಬರುತ್ತವೆ. ಇವು ವಿರಳವಾದ ಪಕ್ಷಿಗಳಾಗಿವೆ. ಈ ಹಕ್ಕಿಗಳು ಹೆಚ್ಚಾಗಿ ಮಧ್ಯ ಏಷ್ಯಾದ ಮಂಗೋಲಿಯಾ, ಕಜಕಿಸ್ತಾನ, ಟಿಬೆಟ್ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆ ಪ್ರದೇಶದಲ್ಲಿ ಶೀತ ಹೆಚ್ಚಾದಾಗ ರಕ್ಷಣೆಗೋಸ್ಕರ ಹಿಮಾಲಯ ದಾಟಿ ದಕ್ಷಿಣ ರಾಜ್ಯಗಳಿಗ ಆಗಮಿಸುತ್ತವೆ. ಇವುಗಳನ್ನು ಸೆರೆ ಹಿಡಿದು ಸಾಕುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧವಾಗಿರುವ ಹಿನ್ನೆಲೆಯಲ್ಲಿ ದರ್ಶನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.

ದರ್ಶನ್ ಫಾರ್ಮ್ ಹೌಸ್ ವಲಸೆ ಹಕ್ಕಿಗಳು ಇರುವ ಖಚಿತ ಮಾಹಿತಿ ನಮಗೆ ದೊರೆತಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣ ಮೂಲಕ ಸಹ ಈ ವಿಚಾರ ಗಮನಕ್ಕೆ ಬಂತು. ಹಾಗಾಗಿ, ಶುಕ್ರವಾರ ಸಂಜೆ ಸ್ಥಳಕ್ಕೆ ತೆರಳಿ ಹಕ್ಕಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಕ್ಕಿಗಳು ದರ್ಶನ್ ಫಾರ್ಮ್ ಹೌಸ್‌ಗೆ ಹೇಗೆ ಬಂತು? ಅವುಗಳನ್ನು ಅವರಿಗೆ ನೀಡಿದವರು ಯಾರು ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ಆರ್‌ಎಫ್‌ಒ ವಿವೇಕ್ ತಿಳಿಸಿದ್ದಾರೆ.

andolanait

Recent Posts

ಶರಣ್ಯ ಸುರಕ್ಷಿತ ; ಅಧಿಕಾರಿ, ಸಿಬ್ಬಂದಿ, ಬುಡಕಟ್ಟು ಜನರಿಗೆ ಅಭಿನಂದನೆ ಸಲ್ಲಿಸಿದ ಖಂಡ್ರೆ

ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…

8 mins ago

KSOU | ಕುಲಸಚಿವೆಯಾಗಿ ಕೆಎಎಸ್‌ ಅಧಿಕಾರಿ ಕುಸುಮಾಕುಮಾರಿ ನೇಮಕ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…

28 mins ago

ಏ.9ರವರೆಗೆ ರಾಜ್ಯಾದ್ಯಂತ ಯಲ್ಲೋ ಅಲರ್ಟ್, ಮಳೆ ಮುನ್ಸೂಚನೆ

ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…

43 mins ago

ಕಾಂತರಾಜು-ಹೆಗಡೆ ವರದಿಗಳು ಇನ್ನೂ ಸ್ಟೋರೇಜ್‌ನಲ್ಲೇ ಏಕಿದೆ? ; ಕುಮಾರಸ್ವಾಮಿ ಪ್ರಶ್ನೆ

ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…

1 hour ago

ಅಹಿಂದ ಹತ್ತಿಕ್ಕುತ್ತಿರುವ ಸಿದ್ದರಾಮಯ್ಯ : ಕುಮಾರಸ್ವಾಮಿ ಆರೋಪ

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ…

1 hour ago

ಕೊಡಗು | ಟೆಕ್ಕಿ ಶರಣ್ಯ ಕೊನೆಗೂ ಪತ್ತೆ

ಮಡಿಕೇರಿ : ಮಡಿಕೇರಿಯ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಕೊ‌ನೆಗೂ ಪತ್ತೆ…

2 hours ago