ಮೈಸೂರು

ವಿಜ್ಞಾನಕ್ಕೆ ಕಲೆ,ಸಂಸ್ಕೃತಿ ಸಮ್ಮಿಳಿತವಾಗಬೇಕು : ನಾದಾನಂದನಾಥ ಸ್ವಾಮೀಜಿ

ಮೈಸೂರು : ಎಲ್ಲವನ್ನೂ ಸಾಧ್ಯವಾಗಿಸಿದ ವಿಜ್ಞಾನಕ್ಕೆ ಕಲೆ, ಸಂಸ್ಕೃತಿ ಕೂಡದಿದ್ದರೆ ಮೃಗೀಯ ವರ್ತನೆ ಬರುತ್ತದೆ. ಅಧುನೀಕರಣ ನಮ್ಮ ಮೂಲ ಪರಂಪರೆಯನ್ನು ನಾಶ ಮಾಡುವಂತಿರಬಾರದು ಎಂದು ಯಾಚೇನಹಳ್ಳಿ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ ಹೇಳಿದರು.

ನೇರಲಕೆರೆಯ ಲೋಕೇಶ್ ಅವರ ಹೇಮಚಂದ್ರ ನಿಲಯದಲ್ಲಿ ಆಯೋಜಿಸಿದ್ದ ದಿ. ಪಟೇಲ್ ಎನ್.ಎನ್. ಪುಟ್ಟಸ್ವಾಮಿಗೌಡ ಪ್ರತಿಷ್ಠಾನ ಮತ್ತು ಮಂಡ್ಯದ ಎಂಆರ್‌ಎಂ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಕವಿಗೋಷ್ಠಿ, ಕೊತ್ತತ್ತಿ ರಾಜು ಅವರ ಒಗೆವ ಕಲ್ಲು ಶಿವಲಿಂಗ ಕೃತಿ ವಿಮರ್ಶೆ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಂಕ್ರಾಂತಿ ರೈತ ಸಂಸ್ಕೃತಿ ಹಬ್ಬ. ನಮ್ಮ ಪೂರ್ವಿಕರು ಸುಗ್ಗಿ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದರು. ನಮ್ಮ ನೆಲಮೂಲದ ಆಚರಣೆಗಳು ಸಡಿಲವಾಗುತ್ತಿವೆ. ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡವರು ಹಬ್ಬಗಳಲ್ಲಿ ತವರು ನೆಲ ಸ್ಪರ್ಶ ಮಾಡಬೇಕು. ಹಬ್ಬಗಳು ಭಾವನಾತ್ಮಕ ಸಂಬಂಧ ಬೆಸೆಯುತ್ತವೆ. ಮನಸ್ಸು ಭಾವನಾತ್ಮಕವಾಗಿ ಅರಳದಿದ್ದರೆ ಶ್ರೇಯಸ್ಸಿಗೆ ಸಹಾಯವಾಗದು ಎಂದು ತಿಳಿಸಿದರು.

ಲೋಕೇಶ್ ಅವರು ತಮ್ಮ ಮನೆಯಂಗಳದಲ್ಲಿ ೨ನೇ ವರ್ಷ ಸಂಕ್ರಾಂತಿ ಕವಿಗೋಷ್ಠಿ ಆಯೋಜಿಸಿ ಹೊಸದೊಂದು ಸಾಹಿತ್ಯಕ, ಸಾಂಸ್ಕೃತಿಕ ಹೆಜ್ಜೆ ಇಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊತ್ತತ್ತಿ ರಾಜು ಅವರ ಒಗೆವ ಕಲ್ಲು ಶಿವಲಿಂಗ ಕೃತಿ ಕುರಿತು ಮಾತನಾಡಿದ ಕವಿ ಟಿ.ಸತೀಶ್ ಜವರೇಗೌಡ, ಸಾಹಿತ್ಯದಲ್ಲಿ ಎಡಪಂಥ,ಬಲಪಂಥ ಇದೆ. ಆದರೆ, ಜೀವಪಂಥ ಮುಖ್ಯ. ಕೊತ್ತತ್ತಿ ರಾಜು ಅವರ ಕವಿತೆಗಳು ಜೀವಪರ ಮತ್ತು ಸತ್ಯದ ಪರವಾಗಿದ್ದು, ಅವರು ಜೀವಪಂಥದ ಕವಿ ಎಂದು ಹೇಳಿದರು.

೧೨ನೇ ಶತಮಾನದಲ್ಲಿ ತಳ ಸಮುದಾಯಗಳ ಜನರಿಗೆ ಕಾಯಕ ನಿಜವಾದ ದೇವರು. ಆ ಕಾಲದಲ್ಲಿ ದೂರ ಇರಿಸಿದ್ದ ಕಾಯಕ ಜೀವಿಗಳನ್ನು ಕರೆದುಕೊಂಡವರು ಬಸವಣ್ಣ. ರಾಷ್ಟ್ರಕವಿ ಕುವೆಂಪು ನೇಗಿಲಿನಲ್ಲಿ ಕರ್ಮ-ಧರ್ಮ ಕಂಡಿದ್ದಾರೆ. ಕೊತ್ತತ್ತಿ ರಾಜು ಅವರು ಒಗೆವ ಕಲ್ಲಿನಲ್ಲಿ ಶಿವಲಿಂಗ ಕಂಡಿದ್ದಾರೆ. ಇದು ಕನ್ನಡ ಸಾಹಿತ್ಯದಲ್ಲಿ ಅನನ್ಯವಾದ ಪರಂಪರೆ ಎಂದರು.

ಅಭಿನಂದನೆ
ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸುಮಾರಾಣಿ ಶಂಭು, ಸಾವಯವ ಕೃಷಿಕ ಎಚ್. ಸೋಮಶೇಖರ್, ರಂಗಭೂಮಿ ಕಲಾವಿದ ಎನ್.ಎಂ. ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ವಕೀಲ ರಮೇಶ್ ನೇರಲಕೆರೆ ಅಧ್ಯಕ್ಷತೆ ವಹಿಸಿದ್ದರು. ಎಂಆರ್‌ಎಂ ಪ್ರಕಾಶನದ ಮಂಜು ಮುತ್ತೇಗೆರೆ, ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊರವಾಲ ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷ ಎ.ಸತೀಶ್, ನಿವೃತ್ತ ಕನ್ನಡ ಪ್ರಾಧ್ಯಾಪಕ ನಾಗರಾಜು ಕೊತ್ತತ್ತಿ, ಎನ್.ಸಿ. ರಮೇಶ್ ನೇರಲಕೆರೆ, ಗಾಮನಹಳ್ಳಿ ಗಾಪಂ ಮಾಜಿ ಅಧ್ಯಕ್ಷ ಎನ್.ಎಸ್.ಮಹೇಶ್ ಮುಂತಾದವರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ

ಬೆಂಗಳೂರು : ಬೆಂಗಳೂರಿನಲ್ಲಿ ಅನೇಕ ಭಾಷೆ, ಧರ್ಮಗಳಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕನ್ನಡ ಸಂಸ್ಕೃತಿ ಇಲಾಖೆ…

1 hour ago

ಗಾಂಜಾ ಮಾರಾಟ : ಓರ್ವ ಬಂಧನ

ಹನೂರು : ಹನೂರು ಪಟ್ಟಣ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಹನೂರು ತಾಲೂಕಿನ…

1 hour ago

ಸ್ಟಾರ್ ನಟಿಯ ಜೊತೆ ಧನುಷ್ ಕಲ್ಯಾಣ? ; ವೈರಲ್ ಆಗ್ತಿದೆ ಮದುವೆಯ ಗುಸುಗುಸು!

ಚೆನ್ನೈ : ಕಾಲಿವುಡ್‌ ನಟ ಧನುಷ್ ಸ್ಟಾರ್ ನಟಿಯನ್ನು ಕೈ ಹಿಡಿಯಲು ಸಿದ್ದರಾಗಿದ್ದಾರೆ. ಹೌದು ಹೀಗೊಂದು ಸುದ್ದಿ ಸಿನಿಮಾ ಇಂಡಸ್ಟ್ರಿಯಲ್ಲಿ…

2 hours ago

ಮುಂಬೈ ಮುನ್ಸಿಪಲ್‌ ಚುನಾವಣೆಯಲ್ಲೂ ವೋಟ್‌ ಚೋರಿ : ರಾಹುಲ್‌ಗಾಂಧಿ ಗಂಭೀರ ಆರೋಪ

ಮುಂಬೈ : ವೋಟಿ ಚೋರಿ ವಿರುದ್ಧ ಸಮರ ಸಾರಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ…

3 hours ago

ಸ್ಟಾರ್ಟ್‌ಅಪ್‌ನಿಂದ ಆರ್ಥಿಕ ಪರಿವರ್ತನೆಗೆ ನಾಂದಿ : ಎಚ್‌.ಡಿ.ಕೆ ಶ್ಲಾಘನೆ

ಬೆಂಗಳೂರು : ಕಳೆದ 10 ವರ್ಷಗಳಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಭಾರತದಲ್ಲಿ ನವಯುಗದ ನಾವೀನ್ಯತೆ, ಉದ್ಯಮಶೀಲತೆ ಮತ್ತು ಆರ್ಥಿಕ ಪರಿವರ್ತನೆಗೆ ನಾಂದಿ…

4 hours ago

ದಿಲ್ಲಿ ಚಲೋ : ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಧ್ವನಿ

ಫೆ.7ರಿಂದ ರೈತ ಜಾಗೃತಿ ಯಾತ್ರೆ ಆರಂಭ ಮಾ.19ರಂದು ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್‌ ಸಮಾವೇಶ ಮೈಸೂರು : ಕೃಷಿ ಉತ್ಪನ್ನಗಳಿಗೆ…

4 hours ago