ಮೈಸೂರು :ಗುಂಡಿಬಿದ್ದ ನಗರದ ರಸ್ತೆಗಳಿಗೆ ಮುಕ್ತಿ ನೀಡುವ ಸಲುವಾಗಿ 250 ಕೋಟಿ ರೂ. ವೆಚ್ಚದ ಡಾಂಬರೀಕರಣಕ್ಕೆ ಮರು ಚಾಲನೆ ನೀಡಲು ಮೈಸೂರು ಮಹಾನಗರಪಾಲಿಕೆ ಮುಂದಾಗಿದೆ.
ಈ ಹಿಂದಿನ ಮೇಯರ್ ಸುನಂದಾ ಪಾಲನೇತ್ರ ಅವರು 25 ಕೋಟಿ ರೂ., ಶಾಸಕರಾದ ಎಸ್.ಎ. ರಾಮದಾಸ್ ಅವರು 150 ಕೋಟಿ ರೂ. ಹಾಗೂ ಎಲ್.ನಾಗೇಂದ್ರ ಅವರು 200 ಕೋಟಿ ರೂ. ಅನುದಾನವನ್ನು ರಸ್ತೆ, ಪಾರ್ಕ್, ಯುಜಿಡಿ ಅಭಿವೃದ್ಧಿಗೆ ತಂದಿದ್ದಾರೆ. ಇದರ ಜೊತೆಗೆ ಪಾಲಿಕೆಯ 10 ಕೋಟಿ ರೂ. ಹಾಗೂ 15ನೇ ಹಣಕಾಸಿನ ಯೋಜನೆಯಡಿ ಅನುದಾನವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತಿದೆ. ಒಟ್ಟಾರೆ ಸದ್ಯ 250 ಕೋಟಿ ರೂ. ವೆಚ್ಚದಲ್ಲಿ ಇನ್ನು ಮೂರು ದಿನದಲ್ಲಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಲಾಗುತ್ತದೆ.
ದಸರಾ ಮಹೋತ್ಸವ ಹಾಗೂ ಮಳೆ ಅಡಚಣೆ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗಕ್ಕಷ್ಟೇ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಇದೀಗ ದಸರಾ ಮುಗಿದು ಮಳೆಯೂ ಬಿಡುವು ಕೊಟ್ಟಿರುವುದರಿಂದ ವಾರದೊಳಗೆ ನಗರದ ಗುಂಡಿ ಹಾಗೂ ಹಳ್ಳಬಿದ್ದ ರಸ್ತೆಗಳಿಗೆ ಡಾಂಬರೀಕರಣ ಹಾಕಲು ಪಾಲಿಕೆ ನಿರ್ಧರಿಸಿದೆ. ಸೋಮವಾರ (ಅ.10ರಿಂದ) ದಿಂದಲೇ ನಗರಪಾಲಿಕೆ ಮೇಯರ್ ಶಿವಕುಮಾರ್ ಅವರು ನಗರದಾದ್ಯಂತ ಸ್ಥಳ ಪರಿಶೀಲನೆ ನಡೆಸಿ ಯಾವ ಬಡಾವಣೆಯ ಯಾವ ರಸ್ತೆಗಳಿಗೆ ಡಾಂಬರೀಕರಣ ಅಗತ್ಯವಿದೆ ಎಂಬ ಪಟ್ಟಿ ತಯಾರಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಅವರೊಂದಿಗೂ ಮಾತುಕತೆ ನಡೆಸಿದ್ದು, ಇನ್ನೆರಡು ತಿಂಗಳಿನಲ್ಲಿ ಗುಂಡಿ ರಸ್ತೆಗಳಿಗೆ ಮುಕ್ತಿ ನೀಡಲು ಕಟಿಬದ್ಧರಾಗಿದ್ದಾರೆ.
ಎಲ್ಲಿ? ಎಷ್ಟು ಅನುದಾನ?
ಈ ಹಿಂದಿನ ಮೇಯರ್ ಸುನಂದಾ ಪಾಲನೇತ್ರ ಅವರು 25 ಕೋಟಿ ರೂ., ಶಾಸಕರಾದ ಎಸ್.ಎ. ರಾಮದಾಸ್ ಅವರು 150 ಕೋಟಿ ರೂ. ಹಾಗೂ ಎಲ್.ನಾಗೇಂದ್ರ ಅವರು 200 ಕೋಟಿ ರೂ. ಅನುದಾನವನ್ನು ರಸ್ತೆ, ಪಾರ್ಕ್, ಯುಜಿಡಿ ಅಭಿವೃದ್ಧಿಗೆ ತಂದಿದ್ದಾರೆ. ಇದರ ಜೊತೆಗೆ ಪಾಲಿಕೆಯ 10 ಕೋಟಿ ರೂ. ಹಾಗೂ 15ನೇ ಹಣಕಾಸಿನ ಯೋಜನೆಯಡಿ ಅನುದಾನವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತಿದೆ. ಒಟ್ಟಾರೆ ಸದ್ಯ 250 ಕೋಟಿ ರೂ. ವೆಚ್ಚದಲ್ಲಿ ಇನ್ನು ಮೂರು ದಿನದಲ್ಲಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಲಾಗುತ್ತದೆ. ಟೆಂಡರ್ ಹಂತದಲ್ಲಿರುವ ರಸ್ತೆ ಕಾಮಗಾರಿಯನ್ನೂ ಬೇಗ ಮುಗಿಸಲು ಪಾಲಿಕೆ ಚಿಂತನೆ ನಡೆಸಿದೆ.
ನವದೆಹಲಿ : ಇರಾನ್-ಅಮೆರಿಕ ಉದ್ವಿಗ್ನತೆಯ ನಡುವೆ ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಸೂಪರ್ ಟ್ಯಾಂಕರ್ ಮೇಲೆ ಇರಾನಿಯನ್ ಗನ್‌ಬೋಟ್‌ಗಳಿಂದ…
ಟೆಹ್ರಾನ್ : ಅಮೆರಿಕ ಜೊತೆಗಿನ ಮಾತುಕತೆ ಭಾಗವಾಗಿ ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಇರಾನ್, ತನ್ನ ನಿರ್ಧಾರವನ್ನು…
ಬೆಂಗಳೂರು : ಮೈಸೂರಿನ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಚಿರತೆ ಮಂಚದಡಿ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ…
ಬೆಂಗಳೂರು : ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡ 4 ಶಿವಂಗಿ (ಚೀತಾ)ಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ…
ಬೆಂಗಳೂರು- ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ. ಕೇಂದ್ರ ಸರ್ಕಾರ ಲೋಕಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದನ್ನು ಮಹಿಳಾ ಮೀಸಲಾತಿಯೊಂದಿಗೆ…
ಉಡುಪಿ: ಶ್ರೀಕೃಷ್ಣ ಮಂದಿರಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಭೇಟಿ ನೀಡಿದರು. ಅವರ ಜನ್ಮದಿನದ ಪ್ರಯುಕ್ತ ಕೆಲವು…