ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲಿ ಶರವೇಗದಲ್ಲಿ ಸಂಶೋಧನೆಗಳು ಜರಗುತ್ತಿದ್ದು, ವೈದ್ಯರುಗಳು ಅವುಗಳನ್ನು ಅಧ್ಯಯನ ಮಾಡಿ ಅದಕ್ಕನುಗುಣವಾಗಿ ತಮ್ಮ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕೆಂದು ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮೈಸೂರಿನ ಸುಯೋಗ್ ಆಸ್ಪತ್ರೆಯ ವತಿಯಿಂದ ಗ್ರಾಮೀಣ ವೈದ್ಯರುಗಳಿಗೆ ಆಯೋಜಿಸಿದ್ದ ಪುನರ್ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಕ್ಕರೆ ಕಾಯಿಲೆ ಮತ್ತು ಏರು ರಕ್ತ ಒತ್ತಡದ ಕಾಯಿಲೆಗಳನ್ನು ಸೂಕ್ತ ಹಾಗೂ ನಿರಂತರ ಚಿಕಿತ್ಸಾ ವಿಧಾನಗಳಿಂದ ನಿಯಂತ್ರಣದಲ್ಲಿಟ್ಟುಕೊಳ್ಳಬಹುದೇ ವಿನಃ ಸಂಪೂರ್ಣವಾಗಿ ವಾಸಿವಾಡಲು ಸಾಧ್ಯವಿಲ್ಲ ಎಂಬ ವೈಜ್ಞಾನಿಕ ಸತ್ಯವನ್ನು ರೋಗಿಗಳಿಗೆ ವೈದ್ಯರು ಮನವರಿಕೆ ಮಾಡಿಕೊಡಬೇಕೆಂದರು.
ಸಕ್ಕರೆ ಕಾಯಿಲೆಯನ್ನು ಸಂಪೂರ್ಣವಾಗಿ ವಾಸಿವಾಡುತ್ತೇವೆ ಎಂಬ ಹುಸಿ ಜಾಹೀರಾತುಗಳಿಗೆ ಜನಸಾವಾನ್ಯರು ಮಾರುಹೋಗದಂತೆ ವೈದ್ಯರುಗಳು ಜನರಿಗೆ ಮನವರಿಕೆ ಮಾಡಿಕೊಡಬೇಕು.
ಜತೆಗೆ, ರೋಗಿಗಳಿಗೆ ವೈದ್ಯರುಗಳು ಚಿಕಿತ್ಸೆಯನ್ನು ಮಾತ್ರ ನೀಡದೆ ಅವರೊಂದಿಗೆ ಕಾಯಿಲೆಯ ಬಗ್ಗೆ ಚರ್ಚಿಸಿ ಪಾಲಿಸಬೇಕಾದ ಜೀವನಶೈಲಿ ಮತ್ತು ಔಷಧಗಳನ್ನು ಉಪಯೋಗಿಸುವ ವಿಧಿ ವಿಧಾನಗಳನ್ನು ಮನದಟ್ಟು ಮಾಡಿಕೊಡಬೇಕೆಂದು ತಿಳಿಸಿದರು.
ಸುಯೋಗ್ ಆಸ್ಪತ್ರೆಯ ಫಿಜೀಷಿಯನ್ ಡಾ.ಅಭಿಷೇಕ್ ಅವರು, ಏರು ರಕ್ತ ಒತ್ತಡದ ನಿುಯಂತ್ರಣದ ಬಗ್ಗೆ, ಸುಯೋಗ್ ಆಸ್ಪತ್ರೆಯ ಸಕ್ಕರೆ ಕಾಯಿಲೆ ತಜ್ಞ ಡಾ.ಅಭಿಲಾಶ್ ಅವರು, ಸಕ್ಕರೆ ಕಾಯಿಲೆಯ ಚಿಕಿತ್ಸಾ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಗಾರದಲ್ಲಿ ಸುವಾರು ೧೫೦ ಜನ ಗ್ರಾಮೀಣ ಪ್ರದೇಶದ ವೈದ್ಯರು ಪಾಲ್ಗೊಂಡಿದ್ದರು.
ಸುಯೋಗ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಯೋಗ್ ಯೋಗಣ್ಣ, ಸುಯೋಗ್ ಆಸ್ಪತ್ರೆುಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಯೋಗೇಶ್, ಆಸ್ಪತ್ರೆಯ ಜನರಲ್ ಮ್ಯಾನೇಜರ್ ಅರುಣ್ ಕುವಾರ್ ಇತರರು ಹಾಜರಿದ್ದರು.
ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…
ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…
ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…