ಮೈಸೂರು

ಮೈಸೂರಲ್ಲಿ 24 ಗಂಟೆ ಅವಧಿಯಲ್ಲಿ ರೇಪ್‌ ಅಂಡ್‌ 2 ಮರ್ಡರ್‌ ; ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಹೇಳಿದ್ದೇನು.?

ಮೈಸೂರು : ಅಪ್ರಾಪ್ತ ಬಾಲಕಿ ರೇಪ್ ಅಂಡ್ ಮರ್ಡರ್ ಪ್ರಕರಣ ವಿಚಾರಕ್ಕೆ ಸಂಬಧಪಟ್ಟಂತೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಕೆಲ ವಿಚಾರಗಳನ್ನು ತಿಳಿಸಿದ್ದಾರೆ.

ನಿನ್ನೆ ನಜರಾಬಾದ್ ಲಿಮಿಟ್ ಅಲ್ಲಿ ಅಪ್ರಾಪ್ತ ಬಾಲಕಿ ರೇಪ್ ಅಂಡ್ ಮರ್ಡರ್ ಆಗಿದೆ. ಇದರ ಸಂಬಂಧ ನಾವು ಆರೋಪಿ ಅರೆಸ್ಟ್ ಮಾಡಿದ್ದೇವೆ. ನಿನ್ನೆ ಆರೋಪಿ ಕರೆದುಕೊಂಡು ಬರುತ್ತಿದ್ದ ವೇಳೆ ಸಿದ್ದಲಿಂಗಪುರ ಅಂತ ಹೇಳಿದ್ದ. ಮಹಜರ್ ಗಾಗಿ ಅಲ್ಲಿ ಕರೆದುಕೊಂಡು ಹೋದ ಸಂಧರ್ಭದಲ್ಲಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆ ಸಂಧರ್ಭದಲ್ಲಿ ನಮ್ಮವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದೂ ಪೊಲೀಸ್ ತಂಡದಲ್ಲಿದ್ದ ಇಬ್ಬರು ಸಿಬ್ಬಂದಿಗಳ ಮೇಲೆ ಬಾಟಲ್ ನಿಂದ ಚುಚ್ಚಿದ್ದಾನೆ ಎಂದು ಮಾಹಿತಿ ನೀಡಿದರು.

ಇದನ್ನು ಓದಿ : ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ : ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ಈತನ ಮೇಲೆ ಹಳೆಯ ಕೇಸ್ ಕೂಡ ಇದೆ. ಬೇಲ್ ಮೇಲೆ ಹೊರಗಡೆ ಬಂದಿದ್ದ. ನಿನ್ನೆ ಮಗು ಮಲಗಿದ್ದ ವೇಳೆ ಎತ್ತುಕೊಂಡು ಹೋಗಿ ಕೃತ್ಯ ಮಾಡಿದ್ದಾನೆ. ಈತ ಮಾದಕ ವ್ಯಸನಿ ಅಂತ ಗೊತ್ತಾಗಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ ಎಂದರು.

ಇನ್ನೂ ಹಾಡು ಹಗಲೇ ವೆಂಕಟೇಶ್ ಕೊಲೆ ಪ್ರಕರಣ ಸಂಬಂಧ ಮಾಹಿತಿ ನೀಡಿ, ವೆಂಕಟೇಶ್ ಹತ್ಯೆಯಲ್ಲಿ 6 ಜನ ಭಾಗಿಯಾಗಿದ್ದಾರೆ. ಈಗಾಗಲೇ ಅವರನ್ನು ಅರೆಸ್ಟ್ ಮಾಡಿದ್ದೇವೆ. ಧ್ರುವ ಕುಮಾರ್ ಒಬ್ಬರು ಮಂಡ್ಯದವರು, ಉಳಿದ 5 ಜನ ಮೈಸೂರಿನವರು. ಹಾಲಪ್ಪ ಹಾಗೂ ಮೃತ ವೆಂಕಟೇಶ್ ನಡುವೆ ಶೀತಲ ಸಮರ ಇತ್ತು. ಒಂದೇ ಗ್ರೂಪ್ ಆದ್ರೂ ಸಹ ನಾನಾ ನೀನಾ ಅನ್ನೋ ವಿಚಾರಕ್ಕೆ ಕೊಲೆ ಆಗಿದೆ. ಈ ಹಿಂದೆ ನಡೆದ ಕಾರ್ತಿಕ್ ಕೊಲೆಗೂ ಇದಕ್ಕೂ ಲಿಂಕ್ ಇದ್ಯಾ ಅಂತ ನೋಡುತ್ತಿದ್ದೇವೆ. ಅವರು ಸಣ್ಣ ಪುಟ್ಟ ಫೈನಾನ್ಸ್ ಮಾಡುತ್ತಿದ್ದ ಅಂತ ಗೊತ್ತಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್  ಹೇಳಿದ್ದಾರೆ.

ಆಂದೋಲನ ಡೆಸ್ಕ್

Recent Posts

ಕೆರೆ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು : ಹನೂರು ಶಾಸಕ ಮಂಜುನಾಥ್‌

ಹನೂರು : ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ರೈತರಿಗೆ ವ್ಯವಸಾಯಕ್ಕೆ ಹೆಚ್ಚಿನ…

21 mins ago

ಹನೂರು | ಸುಗಮ ಸಂಚಾರಕ್ಕೆ 4.5ಕೋಟಿ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ

ಹನೂರು : ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ನೆರೆಯ ತಮಿಳುನಾಡಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ,…

35 mins ago

ರಾಜ್ಯದ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ : ಇಲ್ಲಿದೆ ಮಾಹಿತಿ

ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು(ಇಸಿಐ) ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಭಾನುವಾರ ಪ್ರಕಟಿಸಿದೆ. ಈ ಕುರಿತು…

54 mins ago

ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ : 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ…

2 hours ago

ಸೌದಿ ಅರೇಬಿಯಾದಲ್ಲಿರುವ ಅಮೇರಿಕಾದ ವಾಯುನೆಲೆಯ ಮೇಲೆ ಇರಾನ್‌ ದಾಳಿ

ಟೆಹರಾನ್:‌ ಯುಎಸ್‌ ಮಿಲಿಟರಿ ಬಳಸುತ್ತಿದ್ದ ಸೌದಿ ಅರೇಬಿಯಾದ ಅಲ್‌ ಖಾರ್ಜ್‌ ವಾಯುನೆಲೆಯ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಕೆಲವು…

3 hours ago

ಸ್ವಲ್ಪ ಮಟ್ಟಿಗೆ ಹೋಟೆಲ್‌ಗಳಿಗೆ ವಾಣಿಜ್ಯ ಎಲ್‌ಪಿಜಿ ನೀಡುವ ಬಗ್ಗೆ ಚರ್ಚೆ: ಸಚಿವ ಮುನಿಯಪ್ಪ

ಬೆಂಗಳೂರು: ನಗರದಲ್ಲಿ ವಾಣಿಜ್ಯ ಎಲ್‌ಪಿಜಿ ಕೊರತೆ ಮುಂದುವರಿದಿದ್ದು, ಸ್ವಲ್ಪ ಮಟ್ಟಿಗೆ ಹೋಟೆಲ್‌ಗಳಿಗೆ ಎಲ್‌ಪಿಜಿ ನೀಡಲು ಚರ್ಚಿಸುತ್ತೇವೆ ಎಂದು ಸಚಿವ ಮುನಿಯಪ್ಪ…

3 hours ago