ಮೈಸೂರು

ಎರಡು ವರ್ಷಗಳಿಂದಲೂ ನಿದ್ದೆಗೆ ಜಾರಿದ ರಂಗಾಯಣದ ವೆಬ್‌ಸೈಟ್!

ಬಹುರೂಪಿ ಬೆಳ್ಳಿಹಬ್ಬದ ಮಾಹಿತಿ ಸಾರ್ವಜನಿಕರಿಗೆ ತಲುಪಿಸಲು ವಿಫಲ

ಮೈಸೂರು : ನಗರದ ರಂಗಾಯಣದ ಬಹುರೂಪಿಗೆ ಈ ಬಾರಿ ಬೆಳ್ಳಿಹಬ್ಬದ ಸಂಭ್ರಮ. ಅದನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದು, ಅಲ್ಲಿನ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿವೆ. ಸಾಮಾನ್ಯವಾಗಿ ಇಂತಹ ನಾಟಕೋತ್ಸವದ ಮಾಹಿತಿಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಯಾವುದೇ ಗೊಂದಲಗಳಿಲ್ಲದೆ ತಲುಪಿಸಲು ಅಧಿಕೃತವಾಗಿ ವೆಬ್‌ಸೈಟ್ ಇದೆ. ಆದರೆ, ಈ ವೆಬ್‌ಸೈಟ್ ಸುಮಾರು ಎರಡು ವರ್ಷಗಳಿಂದ ನಿದ್ದೆಗೆ ಜಾರಿದೆ.

ಹೌದು. ಮೈಸೂರು ರಂಗಾಯಣದ ಅಧಿಕೃತ ವೆಬ್‌ಸೈಟ್ rangayanamysore.karnataka.gov.in ಸದ್ಯಕ್ಕೆ ತಾಂತ್ರಿಕವಾಗಿ ಲೈವ್ ಆಗಿದ್ದರೂ, ಅದರಲ್ಲಿ ಹೊಸ ಮಾಹಿತಿಗಳ ಕೊರತೆ ಗಮನಾರ್ಹವಾಗಿ ಕಾಡುತ್ತಿದೆ. ವೈಬ್‌ಸೈಟ್ ತೆರೆದಾಗ ಕಾಣುವುದು 2024ರ ಚಿಣ್ಣರಮೇಳ, ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ, ಮಾತಿನ ಮನೆ ಕಾರ್ಯಕ್ರಮ, ಮೈಸೂರು ಸಂಕ್ರಾಂತಿ ರಂಗಹಬ್ಬ ಮುಂತಾದ ಹಳೆಯ ಈವೆಂಟ್‌ಗಳ ವಿವರಗಳು ಮಾತ್ರ. ಹೊಸ ನಾಟಕಗಳ ದಿನಾಂಕ, ಟಿಕೆಟ್ ಬುಕಿಂಗ್, ಅಥವಾ ಇತ್ತೀಚಿನ ಕಾರ್ಯಕ್ರಮಗಳ ಬಗ್ಗೆ ಯಾವುದೇ ಹೊಸ ಅಪ್‌ಡೇಟ್ ಇಲ್ಲ. ಕೆಲವು ವಿಭಾಗಗಳಲ್ಲಿ ” “No news to display” ಎಂದು ತೋರಿಸುತ್ತಿದೆ. ಕರಪತ್ರ, ಬ್ಯಾನರ್‌, ಆಹ್ವಾನ ಪತ್ರಿಕೆ ಇವುಗಳನ್ನು ಮುದ್ರಿಸಿ ಪ್ರಕಟಿಸಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹುಡುಕುವವರಿಗೆ ರಂಗಾಯಣದ ವೆಬ್‌ಸೈಟ್‌ ನಿಷ್ಕ್ರೀಯವಾಗಿರುವುದು ಬೇಸರ ತರಿಸಿದೆ.

25ನೇ ಬಹುರೂಪಿ ಬೆಳ್ಳಿ ಹಬ್ಬವು `ಬಹುರೂಪಿ ಬಾಬಾ ಸಾಹೇಬ್-ಸಮಾನತೆಯ ನಡಿಗೆ’ ಥೀಮ್‌ನೊಂದಿಗೆ ಜನವರಿ 11ರಿಂದ ಆರಂಭವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು, ಸಾಮಾಜಿಕ ನ್ಯಾಯ, ಸಮಾನತೆಯನ್ನು ರಂಗದ ಮೇಲೆ ತಂದು ರಂಗಾಸಕ್ತರನ್ನು ಆಕರ್ಷಿಸುತ್ತಿದೆ. ರಾಷ್ಟ್ರೀಯ ಮಟ್ಟದ ನಾಟಕಗಳು, ಮಕ್ಕಳ ಬಹುರೂಪಿ, ಚಲನಚಿತ್ರೋತ್ಸವ, ಜನಪದ ಕಲೆಗಳು, ಪುಸ್ತಕ ಮೇಳ, ಕರಕುಶಲ ಪ್ರದರ್ಶನ, ದೇಸಿ ಆಹಾರೋತ್ಸವ, ಚಿತ್ರಕಲೆ ಪ್ರದರ್ಶನ, ರಸ್ತೆ ನಾಟಕಗಳು ಹೀಗೆ ಎಲ್ಲವೂ ಒಟ್ಟಿಗೆ ರಂಗಾಯಣವನ್ನು ಒಂದು ಸಾಂಸ್ಕೃತಿಕ ಹಬ್ಬವನ್ನಾಗಿ ಮಾಡಿದೆ. ಆದರೆ ಇಷ್ಟೆಲ್ಲಾ ಇದ್ದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಒಂದೇ ಒಂದು ಅಪ್‌ಡೇಟ್ ಇಲ್ಲದಿರುವುದು ರಂಗಾಯಣಕ್ಕೆ ಡಿಜಿಟಲ್ ಸ್ಪರ್ಶದ ಕೊರತೆಯಿದೆ ಎಂದು ತೋರಿಸುತ್ತದೆ.

ನಿರ್ದೇಶಕ ಸತೀಶ್ ತಿಪಟೂರು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಬೆಳ್ಳಿಹಬ್ಬ ಆಚರಣೆಗೆ ಪೂರ್ವಭಾವಿಯಾಗಿ 2025ರ ನವೆಂಬರ್‌ನಿಂದ ವಾರಾಂತ್ಯ ನಾಟಕೋತ್ಸವಗಳು ನಡೆದವು. ರಾಜ್ಯದ ಎಲ್ಲ ರಂಗಾಯಣ ಕಲಾವಿದರು ಮೈಸೂರಿನಲ್ಲಿ ಪ್ರದರ್ಶನ ನೀಡಿದರು. ಜನವರಿ 10ರಂದು ನಗರದಾದ್ಯಂತ ಬೀದಿ ನಾಟಕಗಳ ಮೂಲಕ ಪ್ರಚಾರ ಮಾಡಲಾಯಿತು. ಆದರೆ ಈ ಎಲ್ಲ ಭರ್ಜರಿ ಕಾರ್ಯಕ್ರಮಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ಇನ್ನೂ ಅಪ್‌ಲೋಡ್ ಆಗಿಲ್ಲ!. ಈ ಎಲ್ಲಾ ಮಾಹಿತಿಗಳು ರಂಗಾಯಣದ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದರೆ ಇನ್ನೂ ಹೆಚ್ಚಿನ ರಂಗಾಸಕ್ತರನ್ನು ರಂಗಾಯಣ ತನ್ನೆಡೆಗೆ ಸೆಳೆಯಬಹುದಿತ್ತು.

ಹೀಗಾಲಾದರೂ ಒಂದು ವಾರಗಳ ಕಾಲ ನಡೆದ ಬಹುರೂಪಿಯ ವಿವಿಧ ನಾಟಕಗಳು, ಚಲನಚಿತ್ರೋತ್ಸವ, ಜಾನಪದ ಉತ್ಸವ, ಮಕ್ಕಳ ರಂಗ ಉತ್ಸವ ಇವುಗಳ ವಿವಿಧ ತುಣುಕುಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವ ಮೂಲಕ ಬಹುರೂಪಿ ಉತ್ಸವವನ್ನು ಬಹು ಜನರಿಗೆ ರಂಗಾಯಣ ತಲುಪಿಸಬೇಕಾಗಿದೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮಾರ್ಚ್.12ಕ್ಕೆ ಕನ್ನಡ ಶಾಲೆಗಳ ಬಂದ್‌ಗೆ ವಾಟಾಳ್‌ ನಾಗರಾಜ್‌ ಕರೆ

ಮೈಸೂರು: ರಾಜ್ಯ ಬಜೆಟ್‌ನಲ್ಲಿ ಕನ್ನಡ ಶಾಲೆಗಳನ್ನು ಕಡೆಗಣನೆ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಮಾರ್ಚ್.‌12ರಂದು…

29 mins ago

ಮಕ್ಕಳಿಗೆ ಮೊಬೈಲ್‌ ನಿಷೇಧ ಸರಿಯಲ್ಲ: ವಾಟಾಳ್‌ ನಾಗರಾಜ್‌ ಕಿಡಿ

ಮೈಸೂರು: ಮಕ್ಕಳಿಗೆ ಮೊಬೈಲ್‌ ಬಳಕೆ ನಿಷೇಧ ಸರಿಯಲ್ಲ. ಸರ್ಕಾರದ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌…

54 mins ago

ಟ್ರಂಪ್‌ ಜೊತೆ ಸೇರಿಕೊಂಡು ಮೋದಿ ನಮ್ಮ ದೇಶ ಹಾಳು ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೋದಿ ಮೂಗು ಹಿಡಿದುಕೊಂಡು ಕಂಟ್ರೋಲ್‌ ಮಾಡುತ್ತಿದ್ದಾನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ…

1 hour ago

ಮಲಗಿದ್ದ ವೇಳೆ ಹೃದಯಾಘಾತ: ಆರೋಗ್ಯ ಇಲಾಖೆ ನೌಕರ ಸಾವು

ಹಾಸನ: ಹೃದಯಾಘಾತದಿಂದ ಆರೋಗ್ಯ ಇಲಾಖೆ ನೌಕರ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೇವಾನಂದ್‌ ಎಂಬುವವರೇ ಮೃತಪಟ್ಟ…

1 hour ago

ಉಡುತೊರೆ ಹಳ್ಳ ಜಲಾಶಯ ಕಾಮಗಾರಿಗೆ ಸಿಎಂ ಅನುಮೋದನೆ: ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಉಡುತೊರೆ ಹಳ್ಳ ಜಲಾಶಯ ಏತ ನೀರಾವರಿ ಯೋಜನೆ ಹಾಗೂ…

2 hours ago

ಮತ್ತೆ ಇರಾನ್‌ನ ನಾಲ್ಕು ತೈಲ ಘಟಕಗಳನ್ನು ಉಡೀಸ್‌ ಮಾಡಿದ ಅಮೇರಿಕಾ

ಟೆಹರಾನ್:‌ ಇರಾನ್‌ ಮೇಲೆ ಇಸ್ರೇಲ್‌ ಹಾಗೂ ಅಮೇರಿಕಾ ದಾಳಿ ಮುಂದುವರಿಸಿದ್ದು, ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಇರಾನ್‌ನ ಬೀದಿ ಬೀದಿಗಳಲ್ಲಿ ಬೆಂಕಿ…

2 hours ago