ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ಪ್ರದರ್ಶನದ ಮೂಲಕ ತೆರೆ ಬಿತ್ತು.
ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹೊಸದಿಲ್ಲಿಯ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ನಿರಂತರ -ಫೌಂಡೇಷನ್ ಏರ್ಪಡಿಸಿದ್ದ ಐದು ದಿನಗಳ ನಿರಂತರ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತಿ ಚಿಂತಕ ದೇವನೂರು ಬಸವರಾಜು ಮಾತನಾಡಿ, ನಿರಂತರ ರಂಗತಂಡ ಪ್ರಗತಿಪರವಾಗಿ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಚಿಂತನೆಗಳ ಸಮೂಹವಾಗಿದೆ. ಇವತ್ತು ಜಾತಿ, ಧರ್ಮ, ಮೌಢ್ಯತೆಗಳಿಂದ ಹದಗೆಟ್ಟ ಸ್ಥಿತಿಯ ಸಮಾಜದಲ್ಲಿ, ಸಂಸ್ಥೆ ಕ್ರಿಯಾಶೀಲವಾಗಿ ಬೆಳೆದು ಬಂದಿದೆ ಎಂದರು.
ಪ್ರಸ್ತುತದಲ್ಲಿ ಜಾತಿ, ಧರ್ಮಗಳು ಮನುಷ್ಯನನ್ನು ಮೀರಿ ಬೆಳೆದಿವೆ. ಇಂತಹ ಸಮಯದಲ್ಲಿ ಯುವ ಮನಸ್ಸುಗಳಲ್ಲಿ ಪ್ರಗತಿಪರ ಆಲೋಚನೆಗಳನ್ನು, ಚಿಂತನೆಗಳನ್ನು, ಸದೃಢ ಭವಿಷ್ಯವನ್ನು ನಿರ್ಮಾಣ ಮಾಡುವಂತಹ ಮನೋಭಾವವನ್ನು ರಂಗತಂಡಗಳು, ಕಲಾವಿದರೂ ಮಾಡಬೇಕಿದೆ. ಅದಲ್ಲದೇ ಈ ವಿಚಾರವಂತಿಕೆಯನ್ನು ಕಾಲೇಜು ವಿದ್ಯಾರ್ಥಿಗಳಲ್ಲಿ ಬಿತ್ತುವ ಕೆಲಸ ಮತ್ತಷ್ಟು ಹೆಚ್ಚಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇವತ್ತು ರಂಗದ ಮೇಲೆ ಪ್ರಸ್ತುತದಲ್ಲಿ ನಡೆಯುತ್ತಿರುವ ವಿಚಾರಗಳ ಕುರಿತು ನಾಟಕ ಪ್ರದರ್ಶನಗಳಾಗಬೇಕಿದೆ. ಈ ನಡೆಯಲ್ಲಿ ಮೊಬೈಲ್‌ಗಳಿಂದ ಆಗುವ ಅನಾಹುತದ ‘ಮೈ ಫೈಮಿಲಿ’ ನಾಟಕ, ಹಿಂದು ಮುಸ್ಲಿಂ ಭಾವೈಕ್ಯತೆಯ ‘ಗೊರೂರು’ ನಾಟಕಗಳು ನಿದರ್ಶನಗಳಾಗಿವೆ. ನಾಟಕಗಳು ಪ್ರಗತಿಪರ ಚಿಂತನೆಗಳಿಗಾಗಿ, ನಾಳೆಯ ನೆಮ್ಮದಿಗಾಗಿ ಕಾರ್ಯನಿರ್ವಹಿಸುವ ಕೆಲಸ ಹೆಚ್ಚಾಗಿ ನಿರಂತರವಾಗಿರಲಿ ಎಂದು ಬಣ್ಣಿಸಿದರು.
ಹಿರಿಯ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಮಾತನಾಡಿ, ಯುವ ತಲೆಮಾರನ್ನು ಕಟ್ಟುವ ಕೆಲಸ ನಿರಂತರ, ನಿರಂತರವಾಗಿ ಮಾಡುತ್ತಾ ಬಂದಿದೆ. ಅದು ಮುಂದೆ ಸಾಗಬೇಕಾಗಿದ್ದು, ಸಮಾಜದಲ್ಲಿನ ಇವತ್ತಿನ ವಿಕೃತಿಗೆ ಇದೊಂದೇ ಪರಿಹಾರ. ಇಂತಹ ಉತ್ಸವಗಳು ಉತ್ಕೃಷ್ಟವಾಗಿ ನಡೆಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಡೂರು ನವೀನ್ ಕುಮಾರ್ ಮತ್ತು ತಂಡ
ಜಾನಪದ ನೃತ್ಯ, ವೀರಗಾಸೆ ಮೇಳೈಸಿತು. ಬಳಿಕ ಶ್ರೀರಂಗಪಟ್ಟಣದ ನಿರ್ದಿಗಂತ ರಂಗ ತಂಡ ಪ್ರಸ್ತುತಿಯ ಶಕೀಲ್ ಅಹ್ಮದ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದ ದಾರಿಯೋ – ಅವರ ‘ಕಾಂಟ್ ಪೇ ವೋಂಟ್ ಪೇ’ ಆಧಾರಿತ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ಕೊನೆಯ ದಿನ ಅದ್ಧೂರಿ ಪ್ರದರ್ಶನ ಕಂಡಿತು.
ನಾಸಿಕ್ : ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಾಟ್‌ನಲ್ಲಿ 2025ರ ಅಕ್ಟೋಬರ್‌ನಲ್ಲಿ ಸಂಚಲನ ಸೃಷ್ಟಿಸಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣವೇ…
ಕೋಲಾರ : ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಭಾರತದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಫೈನಲ್ ಅಸೆಂಬ್ಲಿ ಲೈನ್ (FAL)…
ಮೈಸೂರು : ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಕೊಳ್ಳುವ ಮೂಲಕ ಕೃಷಿಯನ್ನು ಉಜ್ವಲಗೊಳಿಸಬಹುದು ಎಂದು ಮಂಡ್ಯ ಕೃಷಿ ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ…
ಹಂಪಿ : ಇಲ್ಲಿಗೆ ಸಮೀಪದ ಸಾಣಾಪುರ ಕೆರೆ ಬಳಿ ಕಳೆದ ವರ್ಷ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಂಗಾವತಿಯ…
ಜೈಪುರ : ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಭಾರೀ ಬೆಂಕಿ ಅವಘಡದಿಂದಾಗಿ 7 ಕಾರ್ಮಿಕರು ಸಜೀವ ದಹನಗೊಂಡಿದ್ದು, ಇನ್ನೂ ಹಲವರು ಸಿಲುಕಿರುವ…
ಮೈಸೂರು : ಪಕ್ಷ ಸಂಘಟನೆಗಾಗಿ ಯುವ ಜಾ.ದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಫೆ.18 ರಿಂದ ಫೆ.24ರ ವರೆಗೆ ಮೈಸೂರು…