ಮೈಸೂರು : ನಗರದ ಕ್ರಾಫರ್ಡ್ ಹಾಲ್ ನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕೇಂದ್ರೀಯ ಭಾಷಾ ಸಂಸ್ಥಾನದ ಕೆಲಸಕ್ಕೆ ನಾನು ಮೈಸೂರಿಗೆ ಬಂದಾಗ ಜಿ.ಹೇಮಂತ್ ಕುಮಾರ್ ಪರಿಚಯ ಆಯಿತು. ನಾನು ಮೂಲತ ತಲಕಾಡಿನವನು. ಮೈಸೂರಿಗೆ ಅದರದೇ ವಿಶಿಷ್ಟತೆ ಇದೆ. ಇದು ನನ್ನ ಊರು. ಇದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಹೇಮಂತ್ ಕುಮಾರ್ ಸದಾ ಯೋಚಿಸುತ್ತಾರೆ. ಮೈಸೂರಿನ ಬಗ್ಗೆ ಅವರಿಗೆ ಅಪಾರ ಪ್ರೀತಿ ಅಕ್ಕರೆ. ಮೈಸೂರು ವಿವಿಗೆ ಸಮರ್ಥ ಆಡಳಿತ ಮತ್ತು ಶೈಕ್ಷಣಿಕ ವ್ಯವಸ್ಥೆ ಕಟ್ಟಿಕೊಟ್ಟಿದ್ದಾರೆ. ತಮ್ಮ ನಗುಮೊಗ, ಸ್ನೇಹ ಹೃದಯ ಹಾಗೂ ಶಿಸ್ತಿನಿಂದಲೇ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ನುಡಿದರು.
ಯಾರಾದರೂ ಸಚಿವರ ಜೊತೆ ಓಡಾಡುತ್ತಿದ್ದರೆ ಅದು ವೈಯಕ್ತಿಕ ಕೆಲಸಕ್ಕೆ ಆಗಿರುವುದಿಲ್ಲ. ವಿವಿಗೆ ಬೇಕಾದ ಕೆಲಸ ಮಾಡುವ ಸಲುವಾಗಿ ಸದಾ ಬೆಂಗಳೂರಿಗೆ ಹೇಮಂತ್ ಕುಮಾರ್ ಓಡಾಡುತ್ತಿದ್ದರು. ವಿವಿಗೆ ಬೇಕಾದ ಎಲ್ಲಾ ಸಂಗತಿಗಳ ಬಗ್ಗೆ ಸದಾ ಯೋಚಿಸುತ್ತಿದ್ದರು. ಇಷ್ಟೆಲ್ಲಾ ಕೆಲಸ ಮಾಡಿದರೂ ಹೇಮಂತ್ ಕುಮಾರ್ ಅವರಿಗೆ ಯಾವುದೇ ಹಮ್ಮು ಬಿಮ್ಮುಗಳಿಲ್ಲ.ಅವರ ಕೆಲಸ ಹೀಗೆ ನಿರಂತರವಾಗಿರಲಿ ಎಂದು ಆಶಿಸಿದರು.
ಕೊರೊನಾ ಸಮಯದಲ್ಲಿ ಅವರು ಸಾಕಷ್ಟು ಕೆಲಸ ಮಾಡಿದರು. ಮೈಸೂರು ವಿವಿಗೆ ತನ್ನದೇ ಆದ ಪರಂಪರೆ ಇತ್ತು. ಅದಕ್ಕೆ ಎಲ್ಲೂ ಧಕ್ಕೆ ಬಾರದಂತೆ ಕೆಲಸ ನಿರ್ವಹಿಸಿದ್ದಾರೆ.ನಿಜಕ್ಕೂ ಹೇಮಂತ ಕುಮಾರ್ ಅವರು ಇಡೀ ವಿವಿಯನ್ನು ಕುಟುಂಬದಂತೆ ನೋಡಿಕೊಂಡರು.ಮಾತೃ ಹೃದಯಿಯಂತೆ ಎಲ್ಲರನ್ನೂ ಸಲಹಿದರು. ಜೊತೆಗೆ ಅವರ ಜೀವನ ಬೆಂಕಿಯಲ್ಲಿ ಅರಳಿದ ಹೂವಿನಂತೆ.ನಮ್ಮಿಬ್ಬರಿಗೂ ಏನೋ ಒಂದು ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು.
ನಂತರ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, 30 ವರ್ಷ ಮೀರಿದ ಸಂಬಂಧ ನನ್ನದು ಹಾಗೂ ಹೇಮಂತ್ ಕುಮಾರ್ ಅವರದು. ಒಂದೆರಡು ಮಾತುಗಳಲ್ಲಿ ಅದನ್ನು ಹೇಳಲು ಆಗುವುದಿಲ್ಲ. ನಿಕಟವರ್ತಿಯಾಗಿ ನಾವಿಬ್ಬರು ಕೆಲಸ ಮಾಡಿದ್ದೇವೆ. ಅಣ್ಣನಂತೆ ನನ್ನನ್ನು ಸಲಹಿದ್ದಾರೆ. ವಿದೇಶಕ್ಕೂ ಒಟ್ಟಿಗೆ ಹೋಗಿದ್ದೇವೆ. ಜೊತೆಗೆ ಕೆಲಸ ಮಾಡಿದ್ದೇವೆ. ಹೇಮಂತ ಕುಮಾರ್ ಒರ್ವ ದೈವ ಭಕ್ತ. ಕುಲಪತಿ ಆಗಿ ಕೆಲಸ ಮಾಡುವುದು ಕಷ್ಟ. ಒಳ್ಳೆಯ ಕೆಲಸ ಮಾಡುವುದೇ ಕಷ್ಟವಾಗಿದೆ. ಬರುವ ಪೈಲ್ ಗೆ [ಕಡತ]ಸುಮ್ಮನೆ ಸಹಿ ಮಾಡಿದರೆ ನಾವು ಒಳ್ಳೆಯವರು ಎಂದರು
ವಿಜ್ಞಾನ ತಂತ್ರಜ್ಞಾನ ಇದ್ದರೆ ಈ ದೇಶ ಹಾಗೂ ಜಗತ್ತು. ಆದರೆ, ಯಾರೂ ಕೂಡ ಇದಕ್ಕೆ ಒತ್ತು ನೀಡುತ್ತಿಲ್ಲ. ವಿಜ್ಞಾನ ಕ್ಕೆ ಪೋತ್ಸಾಹ ನೀಡುವ ಕುಲಪತಿಗಳು ಇಂದು ಬೇಕಿದೆ. ಆದರಿಂದ ಕುಲಪತಿಗಳು ಕೆಲಸ ಮಾಡಲು ಬಿಡದೆ ತೊಂದರೆ ಕೊಡುವವರು ಹೆಚ್ಚಾಗಿದ್ದಾರೆ. ಇಂತವರು ಸ್ವಾರ್ಥ ಸಾಧನೆ ಇಟ್ಟುಕೊಂಡು ಯಾರೂ ಕೂಡ ವಿವಿಗೆ ಬರಬಾರದು. ಹೇಮಂತ ಕುಮಾರ್ ಕುಲಪತಿಗಳಾಗಿ ತಮ್ಮದೇ ಆದ ಕೆಲಸ ಮಾಡಿದ್ದಾರೆ. ರಂಗಪ್ಪ ಹೇಳಿದರೆ ಹೇಮಂತ ಕುಮಾರ್ ಸಹಿ ಮಾಡುತ್ತಾರೆ ಎಂಬುದೆಲ್ಲಾ ಸುಳ್ಳು. ಅವರ ಆಡಳಿತಾತ್ಮಕ ಕೆಲಸಕ್ಕೆ ನಾನೆಂದು ಅಡ್ಡಿಪಡಿಸಿಲ್ಲ. ಇದು ಎಲ್ಲಾ ಕುಲಪತಿಗಳ ಮೇಲೆ ಇಂತಹ ಆರೋಪ ಸಹಜ ಎಂದರು.
ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರೊ.ಎಸ್.ಎನ್.ಹೆಗ್ಡೆ, ಪ್ರೊ.ಎನ್.ಎಸ್.ರಾಮೇಗೌಡ, ಪ್ರೊ.ಆರ್.ನಿರಂಜನ ಸೇರಿದಂತೆ ಇತರರು ಇದ್ದರು.
ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…
'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್‌ನಾಥ್‌ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…