ಮೈಸೂರು : ಭಾರೀ ಕುತೂಹಲಕ್ಕೆ ಕಾರಣವಾಗಿರುವ ಮೈಸೂರು-ಕೊಡಗು ಕ್ಷೇತ್ರಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆಯ ಮಾತುಗಳು ಕೇಳಿಬರುತ್ತಿರುವಂತೆಯೇ, ಈ ಕುರಿತು ಸೋಮವಾರ ರಾತ್ರಿ ದಿಢೀರ್ ಫೇಸ್ ಬುಕ್ ಲೈವ್ ನಲ್ಲಿ ಬಂದು ಭಾವುಕದ ಮಾತುಗಳನ್ನಾಡಿದ್ದಾರೆ.
ಹೌದು. ಅತ್ತ ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುತ್ತಿರುವ ಸಮಯದಲ್ಲಿಯೇ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಲೈವ್ ನಲ್ಲಿ ಕಾಣಿಸಿಕೊಂಡ ಪ್ರತಾಪ್ ಸಿಂಹ, ಮಾ. 11ರಂದು ಮೈಸೂರು – ಮನಮಧುರೈ ರೈಲಿಗೆ ಚಾಲನೆ ನೀಡಿದ್ದನ್ನು ಹೇಳಿದರು. ಸಂಸದನಾಗಿ ನನ್ನ ಮೊದಲ ಅವಧಿಯ ಕಡೆ ತಿಂಗಳಲ್ಲಿ ನಾನು ಮೈಸೂರು – ಕಾಚಿಗೂಡ ರೈಲು ತಂದಿದ್ದೆ. ಎರಡನೇ ಅವಧಿಯ ಕಡೆಯ ಹಂತದಲ್ಲಿ ಮೈಸೂರು – ಮನಮಧುರೈ ರೈಲಿಗೆ ಫ್ಲಾಗ್ ಆಫ್ ಮಾಡಿದ್ದೇನೆ ಎಂದು ತಿಳಿಸಿದರು.
ಮೈಸೂರಲ್ಲಿ ರಾಜಕಾರಣ ಮಾಡುವುದು ತುಂಬಾ ಕಷ್ಟ. ರಾಜರ ಊರು ಅಂದಮೇಲೆ ಚಾಡಿಕೋರರು, ಹೊಗಳುಭಟ್ಟರು ಎಲ್ಲರೂ ಇರುತ್ತಾರೆ. ಸಿದ್ದಾಂತ ಬೇರೂರುವುದು ಬಹಳ ಕಷ್ಟ. 1989ರಿಂದ ಮೈಸೂರಿನಲ್ಲಿ ಸತತವಾಗಿ ಎರಡನೇ ಸಲ ಯಾರನ್ನೂ ಗೆಲ್ಲಿಸಿಲ್ಲ. ಜನ ನನ್ನನ್ನು ಗೆಲ್ಲಿಸಿದ್ದಾರೆ. ಜನರಿಗೆ ಅವರ ಮನೆ ಬಾಗಿಲು ಕಾಯುವವರು ಬೇಕು. ಜನರು ಹೋಗಿ ಬಾಗಿಲು ಕಾಯುವರು ಅವರಿಗೆ ಬೇಡ. ಮೈಸೂರಿನಲ್ಲಿ ಎರಡು ಬಾರಿ ರಾಜವಂಶಸ್ಥರನ್ನು ಸೋಲಿಸಿದ್ದಾರೆ. ಆದರೆ 40 ವರ್ಷಗಳಲ್ಲಿ ನಾನೊಬ್ಬನನ್ನು ಮಾತ್ರ ಸತತ ಎರಡು ಬಾರಿ ಗೆಲ್ಲಿಸಿದ್ದಾರೆ. ನನ್ನ ಟಿಕೆಟ್ ಬಗ್ಗೆ ಚಾಮುಂಡೇಶ್ವರಿ ನಿರ್ಧಾರ ಮಾಡುತ್ತಾಳೆ. ಆ ತಾಯಿಗೆ ಬಿಟ್ಟಿದ್ದೇನೆ. ಟಿಕೆಟ್ ನನಗೆ ಕೊಟ್ಟರೆ ನಾನು 3 ಲಕ್ಷ ಅಂತರದಿಂದ ಗೆಲ್ಲುತ್ತೇನೆ. ಕಾರ್ಯಕರ್ತರು ನನ್ನ ಪರ ನಿಂತಿದ್ದಾರೆ ಎಂದು ತಿಳಿಸಿದರು.
ರಾಜಕೀಯದಲ್ಲಿ ದ್ವೇಷ ಅಸೂಯೇ ಸಹಜ ನನ್ನ ಕೆಲಸ ನೋಡಿ ಜನ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲಕ್ಕೆ ನಿಂತಿದ್ದಾರೆ ಸಾಕು. ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟಿದ್ದೀರಿ. 28 ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಎಂಪಿ ಪರವಾಗಿ ಜನ ನಿಂತಿಲ್ಲ. ನನ್ನ ಪರವಾಗಿ ನಿಂತಿದ್ದಾರೆ. ದೇಶಕ್ಕೆ ಮೋದಿ ಹೇಗೆ ಬೇಕೋ ಹಾಗೇ ಆಯಾ ಕ್ಷೇತ್ರಕ್ಕೆ ಒಬ್ಬೊಬ್ಬ ಛೋಟಾ ಮೋದಿ ಬೇಕು ಅಂತಾ ಬಯಸುತ್ತಾರೆ. ದೇವರು ಆಶೀರ್ವಾದ ಇದ್ದರೆ ಮೂರನೇ ಬಾರಿಗೆ ನಿಮ್ಮ ಸೇವೆ ಮಾಡುತ್ತೇನೆ. ಕೊಡಗಿಗೆ ಎರಡು ಅವಧಿಯಲ್ಲಿ ಸ್ವಲ್ಪ ಕಡಿಮೆ ಕೆಲಸ ಮಾಡಿದ್ದೆ. ಕೊಡಗಿನ ಋಣ ತೀರಿಸಬೇಕಿದೆ. ಆ ಕೆಲಸವನ್ನು ಮೂರನೇ ಬಾರಿಯ ಅವಧಿಯಲ್ಲಿ ಮಾಡುತ್ತೇನೆ. ಮೈಸೂರಿಗೆ ಅತಿ ಹೆಚ್ಚಿನ ಕೆಲಸ ಮಾಡಿರುವುದಾಗಿ ತಿಳಿಸಿದರು.
ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಹಿರಿಯ ಸಾಹಿತಿ ನಾ. ಡಿಸೋಜ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.…
ಮಂಡ್ಯ: ಸತ್ಯಹರಿಶ್ಚಂದ್ರನ ನಂತರ ಕುಮಾರಸ್ವಾಮಿಯೇ ಸತ್ಯವಂತ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಈ…
ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವೃತ್ತ ನಿರೀಕ್ಷಕರ ಕಚೇರಿಯನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ…
ದಾವಣಗೆರೆ: ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಹೈಕಮಾಂಡ್ ತೀರ್ಮಾನವೇ…
ಮಂಡ್ಯ: ವ್ಯಕ್ತಿಯೋರ್ವ ವಿಚಾರಣೆಗೆಂದು ಬಂದು ಎಎಸ್‌ಐ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ನಾಗಮಂಗಲ ಗ್ರಾಮಾಂತರ…
ರಾಮನಗರ: ರಾಜ್ಯ ಸರ್ಕಾರ 4 ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಿಳ ಮಾಡಿದೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ…