ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ದಸರಾ ಗಜಪಡೆಯ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಚಿನ್ನದ ಅಂಬಾರಿ ಹೊರುವ ಮಹತ್ವದ ಜವಾಬ್ದಾರಿ ಯಾವ ಆನೆಗೆ ಸಿಗಲಿದೆ ಎಂಬ ಚರ್ಚೆಗೂ ಇದೀಗ ತೆರೆಬಿದ್ದಿದೆ. ಈ ಬಾರಿ ಪ್ರಶಾಂತ ಆನೆ ಗಜಪಡೆಯ ನೇತೃತ್ವ ವಹಿಸಲಿದ್ದಾನೆ.
ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರಲಿರುವ ಪ್ರಶಾಂತನತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ನಾಡದೇವತೆ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಹೊತ್ತ ಚಿನ್ನದ ಅಂಬಾರಿಯೊಂದಿಗೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವ ಪ್ರಶಾಂತನನ್ನು ಕಣ್ತುಂಬಿಕೊಳ್ಳಲು ದಸರಾ ಪ್ರೇಮಿಗಳು ಕಾತುರರಾಗಿದ್ದಾರೆ.
ಅಂಬಾರಿ ಹೊರುವುದು ಕೇವಲ ಬಲದ ಪರೀಕ್ಷೆಯಲ್ಲ. ಜನಸಾಗರ, ವಾದ್ಯಗಳ ಸದ್ದು ಹಾಗೂ ಮೆರವಣಿಗೆಯ ನಡುವೆ ಶಾಂತವಾಗಿ, ಸಮತೋಲನದಿಂದ ಸಾಗುವ ಮಹತ್ವದ ಜವಾಬ್ದಾರಿಯೂ ಹೌದು. ಹೀಗಾಗಿ ಗಜಪಡೆಯ ಕ್ಯಾಪ್ಟನ್ ಪಾತ್ರಕ್ಕೆ ವಿಶೇಷ ಮಹತ್ವವಿದೆ.
ಅಭಿಮನ್ಯುವಿನ ಬಳಿಕ ಈ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಪ್ರಶಾಂತನಿಗೆ ಇದು ಹೊಸ ಅಧ್ಯಾಯ. ಮೈಸೂರು ದಸರೆಯ ವೈಭವಕ್ಕೆ ಸಾಕ್ಷಿಯಾಗುವ ಜಂಬೂಸವಾರಿಯಲ್ಲಿ ಪ್ರಶಾಂತನ ಮೊದಲ ಅಂಬಾರಿ ಪಯಣ ಈಗ ಪ್ರಮುಖ ಆಕರ್ಷಣೆಯಾಗಲಿದೆ!
ಮೈಸೂರು: “ಸ್ಟೇ ತಗೋಬಾರದಿತ್ತು, ಧೈರ್ಯವಾಗಿ ಫೈಟ್ ಮಾಡಬೇಕಿತ್ತು!” ವಿವಾದಿತ ಸ್ಟಿಂಗ್ ಕಾರ್ಯಾಚರಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಡೆ ಕುರಿತು ಮಾಜಿ…
ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್ ತನ್ನ ಕೈಯಲ್ಲಿದ್ದ ಸಿಗರೇಟ್ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು " ನಾನು…
ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ ರೇಣುಕಾಸ್ವಾಮಿಗೆ ಬೀಳುತ್ತಿದ್ದ…
ತುಂಬಾ ಜನರಿಗೆ ಮೆಸೇಜ್ಗಳನ್ನು ಕಳುಹಿಸಿದ್ದ ರೇಣುಕಾಸ್ವಾಮಿ Sex-mania ವ್ಯಕ್ತಿಯಂತೆ ಕಾಣುತ್ತಿದ್ದ. ಆನಂತರ ದರ್ಶನ್ ಅವರು ಪವನ್ ಹತ್ತಿರ ಇದ್ದ ರೇಣುಕಾಸ್ವಾಮಿಯ…
ರೇಣುಕಾಸ್ವಾಮಿಗೆ ಬೈಗುಳದೊಂದಿಗೆ ಏಟು ಕೊಡುತ್ತಿದ್ದ ದರ್ಶನ್ ಕಾರಿನಿಂದ ಇಳಿಯುತ್ತಲೇ ನರಪೇತಲನಿಗೆ ಒದ್ದ ವಿನಯ್ ನಂತರ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್…
ನೆತ್ತಿ,ಕೈ ಬೆರಳುಗಳಿಂದ ಸೋರುತ್ತಿದ್ದ ರಕ್ತ, ಬೆಳಿಗ್ಗೆಯಿಂದ ಸಂಜೆಯವರೆಗೂ ಬಿದ್ದಿತ್ತು ಹೊಡೆತ ದರ್ಶನ್ಗಿದ್ದ ಸಿಟ್ಟನ್ನು ಸಾರಿ ಹೇಳುತ್ತಿದ್ದವು ರೇಣುಕಾಸ್ವಾಮಿಯ ಮೈಮೇಲಿನ ಬಾಸುಂಡೆ…