ಮೈಸೂರು: ನಗರದ ಕೆಲವೆಡೆ ವಿದ್ಯುತ್ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕಾಂ ತಿಳಿಸಿದೆ.
ಜೂ.02 ರಂದು ಬೆಳಿಗ್ಗೆ 10 ಗಂಟೆಯಿoದ ಸಂಜೆ 5:30 ಗಂಟೆಯವರೆಗೆ ಕಡಕೊಳ ವಿದ್ಯುತ್ ಸ್ವೀಕರಣಾ ಕೇಂದ್ರ ಮತ್ತು ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ 1ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕಡಕೊಳ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು: ಕಡಕೊಳ, ಬ್ಯಾತಹಳ್ಳಿ, ದಡದಹಳ್ಳಿ, ಸಿಂಧುವಳ್ಳಿ, ದೊಡ್ಡಕಾನ್ಯ, ಚಿಕ್ಕ ಕಾನ್ಯ, ಕೂಡನಹಳ್ಳಿ, ಕೋಚನಹಳ್ಳಿ, ಮರಸೆ, ಮಾಕನಹುಂಡಿ, ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾ, ವಿಮಾನ ನಿಲ್ದಾಣ, ಬಿರೇಗೌಡನಹುಂಡಿ, ಕೆ.ಎಂ. ಹುಂಡಿ, ಬಿ.ಜಿ. ಹುಂಡಿ, ಕೆ.ಎನ್. ಹುಂಡಿ, ಆಯರಹಳ್ಳಿ, ಕಿರಾಳು, ದೂರ, ಮುರುಡಗಳ್ಳಿ, ತಳೂರು, ಡಿ. ಕಾಟೂರು, ಟಿ.ವಿ.ಎಸ್. ಫ್ಯಾಕ್ಟರಿ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ಎಫ್.ಟಿ.ಎಸ್ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು: ಸುಭಾಷ್‌ನಗರ, ಕೆಸರೆ 1ನೇ, 2ನೇ ಹಾಗೂ 3ನೇ ಹಂತ, ನ.ರಾ ಮೊಹಲ್ಲಾ, ಗಾಂಧಿನಗರ, ಮೊಹಮ್ಮದ್ ಸೇಠ್ ಬ್ಲಾಕ್, ವೀರನಗೆರೆ, ಉದಯಗಿರಿ, ಬನ್ನಿಮಂಟಪ, ನೆಲ್ಸನ್ ಮಂಡೇಲಾ ರಸ್ತೆ, ಎಲ್.ಐ.ಸಿ, ಹೈವೆ ವೃತ್ತ, ತಿಲಕ್‌ನಗರ, ಉಮ್ಮರ್ ಖಾಯಂ ರಸ್ತೆ, ನ್ಯೂ ಸಯ್ಯಾಜಿ ರಾವ್ ರಸ್ತೆ, ರಾಜೇಂದ್ರನಗರ, ಮೇದರ್ ಬ್ಲಾಕ್, ಬಂಬೂ ಬಜಾರ್, ಲಯನ್ಸ್ ಕ್ಲಬ್, ಫರೂಕೀ ಡೆಂಟಲ್ ಕಾಲೇಜು, ಜೈಲ್ ವಸತಿ ಗೃಹ, ಐ.ಟಿ.ಐ ಕಾಲೇಜು, ಭಾವನಾ ಮಾರ್ಬಲ್ ರಸ್ತೆ, ‘ಎ’ ಬಡಾವಣೆ, ಬಿ.ಬಿ ಕೇರಿ, ಬಿ.ಟಿ ಮಿಲ್ ರಸ್ತೆ, ಈದ್ಗ ಮೈದಾನ, ಕಬೀರ್ ಮಠ, ಆನೆಗುಂದಿ ರಸ್ತೆ, ಹನುಮಂತನಗರ, ಕೆ.ಎಸ್.ಆರ್.ಟಿ.ಸಿ, ಎಸ್.ಎಸ್ ನಗರ, ಕಾವೇರಿ ನಗರ, ಸಿದ್ದಿಖಿ ನಗರ, ಬನ್ನಿಮಂಟಪ ‘ಸಿ’ ಬಡಾವಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ನ.ರಾ.ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…
ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…
ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…