ಮೈಸೂರು

ಮೈಸೂರಿನ ಈ ಪ್ರದೇಶಗಳಲ್ಲಿ ಡಿ.19 ಹಾಗೂ 20 ರಂದು ವಿದ್ಯುತ್‌ ವ್ಯತ್ಯಯ

ಮೈಸೂರು: ಕೆ.ವಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.19ರಂದು ಮತ್ತು ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.20ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರ: ರಾವಾನುಜ ರಸ್ತೆ 1ರಿಂದ 9ನೇ ಕ್ರಾಸ್‌ವರೆಗೆ, ಹೊಸ ಬಂಡಿಕೇರಿ, ಜೆಎಸ್‌ಎಸ್ ಆಸ್ಪತ್ರೆ, ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರಂನ ಹಲವು ಭಾಗಗಳು, ತ್ಯಾಗರಾಜ ರಸ್ತೆ, ಚಾಮುಂಡಿಬೆಟ್ಟ ಮತ್ತು ಪಾದ, ಗುಂಡೂರಾವ್ ನಗರ, ದತ್ತ ನಗರ, ಮುನೇಶ್ವರ ನಗರ, ಗೌರಿಶಂಕರ ನಗರ, ನಂಜನಗೂಡು ಟೋಲ್‌ಗೇಟ್, ತಾವರೆಕೆರೆ, ಜಾಕಿ ಕ್ವಾರ್ಟಸ್, ರೇಸ್ ಕೋರ್ಸ್ ಹಿಂಭಾಗ, ಸಬರ್ಬ್ ಬಸ್ ನಿಲ್ದಾಣ, ನಜರ್‌ಬಾದ್, ಇಟ್ಟಿಗೆಗೂಡು, ಮೃಗಾಲುಂದ ಸುತ್ತಮುತ್ತ, ಸರ್ಕಾರಿ ಅತಿಥಿಗೃಹ, ತಾಲ್ಲೂಕು ಕಚೇರಿ, ಡಿ.ದೇವರಾಜ ಅರಸು ರಸ್ತೆ, ಚಾಮುಂಡಿಬೆಟ್ಟ, ಸಿದ್ದಾರ್ಥನಗರ, ಕುರುಬಾರಹಳ್ಳಿ, ಜೆ.ಸಿ.ನಗರ, ಕೆ.ಸಿ ನಗರ, ಜೆಎಸ್‌ಎಸ್ ಆುುಂರ್ವೇದಿಕ್ ಸುತ್ತಮುತ್ತ, ಅರಮನೆ ಸುತ್ತಮುತ್ತಲಿನ ಪ್ರದೇಶಗಳು, ಶ್ರೀಹರ್ಷ ರಸ್ತೆ, ಸ್ಂಯಾಜಿ ರಾವ್ ರಸ್ತೆ, ಇರ್ವೀನ್ ರಸ್ತೆ ಸುತ್ತಮುತ್ತಲಿನ ಪ್ರದೇಶಗಳು, ಧನ್ವಂತರಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತಮುತ್ತಲಿನ ಪ್ರದೇಶಗಳು.

ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರ: ಈ ವ್ಯಾಪ್ತಿಯ ಪ್ರದೇಶಗಳಾದ ದಟ್ಟಗಳ್ಳಿ 3ನೇ ಹಂತ, ತ್ರಿವೇಣಿ ಸೂಪರ್ ವಾರ್ಕೆಟ್ ಏರಿಾಂ, ಕದಂಬ ಬೇಕರಿ ಏರಿಾಂ, ದಟ್ಟಗಳ್ಳಿ ‘ಐ’ ಬ್ಲಾಕ್, ಮುಡಾ ಎಂಪ್ಲಾಯಿಸ್ ಲೇಔಟ್, ಆಂದೋಲನ ವೃತ್ತ, ಸಬ್ ರಿಜಿಸ್ಟ್ರಾರ್ ಆಫೀಸ್, ಕನಕದಾಸ ನಗರ, ಆದಿತ್ಯ ಸರ್ಕಲ್, ಸೋಮನಾಥ ನಗರ, ಮಹಾಲಕ್ಷ್ಮೀ ಬಡಾವಣೆ, ಕೇರ್ಗಳ್ಳಿ, ಕಲ್ಕಿ ಬಡಾವಣೆ, ನಂದಿ ಸರ್ಕಲ್ ದಟ್ಟಗಳ್ಳಿ, ಜೋಡಿ ಬೇವಿನಮರ, ರಾಮಕೃಷ್ಣನಗರ, ಆರ್.ಟಿ.ನಗರ, ಲಿಂಗಾಂಬುದಿಪಾಳ್ಯ, ಯುನಿವರ್ಸಿಟಿ ಲೇಔಟ್, ವಾಸು ಲೇಔಟ್, ಕೆ ಬ್ಲಾಕ್ ಆರ್ ಕೆ ನಗರ, ಮೂಗನಹುಂಡಿ, ನಗರ್ತಹಳ್ಳಿ, ದೇವಗಳ್ಳಿ, ಬಲ್ಲಳ್ಳಿ ಅನಗಳ್ಳಿ, ತಿಬ್ಬ್ಂಯುನಹುಂಡಿ, ಬೀರಿಹುಂಡಿ, ಹೆಲ್ತ್ ಸಿಟಿ, ಕಾರ್ತಿಕ ಬಡಾವಣೆ ಐ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಬಿಳಿಕೆರೆ | ಬಸ್‌ ಡಿಕ್ಕಿ; ವ್ಯಕ್ತಿ ಸಾವು

ಹುಣಸೂರು: ಜಮೀನಿನಲ್ಲಿ ವ್ಯವಸಾಯ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆ ದಾಟುವ ವೇಳೆ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟಿರುವ ಘಟನೆ…

6 hours ago

ಮಂಡ್ಯ ಸಮ್ಮೇಳನದಲ್ಲಿ ʻಆಡಳಿತದ ಅಂಗಳದಲ್ಲಿʼ ಪುಸ್ತಕ ಮಾರಾಟ : ಟಿ.ತಮ್ಮೇಗೌಡ

ಮಂಡ್ಯ:  ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ನಾನು ಹಲವು ಪುಸ್ತಕಗಳನ್ನು ರಚಿಸಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ…

6 hours ago

1 ಕೋಟಿ ರೂ. ವೆಚ್ಚದಲ್ಲಿ ಕಲಾಮಂದಿರ ನವೀಕರಣ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಹಲವಾರು ವರ್ಷಗಳಿಂದ ದುರಸ್ಥಿಯಾಗಬೇಕಿದ್ದ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ನವೀಕರಣ ಕಾಮಗಾರಿಯನ್ನು ಒಟ್ಟು 1.08 ಕೋಟಿ…

7 hours ago

ಸಾಹಿತ್ಯ ಸಮ್ಮೇಳನ | ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ವಿರೋಧಿಸಿ ಸಮ್ಮೇಳನಕ್ಕಾಗಮಿಸುವ ಅತಿಥಿಗಳಿಗೆ ಬಾಡೂಟ ಬಡಿಸಲು ಮನೆಗೊಂದು ಕೋಡಿ, ಊರಿಗೊಂದು ಕುರಿ ಸಂಗ್ರಹ…

7 hours ago

ಮಂಡ್ಯ ಸಮ್ಮೇಳನ | ಸಮ್ಮೇಳನಕ್ಕೆ ಆಗಮಿಸುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ; ಸಚಿವ ಚಲುವರಾಯಸ್ವಾಮಿ

ಮಂಡ್ಯ: ಜಿಲ್ಲೆಯ ನಾನಾ ಭಾಗಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು…

7 hours ago

ಮಂಡ್ಯ ಸಮ್ಮೇಳನ | ಶಾಲಾ, ಕಾಲೇಜುಗಳಿಗೆ ಎರಡು ದಿನ ರಜೆ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ನಡೆಯುತ್ತಿರುವ  87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ…

8 hours ago