ಮೈಸೂರು ; ಕೇಂದ್ರಿಯ ಬಸ್ ನಿಲ್ದಾಣ ಹಾಗೂ ಎಚ್ ಡಿ ಕೋಟೆ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಈಗ ದುಸ್ಥಿತಿಯಲ್ಲಿರುವ ತಡೆ-ರಹಿತ ನಾಮಫಲಕವಿರುವ ಬಸ್ ಗಳದ್ದೇ ಸದ್ದು..! ಎಲ್ಲಿ ನೋಡಿದರೂ ನಿಲ್ದಾಣದಲ್ಲಿ ಕೆಲವೊಂದು ತಡೆರಹಿತ ಬಸ್ ಗಳೇ ಕಾಣಸಿಗುತ್ತವೆ. ಗಾಜು ಒಡೆದ ಬಾಗಿಲು, ಮುರಿದ ಮತ್ತು ತುಕ್ಕು ಹಿಡಿದ ಕಂಬಿಗಳು, ತಡೆ-ರಹಿತ ನಾಮಫಲಕದ ಡಕೋಟಾ ಬಸ್ ಗಳಲ್ಲಿ ಸಂಚರಿಸಲು ಜನ ಭಯ ಪಡುತ್ತಿದ್ದಾರೆ. ತಡೆ-ರಹಿತ ನಾಮಫಲಕದ ಹದಗೆಟ್ಟಿರುವ ಬಸ್ ಗಳನ್ನು ಹತ್ತಿದರೆ ತಮ್ಮ ಸ್ಥಳಗಳಿಗೆ ತಲುಪುವ ಗ್ಯಾರಂಟಿ ಇಲ್ಲಾ. ಎಲ್ಲೆಂದರಲ್ಲಿ ಕೆಟ್ಟು ನಿಂತು ಬೇರೆ ಬಸ್ ಗಳಿಗಾಗಿ ಕಾಯುವ ಪರಿಸ್ಥಿತಿ ಪ್ರಯಾಣಿಕರಿಗೆ ಸರ್ವೆ ಸಾಮಾನ್ಯವಾಗಿದೆ.
ಮೈಸೂರಿನಿಂದ ಎಚ್ ಡಿ ಕೋಟೆ ಗೆ ತೆರಳುವ ಬಸ್ ಗಳು ನಿಧಾನವಾಗಿ ಬರುತ್ತವೆ. ಕಾರಣವೆಂದರೆ ಬಸ್ ಗಳ ಸಲಕರಣೆ ಸಮಸ್ಯೆಯೋ..! ಅಥವಾ ಡಿಪೋದಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಕೆಲವು ಮೆಕ್ಯಾನಿಕ್ ಗಳ ಸಮಸ್ಯೆಯೋ..! ಅಥವಾ ಬಸ್ ಸಮಸ್ಯೆ ಆದಾಗ ಸರಿಪಡಿಸುವುದಕ್ಕೆ ಬೇಕಾದಂತಹ ಸಲಕರಣೆಗಳು ಇಲ್ಲದೇ ಕೆಲಸ ನಿರ್ವಹಿಸಲು ಅಸಾದ್ಯವೋ..! ಇದಿಷ್ಟು ಕಾರಣಗಳಲ್ಲಿ ಯಾವುದು ಎಂಬುದು ಪ್ರಯಾಣಿಕ ವಲಯದಲ್ಲಿ ಸಾಕಷ್ಟು ಗೊಂದಲಕ್ಕೀಡಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಈ ಬಸ್ ಗಳೆಲ್ಲಾ ಓಡಾಟಕ್ಕೆ ಅರ್ಹವಾಗಿದ್ದರಿಂದ ಓಡಿಸಲಾಗುತ್ತದೆ. ಎಚ್ ಡಿ ಕೋಟೆ ವ್ಯಾಪ್ತಿಗೆ ಸುಸಜ್ಜಿತವಾದ ಬಸ್ ಗಳನ್ನು ಸದ್ಯದಲ್ಲೇ ನೀಡಲಾಗುತ್ತದೆ.. ಆದರೆ ಕಳೆದ ತಿಂಗಳು ಸುರಿದ ಮಳೆಯಿಂದ ರಸ್ತೆಗಳು ಸಾಕಷ್ಟು ಹಾಳಾಗಿದ್ದರಿಂದ ಬಸ್ ಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಹೊಸ ಬಸ್ ತರಲಾಗಿಲ್ಲ ಎನ್ನುತ್ತಾರೆ.ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಸ್ತುತ ವರ್ಷದ ಮಳೆಯಿಂದ ರಸ್ತೆಗಳು ಬಹಳಷ್ಟು ಹಾಳಾಗಿವೆ. ಮಳೆಯಿಂದ ಕೆಟ್ಟಿರುವ ರಸ್ತೆಗಳ ದುರಸ್ತಿ ಮಾಡಿದರೆ ಸರಿಯಾದ ಸಮಯಕ್ಕೆ ಸುರಕ್ಷಿತವಾಗಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬಹುದು.ಎನ್ನುತ್ತಾರೆ ಅಧಿಕಾರಿಗಳು
ಹಾಗಾಗಿ ಇನ್ನು ಮುಂದೆ ಆದರು ಸಂಬಂಧಪಟ್ಟ ಅಧಿಕಾರಿಗಳು ಸುಸಜ್ಜಿತವಾದ ಬಸ್ ಗೆ ತಡೆರಹಿತ ನಾಮಫಲಕ ಹಾಕಿ ಬಸ್ ಸಂಚರಿಸಲು ವ್ಯವಸ್ಥೆ ಮಾಡುತ್ತಾರೋ ಅಥವಾ ಸಮಸ್ಯೆ ಅರಿತು ಕಣ್ಮುಚ್ಚಿ ಮೌನವಹಿಸುತ್ತಾರೋ ಕಾದು ನೋಡಬೇಕಿದೆ.
ವಿಶ್ವಾಸ್ ,ಪ್ರಯಾಣಿಕ
ಎಚ್ ಡಿ ಕೋಟೆಯಿಂದ ಮೈಸೂರಿಗೆ ಕೆಲಸದ ನಿಮಿತ್ತ ಸರಿಯಾದ ಸಮಯಕ್ಕೆ ತಲುಪುತ್ತೇವೆಂಬ ಭರವಸೆಯಿಂದ ತಡೆತಹಿತ ಬಸ್ ಹತ್ತಿದರು ಬಸ್ ನ ಅವ್ಯವಸ್ಥೆಯಿಂದ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ವಿಷಯ ಕುರಿತು ಸಂಬಂದಪಟ್ಟ ಅಧಿಕಾರಿಗಳು ಸಮಸ್ಯೆ ತಿಳಿದು ತಿಳಿದೇಯೋ ಮೌನ ವಹಿಸಿರುವುದು ಸಾಕಷ್ಟು ಗೊಂದಲವಾಗಿದೆ. ಇತ್ತೀಚೆಗೆ ಬಂದಂತಹ ಮೈಸೂರು ವಿಭಾಗೀಯ ನಿಯಂತ್ರಣಧಿಕಾರಿ ಅಶೋಕ್ ಅವರ ಕಾರ್ಯ ಪ್ರವೃತ್ತಿ ಸಾಕಷ್ಟು ಮೆಚ್ಚುಗೆ ಪಡುವಂತದ್ದು ಆದರೆ ನಮ್ಮ ಭಾಗದಲ್ಲಿ ತಡೆ ರಹಿತ ಬಸ್ ಸಮಸ್ಯೆ ಬಗ್ಗೆ ಮೌನ ವಹಿಸಿರುವುದು ಮನಸ್ಸಿಗೆ ನೋವುಂಟಾಗಿದೆ, ಹಾಗಾಗಿ ಸಂಬಂಧಪಟ್ಟ ನಿಯಂತ್ರಣಧಿಕಾರಿ ಗಮನಹರಿಸಿ ಸಮಸ್ಯೆಗೆ ಪರಿಹಾರ ನೀಡುತ್ತಾರೆಂಬ ನಂಬಿಕೆ ಇಟ್ಟಿದ್ದೇವೆ.
ಹೆಸರೇಳಲಿಚ್ಛಿಸದ ಚಾಲಕ
ನಾವು ಸಾರ್ವಜನಿಕರಿಗೆ ಉತ್ತಮವಾದ ಸರ್ವೀಸ್ ನೀಡುತ್ತಿದ್ದೆವೆ ಜೊತೆಗೆ ನಮಗೆ ನಮ್ಮ ಅಧಿಕಾರಿಗಳ ಸಹಕಾರ ತುಂಬ ಇದೆ.ಆದರೆ ಬಸ್ಸಿನ ಸಮಸ್ಯೆ ಕುರಿತು ಹೇಳಿದ್ದು ಸರಿಮಾಡೋಣ ಅದನ್ನೇ ಓಡಿಸಿ ಅಂತ ಹೇಳುತ್ತಾರೆ. ಅಧಿಕಾರಿಗಳಿಗೆ ನಾವು ಕೇಳಿದರೆ ಡಿಪೋ ಬದಲಾವಣೆ ಮಾಡುತ್ತಾರೆಂಬ ಭಯದಿಂದ ಇರುವ ಬಸ್ ಗಳನ್ನೇ ಓಡಿಸುತ್ತಿದ್ದೇವೆ. ಡಿಪೋದಿಂದ ಕೊಟ್ಟಿರುವ ಬಸ್ ಗಳು ಸಂಚರಿಸಲು ಸರಿಯಾಗಿಯೇ ಇದೆ ಆದರೆ ಬಸ್ ಒಳಗಡೆ ಇರುವ ಸಲಕರಣೆಗಳು ತೀರಾ ಹದಗೆಟ್ಟಿದ್ದು ಅದರ ಶಬ್ಧಕ್ಕೆ ಬಸ್ ನಲ್ಲಿರುವ ಪ್ರಯಾಣಿಕರು ಮನಬಂದಂತೆ ಗೊಣಗುತ್ತಿದ್ದರೆ, ಇನ್ನು ಕೆಲವರು ನಮ್ಮ ಮೇಲೆ ಗಲಾಟೆ ಕೂಡ ಮಾಡಿದ್ದಾರೆ
ಡಿ. 25ರ ಗುರುವಾರ ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟ ಸಂಭವಿಸಿದ್ದು, ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ…
‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ…
ಮಹಿಳೆಯರು, ಮಕ್ಕಳ ಸಬಲೀಕರಣವೇ ಸಂಸ್ಥೆಯ ಧ್ಯೇಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಸಂಸ್ಥೆಗಳು ವಿರಳ. ಅಂತಹ ವಿರಳಾತೀತ ವಿರಳ…
ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…
ಗಿರೀಶ್ ಹುಣಸೂರು ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…
ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…