ಮೈಸೂರು: ಜೆ.ಪಿ.ನಗರದಲ್ಲಿರುವ ಹಿಂದೂಸ್ಥಾನ್ ಕಾಲೇಜು ಟ್ರೈನಿಂಗ್ ಅಂಡ್ ಪ್ಲೇಸ್‌ಮೆಂಟ್ ಸೆಲ್ ಹಾಗೂ ವಿವಿಧ ಸಂಸ್ಥೆಗಳಿಂದ ಮೇ೧೭ ರಂದು ಬೆಳಿಗ್ಗೆ ೯.೩೦ಕ್ಕೆ ಪೂಲ್ ಕ್ಯಾಂಪಸ್ ಪ್ಲೇಸ್‌ಮೆಂಟ್ ಡ್ರೈವ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ವಾಣಿಜ್ಯಶಾಶ್ತ್ರ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ವಿ. ಈಶ್ವರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಬಿ.ಕಾಂ. ಬಿಸಿಎ ಹಾಗೂ ಬಿಬಿಎ ಪದವಿ ಕೋರ್ಸ್‌ಗಳನ್ನು ಹೊಂದಿದ್ದು, ಪ್ರವೇಶಾತಿ ಪ್ರಾರಂಭವಾಗಿದೆ. ಇದೇ ಶುಕ್ರವಾರ ನಡೆಯುವ ಕಾರ್ಯಕ್ರಮಕ್ಕೆ ಪ್ರತಿಷ್ಠಿತ ಸಂಸ್ಥೆಗಳಾದ ಈಕ್ವಲೈಜ್ ಆರ್‌ಸಿಎಂ, ಕ್ರಿಯಾ ನೆಕ್ಸ್ಟ್ ವೆಲ್ತ್, ಟಿವಿಎಸ್ ಟ್ರೈನಿಂಗ್ ಅಂಡ್ ಸರ್ವಿಸಸ್, ಎಎಟಿ, ಜಸ್ಟ್ ಡಯಲ್, ರ್ಯಾಂಕ್ ನುಕ್, ಸೋರ್ಸ್ ಹಬ್, ಪ್ಲಾನ್ ಸೀ, ಮುತ್ತೂಟ್ ಫೈನಾನ್ಸ್ ಗ್ಲೋಟಚ್ ಮೊದಲ್ದಾ ಕಂಪನಿಗಳು ನಮ್ಮೊಡನೆ ಭಾಗವಹಿಸಲಿವೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ೨೦೧೮-೨೦೨೩ ರೊಳಗೆ ತೇರ್ಗಡೆಯಾಗಿರುವ ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಅಂತಿಮ ಪದವಿಯಲ್ಲಿ ವ್ಯಾಸಂಗಮಾಡುತ್ತಿರುವ, ಸ್ನಾತಕ, ಸ್ನಾತಕೋತ್ತರ ಹಾಗೂ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಪ್ರಾಧ್ಯನತೆಯನ್ನು ನೀಡಿದೆ. ಈ ಕಾರ್ಯಕ್ರಮಕ್ಕೆ ಭಾಗವಹಿಸಲು ವಿದ್ಯಾರ್ಥಿಗಳಿಗೆ ಉಚಿತ ನೋದಂಣಿಗೆ ಅವಕಾಶವಿರುತ್ತದೆ. ಭಾಗವಹಿಸಲು ಇಚ್ಛಿಸುವಂತಹ ವಿದ್ಯಾರ್ಥಿಗಳು ಸ್ವ-ವಿವರ ಪ್ರತಿ, ಆಧಾರ್ ಕಾರ್ಡ್ ,ಫೋಟೋ ಹಾಗೂ ಅಂಕಗಳ ಪಟ್ಟಿಗಳ ಪ್ರತಿಯನ್ನು ತರಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿಂದೂಸ್ಥಾನ್ ಕಾಲೇಜಿನ ವಿಶೇಷಾಧಿಕಾರಿ ಎಬೆಲ್ ಮ್ಯಾಥ್ಯು, ಕನ್ನಡ ವಿಭಾಗದ ಪ್ರಾಧ್ಯಪಕ ಚಂದ್ರಮೋಹನ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಎಸ್.ವಿನಂತಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಬೆಳಗಾವಿ : ರೈತರ ಅನುಕೂಲಕ್ಕಾಗಿ ಜಮೀನುಗಳಲ್ಲಿ ಬೆಳೆದ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಡಿಪಿಎಆರ್ ಇಲಾಖಾ ವತಿಯಿಂದ ಅಭಿವೃದ್ಧಿ ಪಡಿಸಿರುವ ಜಿ.ಪಿ.ಎಸ್…
ಬೆಳಗಾವಿ : ರಾಜ್ಯದಲ್ಲಿ ಎಲ್ಲಾ ವರ್ಗದ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆ ಮೂಲಕ ಸಹಾಯಧನದಡಿಯಲ್ಲಿ ಒದಗಿಸಲಾಗುತ್ತಿದೆ ಎಂದು…
ನಂಜನಗೂಡು : ರಾಜ್ಯಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟಕ್ಕೆ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಕೆರೆಯ ಸಮೀಪವಿರುವ ರೈತ ಕೆಂಪಯ್ಯ ಅವರ ತೋಟದ ಬಳಿ ಮಂಗಳವಾರ ಹುಲಿ ಕಾಣಿಸಿಕೊಂಡಿದ್ದು,…
ಮೈಸೂರು : ಎಲ್ಲರಿಗೂ ಸಮಾನ ಅವಕಾಶ, ಸಮಾನ ಹಕ್ಕುಗಳನ್ನು ಒದಗಿಸಿರುವ ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡರೆ ಮಾತ್ರ ಕೋಮು…
ಬೆಂಗಳೂರು : ಗೃಹಲಕ್ಷ್ಮಿ ಯೋಜನೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಚಿವರು 1.20…