ಮೈಸೂರು

ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ತತ್ವಜ್ಞಾನಿ ದಿನಾಚರಣೆ

ಮೈಸೂರು : ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ
ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ತತ್ವಜ್ಞಾನಿ ದಿನಾಚರಣೆ ಆಚರಿಸಲಾಯಿತು.

ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕರಾದ ಟಿಎಸ್. ಶ್ರೀವತ್ಸ ರವರು , ಶಂಕರಾಚಾರ್ಯರು 1236 ವರ್ಷಗಳ ಹಿಂದೆಯೇ ಜನಿಸಿ ಹಿಂದೂ ಧರ್ಮದ ಉಳಿವಿಗಾಗಿ ಭಾರತವನ್ನ ಕಾಲ್ನಡಿಗೆಯಲ್ಲಿ 3ಬಾರಿ ಪರ್ಯಟನೆ ಮಾಡಿ 4ಪೀಠಗಳನ್ನ ಸ್ಥಾಪಿಸಿದ್ದಾರೆ, ಹಿಂದೂ ಧರ್ಮವನ್ನ ಪುನರತ್ಥಾನಗೊಳಿಸಿದ ಶಂಕರರು ಸಹಸ್ರಾಮಾನದ ಹಿಂದೆಯೇ ಸಾಮಾಜಿಕ ಸಾಮರಸ್ಯ ಸಂದೇಶ ಸಾರಿದ ರಾಮಾನುಜರು ಇಬ್ಬರು ಮಹನೀಯರ ಧ್ಯೇಯ ಸಿದ್ದಾಂತಗಳು ಹಿಂದೂ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಧಾರ್ಮಿಕ, ಆಧ್ಯಾತ್ಮಿಕವಲ್ಲದೇ ಸಾಂಸ್ಕೃತಿಕ ಹಾಗೂ ವೈಜ್ಞಾನಿಕವಾಗಿಯೂ ಹಲವಾರು ಕೊಡುಗೆಗಳನ್ನ ನೀಡಿದ್ದಾರೆ. ಈ ಎಲ್ಲಾ ಹನ್ನಲೆಯಿಂದಲೇ  ಪ್ರಧಾನಿ ನರೇಂದ್ರ ಮೋದಿರವರು ಶಂಕರ ಜಯಂತಿಯನ್ನ ವಿಶ್ವ ತತ್ವಜ್ಞಾನಿ ದಿನಾಚರಣೆ ಎಂದು ಘೋಷಿಸಿದರು.

ಬಿಜೆಪಿ ನಗರಾಧ್ಯಕ್ಷರಾದ ಎಲ್. ನಾಗೇಂದ್ರ ಮಾತನಾಡಿ, ಶಂಕರಾಚಾರ್ಯರು ಕೇವಲ 32ವರ್ಷಗಳಿದ್ದರೂ ಸಹ ಅವರು ಹಿಂದೂ ಧರ್ಮವನ್ನು ದೇಶದೆಲ್ಲಡೆ ಪ್ರಜ್ವಲಿಸಿದರು. ಇಂದಿಗೂ‌ ಸಹ ಶಂಕರ ತತ್ವಗಳು‌ ಯುವ ಮನಸ್ಸುಗಳನ್ನ ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದರು.

ಮಾಜಿ.ಮೈಲಾಕ್ ಅಧ್ಯಕ್ಷ ಎನ್ ವಿ ಪನೀಶ್, ಮಾಜಿ ಮಹಾಪೌರರಾದ ಶಿವಕುಮಾರ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಎಚ್‌ ಜಿ ಗಿರಿಧರ್, ಕೇಬಲ್ ಮಹೇಶ್, ಗೋಪಾಲ್ ರಾವ್, ನಗರ ಉಪಾಧ್ಯಕ್ಷ ಜೋಗಿ ಮಂಜು, ಮಾಜಿನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್,ಬಿ.ವಿ.ಮಂಜುನಾಥ ಚಾಮುಂಡೇಶ್ವರಿ ಕ್ಷೇತ್ರದ ನಗರ ಅಧ್ಯಕ್ಷರಾದ ರಾಕೇಶ್ ಭಟ್, ಚಾಮುಂಡೇಶ್ವರಿ ಕ್ಷೇತ್ರದ ಮಂಡಲ ಅಧ್ಯಕ್ಷ ಪೈ. ಟಿ. ರವಿ,ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ಎಸ್ಸಿ ಮೊರ್ಚಾ ಅಧ್ಯಕ್ಷ ಶೈಲೇಂದ್ರ, ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಮೂಡ ಮಾಜಿ ಸದಸ್ಯ ನವೀನ್ ಕುಮಾರ್, ಜಗದೀಶ್, ಎಂ ಆರ್ ಬಾಲಕೃಷ್ಣ, ಹಾಗೂ ಇನ್ನಿತರ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ಮದ್ದೂರು ಬಳಿಯ ವಳೆಗೆರೆಹಳ್ಳಿಯಲ್ಲಿ ಮಳೆರಾಯನಿಗಾಗಿ ಪೂಜೆ

ಮದ್ದೂರು: ಹುಯ್ಯೋ ಹುಯ್ಯೋ ಮಳೆರಾಯ ತೆಂಗಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ, ಬಾರಪ್ಪ ಮಳೆರಾಯ…

11 hours ago

ಸಮರ್ಥವಾಗಿ ಕಾರ್ಯನಿರ್ವಹಿಸದ ಸಚಿವರನ್ನು ಬದಲಾಯಿಸಿ: ಶಾಸಕ ರವಿಕುಮಾರ್‌ ಗಣಿಗ

ಮಂಡ್ಯ: ಹಲವು ಶಾಸಕರು ಸಚಿವರಾಗುವ ಆಸೆ ಹೊಂದಿದ್ದು, ಮೂರು-ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ.…

11 hours ago

ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು

ಮಡಿಕೇರಿ: ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್‌ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ…

11 hours ago

ಹಾಸನ: ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ ಮಗಳ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ…

11 hours ago

ಶಿವಮೊಗ್ಗ: ಪಶುವೈದ್ಯೆ ಕೊಂದಿದ್ದ ನೀರಾನೆಗೆ ಬಹು ಅಂಗಾಂಗ ವೈಫಲ್ಯ

ಶಿವಮೊಗ್ಗ: ತ್ಯಾವರಕೊಪ್ಪದ ಮೃಗಾಲಯದಲ್ಲಿ ಪಶುವೈದ್ಯೆ ಸಮೀಕ್ಷಾ ಅವರ ಮೇಲೆ ದಾಳಿ ಮಾಡಿ ಕೊಂದಿದ್ದ ನೀರಾನೆ ಹಂಸಿನಿಯ ಮರಿ ಗರ್ಭದಲ್ಲೇ ಸಾವನ್ನಪ್ಪಿದೆ.…

11 hours ago

ಪಾಕ್‌ ಜನತೆಗೆ ಮತ್ತೊಂದು ಶಾಕ್:‌ ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

ಇಸ್ಲಾಮಾಬಾದ್:‌ ಇಂಧನ ಬೆಲೆ ಏರಿಕೆ ನಂತರ ಪಾಕಿಸ್ತಾನ ಈಗ ವಿದ್ಯುತ್‌ ದರವನ್ನು ದುಪ್ಪಟ್ಟು ಹೆಚ್ಚಿಸಿದೆ. ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯ…

11 hours ago