ಮೈಸೂರು : 2023ರ ಚುನಾವಣೆಯಲ್ಲಿ ಸಮುದ್ರಕ್ಕೆ ವಿರುದ್ಧವಾಗಿ ಈಜಿದಂತೆ ಎಂದು ನನಗೆ ಗೊತ್ತು. ಆದರೆ ನನ್ನವರೆಂಬ ಜನ ಎಂದೂ ನನ್ನ ಪರ ಇದ್ದೇ ಇರುತ್ತಾರೆ. ಕೈಬಿಡುವುದಿಲ್ಲಎಂಬ ಬದ್ಧತೆಯೊಂದಿಗೆ ರಾಜಕೀಯ ಮಾಡುತ್ತಿರುವುದಾಗಿ ಶಾಸಕ ಸಾ.ರಾ.ಮಹೇಶ್ ಹೇಳಿದರು.
ಮೈಸೂರಿನ ಕೃಷ್ಣರಾಜ ಪಟ್ಟಣದ ಸಾಯಿ ಸಭಾಂಗಣದಲ್ಲಿ ನಡೆದ ಜಾತ್ಯಾತೀತ ದಳ ಬೆಂಬಲಿತ ಕುರುಬ ಸಮಾಜದ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದಲ್ಲಿ ನನ್ನ 15 ವರ್ಷದ ರಾಜಕಾರಣದಲ್ಲಿ ಅಭಿವೃದ್ಧಿ ವಿಚಾರವಿರಲಿ, ನನ್ನ ವೈಯುಕ್ತಿಕ ಕೊಡುಗೆ ನೀಡುವ ವಿಚಾರವಿರಲಿ ಯಾವುದೇ ಸಂದರ್ಭದಲ್ಲಿ ಜಾತಿ, ರಾಜಕೀಯ ಮಾಡಿಲ್ಲ ಎಂದ ಶಾಸಕರು, ರಾಜಕಾರಣ ಎಂಬುದು ಬೇರೆಯವರ ಬದುಕು ಕಟ್ಟಿಕೊಡಲು ಮಾಡಬೇಕೆ ವಿನಃ ರಾಜಕಾರಣಿಗಳು ತಮ್ಮ ಬದುಕು ಕಟ್ಟಿಕೊಳ್ಳುವುದಿಲ್ಲ.
ನನ್ನ ಅವಧಿಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊರೊನಾ ಇದ್ದ ಕಾರಣ ಸರಕಾರದಿಂದ ಸಮರ್ಪಕವಾಗಿ ಅನುದಾನ ಬಾರದ ಕಾರಣ ಕೆಲವೆಡೆ ಅಭಿವೃದ್ಧಿ ಕೆಲಸ ಮಾಡಲಾಗಿಲ್ಲ. ಕೆಲವರು ಅದನ್ನೇ ದೊಡ್ಡದು ಮಾಡಿ ನನ್ನನ್ನು ಜಾತಿ ಮಾಡುತ್ತಾರೆ ಎಂದು ದೂರುತ್ತಾರೆ. ಆದರೆ, ನಾನು ಜಾತಿವಾದಿಯೋ ಅಲ್ಲವೋ ಎಂಬುದು ತಾಲೂಕಿನ ಜನತೆಗೆ ತಿಳಿದಿದೆ ಎಂದರು.
ಎಂ ಎಲ್ ಸಿ ಸಿ.ಎನ್.ಮಂಜೇಗೌಡ ಮಾತನಾಡಿ, ತಾಲೂಕಿನ ಜನತೆ ಜಾತಿ ರಾಜಕೀಯವನ್ನು ಬದಿಗಿಟ್ಟು ಅಭಿವೃದ್ದಿ ಹರಿಕಾರ ಎನಿಸಿದ ಸಾ.ರಾ.ಮಹೇಶ್‌ರನ್ನು ಬೆಂಬಲಿಸುವಂತೆ ಹೇಳಿದರು.
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…