ಮೈಸೂರು : ರಾಜಕಾರಣಿಯಾಗಿ ಪ್ರತಾಪ್ ಸಿಂಹ ಬಗ್ಗೆ ‘ಎಸ್’ ಅನ್ನೋಣ ಆದರೆ ಮನುಷ್ಯತ್ವದ ನಡವಳಿಕೆಯ ವಿಚಾರದಲ್ಲಿ ಪ್ರತಾಪ್ ಸಿಂಹ ಅವರನ್ನು ‘ನೋ’ ಎಂದು ಹೇಳಬೇಕಾಗುತ್ತದೆ ಎಂದು ಹೆಚ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ರಾಜಕಾರಿಣಿಗಳು ನೂರಕ್ಕೆ ನೂರು ಕೆಲಸ ಮಾಡಿ, ಜನರಿಗೆ ವಿರೋಧಿ ಎಂದು ಕಂಡಾಗ ಜನರ ಅಭಿಪ್ರಾಯ ಬೇರೆ ಆಗುತ್ತೆ ಎಂದರು.
ಪ್ರತಾಪ್ ಸಿಂಹ ಅವರು ಯಾವುದೇ ಪಕ್ಷದವರಾಗಿರಲಿ, ಒಬ್ಬ ರಾಜಕಾರಣಿಯಾಗಿ ಅವರು ಮಾಡಬೇಕಾದ ಕೆಲಸಗಳನ್ನು ಮಾಡಿದ್ದಾರೆ ಅದರಲ್ಲಿ ಎರಡನೆ ಮಾತಿಲ್ಲ. ಆದರೆ ಮನುಷ್ಯತ್ವದ ವಿಚಾರಕ್ಕೆ ಬಂದಾಗ ಅವರನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಅರಮನೆಯಿಂದ ಬಂದವರ್ಯಾರೂ ಗೆದ್ದಿಲ್ಲ : ಯದುವೀರ್ ಅವರನ್ನು ಬಿಜೆಪಿ ಅಭ್ಯರ್ಥಿ ಮಾಡುವ ವಿಚಾರ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ಅರಮನೆಯಿಂದ ಬಂದವರು ಯಾರೂ ಗೆದ್ದಿಲ್ಲ. ೧೯೭೦ರಲ್ಲಿ ಕಾಂಗ್ರೆಸ್ ಸರ್ಕಾರ ರಾಜ ಮನೆತನ ಸಾಮಾನ್ಯ ಮನೆತನದಂತೆ ಇಟ್ಟರು ಇಂದಿರಾ ಗಾಂಧಿ. ಕಾಂಗ್ರೆಸ್‌ನಿಂದ ಶ್ರೀಕಂಠದತ್ತ ನರ್ಸಿಂಹರಾಜ ಒಡೆಯರ್ ಎರಡು ಬಾರಿ ಗೆದ್ದಿದ್ದರು. ಆದರೆ ಬಿಜೆಪಿಯಿಂದ ಸೋತರು. ಬಿಜೆಪಿಗೆ ಹೋಗಿದ್ದನ್ನೆ ಜನರು ಬಹಳ ನೆಗೆಟಿವ್ ಆಗಿ ತೆಗೆದುಕೊಂಡಿದ್ದರು.
ಮಹಾರಾಜರು ವಿಕಾಸ ವಾದಿಗಳು, ಮಾನವತವಾದಿಳು , ಅದಕ್ಕೆ ವಿರುದ್ಧವಾದ ಪಕ್ಷಕ್ಕೆ ಅರಮನೆಯವರು ಹೋಗಿದ್ದನ್ನು ಜನರು ಮಾನ್ಯ ಮಾಡಲಿಲ್ಲ. ಈಗಲೂ ಅಷ್ಟು ಸುಲಭ ಇಲ್ಲ ಎಂದು ಹೆಚ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಲಕ್ಷಾಂತರ ರೂ. ಫಸಲು ನಾಶವಾಗುತ್ತಿದೆ ಎಂದು ರೈತರ ಅಳಲು; ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಆಗ್ರಹ ಹನೂರು: ತಾಲ್ಲೂಕಿನ ಕಾವೇರಿ…
ಹನೂರು: ಉಡುತೊರೆ ಹಳ್ಳ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಲು ನಿರ್ಮಾಣ ಮಾಡಿದ್ದ ಸಣ್ಣ ಸಣ್ಣ ಕಾಲುವೆಗಳನ್ನು ಮುಚ್ಚಿ ಜಮೀನು…
ಗಿರೀಶ್ ಹುಣಸೂರು ಜ್ವರ, ಶೀತ, ಕೆಮ್ಮು ಕಾಯಿಲೆಗಳ ಭೀತಿ; ಆಸ್ಪತ್ರೆಗಳಿಗೆ ಎಡತಾಕುವ ಪರಿಸ್ಥಿತಿ ಮೈಸೂರು: ರಾಜ್ಯದಲ್ಲಿ ತಾಪಮಾನ ಕುಸಿತದಿಂದಾಗಿ ಚಳಿಯ…
ಎಸ್.ಎಸ್.ಭಟ್ ನಂಜನಗೂಡು: ಭಾನುವಾರ ನಿಧನರಾದ ಆಧುನಿಕ ದಾವಣಗೆರೆಯ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಅವರಿಗೂ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ…
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…