ಮೈಸೂರು

ಪೇಪರ್ ಸುಬ್ಬಣ್ಣ ಇನ್ನಿಲ್ಲ

ಮೈಸೂರು : ಅದೊಂದು ರಸ್ತೆ ಬದಿಯಲ್ಲೇ ಸೃಷ್ಟಿಯಾಗಿದ್ದ ತೆರೆದ ಸುದ್ದಿಮನೆ! ಅಲ್ಲಿ ಕ್ಷಣಕಾಲ ನಿಂತರೆ ಲೋಕದ ಪ್ರಚಲಿತ ವಿದ್ಯಮಾನಗಳು ಗಮನಕ್ಕೆ ಬರುತ್ತಿತ್ತು. ನಗರದ ಹೃದಯ ಭಾಗ ಲ್ಯಾನ್ಸ್‌ಡೌನ್ ಕಟ್ಟಡದ ಮಳಿಗೆಯಲ್ಲಿ ಮೂರ್ನಾಲ್ಕು ದಶಕಗಳ ಕಾಲ ಜಗತ್ತಿನ ಬಹುತೇಕ ಸುದ್ದಿ ಪತ್ರಿಕೆಗಳನ್ನು ಮಾರುವ ಕಾಯಕವನ್ನೇ ತಪ್ಪಸ್ಸಿನಂತೆ 70 ವರ್ಷಗಳಿಗೂ ಹೆಚ್ಚು ಕಾಲ ನಡೆಸಿಕೊಂಡು ಬರುವ ಮೂಲಕ ಎಂ.ಆರ್.ಸುಬ್ರಹ್ಮಣ್ಯ (87), ಪೇಪರ್ ಸುಬ್ಬಣ್ಣ ಎಂದೇ ಹೆಸರಾಗಿದ್ದರು.

ಬಾಲಕನಾಗಿದ್ದಾಗಲೇ ಮೈಸೂರಿಗೆ ಬಂದು ಪತ್ರಿಕಾ ಮಾರಾಟದ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಸುಬ್ಬಣ್ಣ ಅವರು, ಲ್ಯಾನ್ಸ್‌ಡೌನ್ ಕಟ್ಟಡ ಕುಸಿದು ಬಿದ್ದಾಗಲೂ ತನ್ನ ಕಾಯಕ ನಿಷ್ಠೆಯನ್ನು ಮರೆಯಲಿಲ್ಲ. ಬದಲಿಗೆ ಜಗನ್ಮೋಹನ ಅರಮನೆ ರಸ್ತೆ ಬದಿಯಲ್ಲೇ ಪತ್ರಿಕೆಗಳ ಮಾರಾಟವನ್ನು ಮುಂದುವರಿಸಿದರು. ತನ್ನ ಕೊನೆಯ ದಿನದ ವರೆಗೂ ಅವರು ತನ್ನ ಕಾಯಕವನ್ನು ಮರೆಯಲಿಲ್ಲ. ಮಳೆ-ಬಿಸಿಲೆನ್ನದೇ ಜಗನ್ಮೋಹನ ಅರಮನೆ ರಸ್ತೆಯ ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಪಾರ್ಶ್ವದಲ್ಲಿ ಪತ್ರಿಕೆಗಳನ್ನು ಹರಡಿಕೊಂಡು ಗ್ರಾಹಕರನ್ನು ನಿರೀಕ್ಷಿಸುತ್ತಾ ಕುಳಿತಿರುತ್ತಿದ್ದ ದೃಶ್ಯಆ ರಸ್ತೆಯಲ್ಲಿ ಸಾಗಿದವರಿಗೆ ಕಣ್ಣಿಗೆ ಕಟ್ಟಿದಂತಿದೆ. ಹೀಗೆ ಪತ್ರಿಕೆಗಳನ್ನು ಹರಡಿಕೊಂಡು ಕುಳಿತ ಸುಬ್ಬಣ್ಣ, ಪತ್ರಿಕೆ ಮಾರಾಟ ಮಾಡಿ ಹಣ ಏಣಿಸಿಕೊಂಡು ಹೋದವರಲ್ಲ. ಮೈಸೂರು ನಗರದಲ್ಲಿ ಪತ್ರಕರ್ತರ ಭವನ ಆರಂಭವಾಗುವುದಕ್ಕೂ ಮುನ್ನ ಸುಬ್ಬಣ್ಣನವರ ಪತ್ರಿಕಾ ಮಾರಾಟ ಮಳಿಗೆಯೇ ಸುದ್ದಿಗಳ ವಿನಿಮಯ, ಪತ್ರಕರ್ತರ ಚರ್ಚೆಯ ತಾಣವೂ ಆಗಿತ್ತು. ಹೀಗಾಗಿಯೇ ಮೈಸೂರಿನಲ್ಲಿ ಪತ್ರಿಕಾ ವೃತ್ತಿ ಆರಂಭಿಸಿ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಿರಿಯ ಪತ್ರಕರ್ತರಾಗಿ ಬೆಳೆದಿರುವವರೆಲ್ಲ ಮೈಸೂರಿಗೆ ಬಂದರೆ ಇಂದಿಗೂ ಸುಬ್ಬಣ್ಣ ಅವರನ್ನು ಮಾತನಾಡಿಸದೆ ಹೋಗುತ್ತಿರಲಿಲ್ಲ.

ಶನಿವಾರ ಮುಂಜಾನೆ ನಿಧನರಾದ ಎಂ.ಆರ್.ಸುಬ್ರಹ್ಮಣ್ಯ (೮೭) ಅವರ ಪಾರ್ಥೀವ ಶರೀರವನ್ನು ಚೆಲುವಾಂಬ ಅಗ್ರಹಾರದ ಅವರ ಮನೆುಂಲ್ಲಿ ಮಧ್ಯಾಹ್ನ ೨ ಗಂಟೆುಂವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿೆುಂ ನಡೆಸಲಾಯಿತು.
ಮೃತರು ಒಬ್ಬ ಪುತ್ರ, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುಬ್ಬಣ್ಣನವರ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಪತ್ರಿಕಾ ವಿತರಕರ ಸಂಘ, ಪತ್ರಿಕಾ ವಿತರಕರ ಕ್ಷೇವಾಭಿವೃದ್ಧಿ ಸಂಘ ಹಾಗೂ ಪತ್ರಿಕಾ ಏಜೆಂಟರ ಸಂಘಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.

andolanait

Recent Posts

ಓದುಗರ ಪತ್ರ:  ದೇವಾಲಯಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸಿ

ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…

15 mins ago

ನಂಜನಗೂಡು | ಚಲಿಸುತ್ತಿದ್ದ ಬಸ್‌ ಬೆಂಕಿಗಾಹುತಿ ; 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು

ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…

18 mins ago

ಓದುಗರ ಪತ್ರ: ನಂಜನಗೂಡಿನಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…

21 mins ago

ಓದುಗರ ಪತ್ರ: ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಆಟೋ ಸಂಚಾರ ನಿಯಂತ್ರಿಸಿ

ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…

53 mins ago

ಶತಾಯುಷಿ ಸುತಾರ್ ವಿಧಿವಶ ; ದೇಶ-ವಿದೇಶ ನಾಯಕರ ಪ್ರತಿಮೆ ಕೆತ್ತಿದ್ದ ಹೆಗ್ಗಳಿಕೆ

ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್‌ ಸುತಾರ್‌ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…

56 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಸದ್ದು ಮಾಡುತ್ತಿರುವ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ

ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…

1 hour ago