ಮೈಸೂರು: ವ್ಯಕ್ತಿಯೊಬ್ಬರಿಗೆ ಪಾನ್ ಕಾರ್ಡ್ ಅಪ್ಡೇಟ್ ನೆಪದಲ್ಲಿ ೩.೨೧ ಲಕ್ಷ ರೂ. ವಂಚಿಸಲಾಗಿದೆ.
ಬೋಗಾದಿ ಎರಡನೇ ನಿವಾಸಿ ಡಾ.ಆರ್.ಎಲ್. ಚಿಲಕವಾಡ್ ಹಣ ಕಳೆದುಕೊಂಡವರು. ಪಾನ್ ಕಾರ್ಡ್ ಅಪ್ಡೇಟ್ ಮಾಡುವುದಾಗಿ ಲಿಂಕ್ ಕಳುಹಿಸಿ, ಅದನ್ನು ಒತ್ತಿದ ವೇಳೆ ಬ್ಯಾಂಕ್ ಖಾತೆಯಿಂದ ೩.೨೧ ಲಕ್ಷ ರೂ. ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ. ಭಾನುವಾರ ಸಂಜೆ ವೇಳೆ ಕಳುಹಿಸಿದ ಲಿಂಕ್ ಒತ್ತಿದ ವೇಳೆ ಎಸ್‌ಬಿಐ ಬ್ಯಾಂಕ್ ಯೋನೋ ಆ್ಯಪ್‌ನಲ್ಲಿ ಪಾಸ್ ವರ್ಡ್ ಹಂಚಿಕೊಂಡಿದ್ದು, ನಂತರ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಗೆ ವಂಚನೆ
ಮೈಸೂರು: ಮನೆಯನ್ನು ಲೀಸ್ ಹಾಕಿಕೊಡುವುದಾಗಿ ಇಲ್ಲಿನ ಗೌಸಿಯಾ ನಗರದ ಮಹಿಳೆಯೊಬ್ಬರಿಗೆ ವಂಚನೆ ಎಸಗಿದ್ದು, ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ಯಲಹಂಕದ ಮೂವರು ವ್ಯಕ್ತಿಗಳು ದುಡ್ಡು ತೆಗೆದುಕೊಂಡು, ಹಿಂತಿರುಗಿಸಿಲ್ಲ. ಹಣ ಕೇಳಿದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…